ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿ ಕಲ್ಲಯ್ಯನಪಾಳ್ಯ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ನಂತರ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮನೆಗಳು ಭಸ್ಮವಾಗಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.
ಕಲ್ಲಯ್ಯನಪಾಳ್ಯ ಗ್ರಾಮದ ಗಂಗಾಧರ ಮತ್ತು ಅವರಿಗೆ ಸೇರಿದ ಮತ್ತೊಂದು ಮನೆ ಹಾಗೂ ಸಾವಿತ್ರಮ್ಮ ಗುಡ್ಡಯ್ಯ, ರೂಪ ಮಂಜುನಾಥ್ ಎಂಬುವವರ ಮನೆಗೆ ಬೆಂಕಿ ತಗಲಿದೆ. ಗಂಗಾ‘ರ ಮನೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂ‘ವಿಸಿ ಅವರ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ವೋಟಗೊಂಡ ಹಿನ್ನಲೆಯಲ್ಲಿ ಅಟ್ಟದಲ್ಲಿ ಹಾಕಿದ್ದ ನಾಲ್ಕು ಸಾವಿರಕ್ಕೂ ಹೆಚ್ಚು ಕೊಬ್ಬರಿ, 80 ಗ್ರಾಂ ಚಿನ್ನ, 3.50 ಲಕ್ಷ ನಗದು ಹಣ, ರಾಗಿ, ಅಕ್ಕಿ, ದವಸ ಧಾನ್ಯಗಳು, ಮನೆಯ ಹಾಗೂ ಜಮೀನಿನ ದಾಖಾಲಾತಿ ಸೇರಿದಂತೆ ಲಕ್ಷಾಂತರ ರೂಪಾಯಿ ಬೆಂಕಿಗೆ ಆಹುತಿಯಾಗಿದೆ, ಮನೆಯ ಸದಸ್ಯರು ಕೂಲಿ ಕೆಲಸಕ್ಕೆ ಹೋಗಿರುವ ಸಂದ‘ರ್ದಲ್ಲಿ ಈ ಘಟನೆ ಸಂಬಂವಿಸಿದೆ, ಯಾವುದೇ ಪ್ರಾಣ ಹಾನಿ ಸಂಭಂವಿಸಿಲ್ಲ.
ಕಲ್ಲಯ್ಯನಪಾಳ್ಯ ಗ್ರಾಮದಲ್ಲಿ ಮನೆಗಳಿಗೆ ಬೆಂಕಿ ಹತ್ತಿಕೊಂಡ ಬಗ್ಗೆ ತಿಪಟೂರು ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ, ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣೆ ಸಿಬ್ಬಂದಿ ಹಾಗೂ ಬೆಂಕಿ ನಂದಿಸುವ ವಾಹನ ಸ್ಥಳಕ್ಕೆ ಬಂದರೂ ಐನೂರು ಲೀಟರ್ ನೀರು ಸಾಮರ್ಥ್ಯದ ವಾಹನವಾಗಿದ್ದರಿಂದ ಸಿಬ್ಬಂದಿ ಅಸಹಾಯಕರಾಗಿ ನಿಲ್ಲಬೇಕಾಯಿತು, ಆದರೆ ಗ್ರಾಮಸ್ಥರು ತಾಲ್ಲೂಕು ಆಡಳಿತಕ್ಕೆ ಹಿಡಿ ಶಾಪ ಹಾಕಿ ತಮ್ಮ ಮನೆಗಳಲ್ಲಿ ಬಳಕೆಗೆ ಸಂಗ್ರಹಿಸಿದ ನೀರನ್ನೆ ತಂದು, ಬೆಂಕಿ ನಂದಿಸಲು ಸಹಾಯ ಮಾಡಿದರು, ಗ್ರಾಮಸ್ಥರು ಸ್ವಲ್ಪ ಎಚ್ಚರ ತಪ್ಪಿದರೂ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ತಗುಲುವ ಅಪಾಯವಿತ್ತು, ಆದರೆ ಗ್ರಾಮಸ್ಥರ ಮುಂಜಾಗ್ರತೆಯಿಂದ ಅಪಾಯ ತಪ್ಪಿದೆ, ಜಿಲ್ಲಾ ಕೇಂದ್ರವಾಗಬೇಕಾದ ತಿಪಟೂರಿನಲ್ಲಿ ಸೂಕ್ತ ಅಗ್ನಿಶಾಮಕ ವಾಹನವಿಲ್ಲ ಎಂದು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ತಡವಾಗಿ ಆಗಮಿಸದ ಹಿನ್ನಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ತುರವೇಕೆರೆ, ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಆಗ್ನಿ ಶಾಮಕದಳ ಸಿಬ್ಬಂದಿ ನೊಣವಿನರೆರೆ ಪೊಲೀಸ್ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.