
algolist: 0;
multi-frame: 0;
brp_mask:0;
brp_del_th:null;
brp_del_sen:null;
motionR: null;
delta:null;
bokeh:0;
module: photo;hw-remosaic: false;touch: (-1.0, -1.0);sceneMode: 9961472;cct_value: 0;AI_Scene: (-1, -1);aec_lux: 146.0;aec_lux_index: 0;albedo: ;confidence: ;motionLevel: 0;weatherinfo: weather?null, icon:null, weatherInfo:100;temperature: 47;
ಕೊಡಿಗೇನಹಳ್ಳಿ: ಶಾಲೆ ಮುಗಿಸಿ ಈಜಾಡಲು ಹೋದ ಯುವಕ ಈಜು ಬಾರದೆ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ತಾಲೂಕಿನ ಕೊಡಿಗೇನಹಳ್ಳಿ ಸರ್ವೋದಯ ಪ್ರೌಢ ಶಾಲೆಯಲ್ಲಿ ಎಂಟನೇ ತರಗತಿ ಓದುತಿದ್ದ ರಂಗನಹಳ್ಳಿ ಗ್ರಾಮ ಹರ್ಷವರ್ಧನ್ (14) ಡ್ರಾಯಿಂಗ್ ಕ್ಲಾಸ್ ಮುಗಿಸಿ ಹುಡುಗರ ಜತೆ ಕೊಡಿಗೇನಹಳ್ಳಿಯ ಜಯಮಂಗಲಿ ನದಿಯಲ್ಲಿ ಈಜಾಡಲು ಹೋಗಿದ್ದು ಈಜು ಬಾರದೆ ನೀರಲ್ಲಿ ಸಿಲುಕಿ ಮೃತಪಟ್ಟಿದ್ದಾನೆ.
ಮೃತನ ಕೊಡಿಗೇನಹಳ್ಳಿ ದೇವರಾಜು ಅರಸು ಹಿಂದುಳಿದ ವಸತಿ ನಿಲಯದಲ್ಲಿ ಊಟ ಮಾಡಿ ಶಾಲೆಗೆ ತೆರಳಿದ್ದು ಶಾಲೆಯಲ್ಲಿ 2 ಗಂಟೆಗೆ ಕ್ಲಾಸ್ ಮುಗಿಸಿ ಈಜಾಡಲು ತೆರಳಿದ್ದು ಈಜು ಬಾರದೆ ನೀರಲ್ಲಿ ಮುಳುಗಿದ್ದ ವೇಳೆ ಕುರಿಗಾಹಿಗಳು ಬ್ಯಾಗ್ ನಲ್ಲಿದ್ದ ಆಧಾರ್ ಕಾರ್ಡ್ ಕಂಡು ಪೋಷಕರಿಗೆ ವಿಷಯ ಮುಟ್ಟಿಸಿದ್ದಾರೆ, ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು ಸ್ಥಳಕ್ಕೆ ಕೊಡಿಗೇನಹಳ್ಳಿ ಪೊಲೀಸರು ಭೇಟಿ ನೀಡಿ ಮೃತ ಶವವನ್ನು ಮಧುಗಿರಿ ಶವಗಾರಕ್ಕೆ ರವಾನಿಸಿದ್ದು ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.