ಗುಬ್ಬಿ: ತಾಲೂಕಿನ ಸಿ.ಎಸ್.ಪುರ ಹೋಬಳಿಯ ಹುರುಳುಗೆರೆ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಸುರಿದ ಬಿರುಗಾಳಿ ಹಾಗೂ ಮಳೆಗೆ ನೂರಾರು ಅಡಿಕೆ ಮರಗಳು ತೆಂಗು, ಬಾಳೆ ಸಂಪೂರ್ಣವಾಗಿ ನಾಶವಾಗಿದೆ.
ಗ್ರಾಮದ ಸೋಮಶೇಖರ್, ಶ್ರೀಧರ್, ರಾಯಪ್ಪ ಕಿಟ್ಟಪ್ಪ, ಪ್ರಕಾಶ್ ಸೇರಿದಂತೆ ಇನ್ನೂ ಹಲವು ರೈತರ ತೋಟಗಳಲ್ಲಿ ಸಾಕಷ್ಟು ಗಿಡಗಳು ನಾಶವಾಗಿವೆ, ಇದೆ ಅಲ್ಲದೆ ವಿದ್ಯುತ್ ಕಂಬಗಳು, ಟಿಸಿ ಸೇರಿದಂತೆ ಹಲವು ರೀತಿಯ ಸಮಸ್ಯೆಗಳಾಗಿದ್ದು ಗ್ರಾಮಕ್ಕೂ ವಿದ್ಯುತ್ ನ ಸಮಸ್ಯೆ ಉಂಟಾಗಿದೆ.
ಇನ್ನು ಚಂದ್ರಶೇಖರಪುರದಲ್ಲಿಯೇ ವಿದ್ಯುತ್ ಕಂಬಗಳು, ಬೃಹತ್ ಮರ ಬಿದ್ದು, ಮನೆಗಳಿಗೆ ಹಾಕಿದಂತಹ ಹೆಂಚು, ಅಂಗಡಿಗಳ ಸೀಟುಗಳು ಹಾರಿ ಹೋಗಿದ್ದು ಸಾಕಷ್ಟು ಅನಾಹುತ ಸೃಷ್ಟಿಯಾಗಿದೆ
ಶೇಕಡ 33 ಕ್ಕಿಂತ ಹೆಚ್ಚು ಪಟ್ಟು ತೋಟಗಳಲ್ಲಿ ಗಿಡಗಳು ನಾಶವಾಗಿದ್ದು, ಅದಕ್ಕೆ ಸರಕಾರದಿಂದ ಪರಿಹಾರ ನೀಡುವ ಕೆಲಸವನ್ನ ಸರ್ಕಾರ ಮಾಡುತ್ತದೆ ಎಂದು ಕಂದಾಯ ಇಲಾಖೆ ಹಾಗೂ ತೋಟಗಾರಿಕೆಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ರೈತ ಸುನಿಲ್ ಕುಮಾರ್ ಮಾತನಾಡಿ, ಮಳೆ ಗಾಳಿ ಹೊಡೆತದಿಂದ ಅತ್ಯಧಿಕವಾಗಿ ನಷ್ಟವಾಗಿದ್ದು ಸರಕಾರ ಹೆಚ್ಚಿನ ರೀತಿಯಲ್ಲಿ ಪರಿಹಾರ ನೀಡಬೇಕು,ಕಷ್ಟಪಟ್ಟು ಬರೆದಿರುವ ಅಡಿಕೆ ತೆಂಗು, ಪ್ರಕೃತಿ ವಿಕೋಪಕ್ಕೆ ಬಲಿಯಾದಾಗ ರೈತರ ಪರವಾಗಿ ನಮ್ಮ ಸರಕಾರಗಳು, ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.