ಕುಣಿಗಲ್: ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ವಿವಾಹವಾಗಿ ಅಕ್ರಮ ಬಂಧರದಲ್ಲಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಕಿಯ ತಾಯಿ ನೀಡಿದ ದೂರಿನ ಮೇಲೆ ಕುಣಿಗಲ್ ಪೊಲೀಸರು ಬಾಲ್ಯ ವಿವಾಹ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
ರಾಮೇನಹಳ್ಳಿಯ ಅಪ್ರಾಪ್ತ ಬಾಲಕಿಯನ್ನು ತಾಲೂಕಿನ ನಾಗನಹಳ್ಳಿ ತಾಂಡ್ಯದ ಹಾಲಿ ಬೆಂಗಳೂರಿನ ಸುಂಕದಕಟ್ಟೆ ವಾಸಿ ಹೇಮಂತ್ ನಾಯಕ ಎಂಬುವರು ಬಲವಂತವಾಗಿ ಕರೆತಂದು, ಪಟ್ಟಣದ ಗ್ರಾಮ ದೇವತೆ ದೇವಾಲಯದ ಮುಂದೆ ವಿವಾಹವಾಗಿ ಬೆಂಗಳೂರಿನ ಸುಂಕದಕಟ್ಟೆಯ ಮನೆಯಲ್ಲಿ ಅಕ್ರಮವಾಗಿ ಇಟ್ಟಿದ್ದರು, ಅಪ್ರಾಪ್ತೆಯ ವಿವಾಹಕ್ಕೆ ಕಾರಣ ಹೇಮಂತ ನಾಯಕನ ತಂದೆ ರವಿನಾಯಕ, ತಾಯಿ ಲಕ್ಷ್ಮಿಬಾಯಿ ಕಾರಣ ಎಂದು ಆರೋಪಿಸಿ, ಬಾಲಕಿಯ ತಾಯಿ ನೀಡಿದ ದೂರಿನ ಮೇಲೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.