ಹಾವೇರಿ: ಹಾವೇರಿಯಲ್ಲಿ ನಾಡ ಬಾಂಬ್ ಸ್ಫೋಟಗೊಂಡು ನಾಯಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಜಲ್ಲಾಪುರ ಗ್ರಾಮದಲ್ಲಿ ನಡೆದಿದೆ. ನಾಡಬಾಂಬ್ ಸ್ಪೋಟಗೊಂಡು ನಾಯಿ ಸಾವನಪ್ಪಿದೆ.
ಗ್ರಾಮದ ಮಲ್ಲಿಕಾರ್ಜುನ ಗೌಡಗೆ ಸೇರಿದ ಜಮೀನಿನಲ್ಲಿ ನಾಡ ಬಾಂಬ್ ಪತ್ತೆಯಾಗಿದೆ. ಪ್ರಾಣಿಗಳನ್ನು ಬೇಟೆ ಆಡುವ ಉದ್ದೇಶದಿಂದ ನಾಡ ಬಾಂಬ್ ಇಟ್ಟಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಒಟ್ಟು 3 ನಾಡ ಬಾಂಬ್ ಗಳನ್ನು ದುಷ್ಕರ್ಮಿಗಳು ಪ್ರಾಣಿಗಳ ಬೇಟೆಗೆ ಇಟ್ಟಿದ್ದರು ಎನ್ನಲಾಗಿದೆ.
ಒಂದು ನಾಡ ಬಾಂಬ್ ನಾಯಿ ಕಚ್ಚಿದ್ದರಿಂದ ಸ್ಫೋಟಗೊಂಡು ನಾಯಿ ಸಾವನಪ್ಪಿದೆ. ಇನ್ನುಳಿದ ಎರಡು ಜೀವಂತ ನಾಡ ಬಾಂಬ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನಾಡ ಬಾಂಬ್ ಸ್ಫೋಟ- ನಾಯಿ ಸಾವು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು