ಬೆಂಗಳೂರು: ಕರೆಂಟ್ ಅವಘಡಗಳಿಂದ ಸಾವನ್ನಪ್ಪುತ್ತಿರುವ ಜನರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಬೆಸ್ಕಾಂ ನೀಡಿರುವ ಅಂಕಿಅಂಶ ಆತಂಕ ಹೆಚ್ಚಿಸಿದೆ.
ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಜಿಲ್ಲೆಗಳಲ್ಲಿ ಕೇವಲ ಆರು ತಿಂಗಳಲ್ಲಿ 118 ಜನರು ವಿದ್ಯುತ್ ಅವಘಡಗಳಿಂದ ಮೃತಪಟ್ಟಿದ್ದಾರೆ. ಬೆಸ್ಕಾಂ ಸುಂಕ ಪರಿಷ್ಕರಣೆ ಪ್ರಸ್ತಾವನೆ ವೇಳೆ ಸಲ್ಲಿಸಿದ್ದ ವರದಿಯಿಂದ ಈ ಮಾಹಿತಿ ಬಹಿರಂಗವಾಗಿದೆ.
2024-25ರ ಅಂತಿಮ ಅಂಕಿಅಂಶಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ವಿದ್ಯುತ್ ಅವಘಡಗಳಿಂದ ಸಾವಿನ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಬೆಂಗಳೂರು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.ಪಾದಚಾರಿ ಮಾರ್ಗಗಳಲ್ಲಿ ತಂತಿಗಳು ತುಂಡಾಗಿ ನೇತಾಡುವುದು, ಪಾರ್ಕ್ ನಲ್ಲಿ ವೈರ್ ಕಟ್ಟಾಗಿರೋದು. ಇದು ಜನರಲ್ಲಿ ಭಯ ಹುಟ್ಟಿಸಿದೆ. ಒಂದು ತಪ್ಪು ಹೆಜ್ಜೆ ಇಟ್ಟರೆ ಜೀವಕ್ಕೆ ಮಾರಕವಾಗಬಹುದು.
ಆರು ತಿಂಗಳಲ್ಲಿ ವಿದ್ಯುತ್ ಅವಘಡಕ್ಕೆ 118 ಜನ ಬಲಿ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು