ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ ಬಾಲಕಿಯರೇ ಮೇಲುಗೈ
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಗೆ ಹಾಜರಾದಂತ 6,37,805 ವಿದ್ಯಾರ್ಥಿಗಳಲ್ಲಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇಕಡವಾರು ಪ್ರಮಾಣ 73.45ರಷ್ಟು ಆಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.7.7ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಶೇ.81.15ರಷ್ಟು ಬಂದಿತ್ತು. ಈ ಬಾರಿ ಶೇ.73.45 ಬಂದಿದೆ.
1.ಉಡುಪಿ – ಶೇ.93.90
2.ದಕ್ಷಿಣ ಕನ್ನಡ – ಶೇ.93.57
3.ಬೆಂಗಳೂರು ದಕ್ಷಿಣ – ಶೇ.85.36
4.ಕೊಡಗು – ಶೇ.83.84
5.ಬೆಂಗಳೂರು ಉತ್ತರ – ಶೇ.83.31
6.ಉತ್ತರ ಕನ್ನಡ – ಶೇ.82.93
7. ಶಿವಮೊಗ್ಗ – ಶೇ.79.91
8.ಬೆಂಗಳೂರು ಗ್ರಾಮಾಂತರ – ಶೇ.79.70
9. ಚಿಕ್ಕಮಗಳೂರು – ಶೇ.79.56
10. ಹಾಸನ – ಶೇ.77.56
11. ಚಿಕ್ಕಬಳ್ಳಾಪುರ – ಶೇ.75.80
12.ಮೈಸೂರು- ಶೇ.74.30
13.ಚಾಮರಾಜನಗರ- ಶೇ.73.27
14.ಬಾಗಲಕೋಟೆ – ಶೇ.72.83
15.ಕೋಲಾರ – ಶೇ.72.45
16.ಧಾರವಾಡ- ಶೇ.72.32
17.ತುಮಕೂರು – ಶೇ.72.02
18.ರಾಮನಗರ – ಶೇ.69.71
19.ದಾವಣಗೆರೆ – ಶೇ.69.45
20.ಹಾವೇರಿ- ಶೇ.67.56
21.ಬೀದರ್ – ಶೇ.67.31
22. ಕೊಪ್ಪಳ – ಶೇ.67.20
23.ಚಿಕ್ಕೋಡಿ – ಶೇ.66.76
24. ಗದಗ – ಶೇ.66.64
25. ಬೆಳಗಾವಿ – ಶೇ.65.37
26. ಬಳ್ಳಾರಿ – ಶೇ.64.41
27. ಚಿತ್ರದುರ್ಗ – ಶೇ.59.87
28. ವಿಜಯಪುರ – ಶೇ.58.81
29. ರಾಯಚೂರು- ಶೇ.58.75
30. ಕಲಬುರ್ಗಿ- ಶೇ.55.70
31. ಯಾದಗಿರಿ – ಶೇ.48.45
————————
ಇವರೇ ಟಾಪರ್ಸ್!
ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲ್ಲೂಕು ಕೊಟ್ಟೂರಿನ ಹಿಂದೂ ಪಿಯು ಕಾಲೇಜಿನ ಎಲ್.ಆರ್.ಸಂಜನಾ ಬಾಯಿ 600 ಅಂಕಗಳಿಗೆ 597 ಅಂಕ ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೆನರಾ ಪಿಯು ಕಾಲೇಜಿನ ವಿದ್ಯಾರ್ಥಿನಿ ದೀಪಶ್ರೀ 600ಕ್ಕೆ 599 ಹಾಗೂ ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಕ್ಸ್ ಪರ್ಟ್ ಪಿಯುಸಿ ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ 600 ಅಂಕಗಳಿಗೆ 599 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.
ಬಾಲಕಿಯರದ್ದೇ ಮೇಲುಗೈ!
2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 3,45,694 ಬಾಲಕಿಯರು ಹಾಜರಾಗಿದ್ದರು. ಈ ಪೈಕಿ 2,69,212 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು 6,37,805 ವಿದ್ಯಾರ್ಥಿಗಳ ಪೈಕಿ 4,68,439 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟಾರೆ ಶೇಕಡಾ 73.45 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾದಂತಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ.57.11ರಷ್ಟು ಫಲಿತಾಂಶ ಬಂದಿದೆ. ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 62.69ರಷ್ಟು, ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 82.66ರಷ್ಟು, ಬಿಬಿಎಂಪಿ ವ್ಯಾಪ್ತಿಯ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 68.88ರಷ್ಟು, ವಿಭಜಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ.78.58ರಷ್ಟು ಹಾಗೂ ವಸತಿ ಶಾಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ 86.18ರಷ್ಟು ಫಲಿತಾಂಶ ಬಂದಿದೆ.
ಕಲಾ ವಿಭಾಗ
1.ಸಂಜನಾಬಾಯಿ, ಇಂದೂ ಪಿಯು ಕಾಲೇಜು, ವಿಜಯನಗರ ಜಿಲ್ಲೆ – 597 ಅಂಕ
2.ನಿರ್ಮಾಲಾ, ಪಂಚಮಸಾಲಿ ಪಿಯು ಕಾಲೇಜು, ಹೂವಿನಹಡಗಲಿ -596 ಅಂಕ
3.ಕೆ.ಆರ್.ಶ್ರೀಜಯ ದರ್ಶನಿ, ಮಹಾರಾಣಿ ಕಾಲೇಜು, ಬೆಂಗಳೂರು – 595 ಅಂಕ
ವಾಣಿಜ್ಯ ವಿಭಾಗ
1.ದೀಪಶ್ರೀ.ಎಸ್, ಕೆನರಾ ಪಿಯು ಕಾಲೇಜು, ಮಂಗಳೂರು, ಅಂಕ-599
2.ತೇಜಸ್ವಿನಿ, ಭಾರತಮಾತಾ ಪಿಯು ಕಾಲೇಜು ಕೊಪ್ಪ, ಮೈಸೂರು, ಅಂಕ-598
3.ಎಚ್.ವಿ.ಭಾರ್ಗವಿ, ಮಹಿಳಾ ಸಮಾಜ ಪಿಯು ಕಾಲೇಜು, ಕೋಲಾರ, ಅಂಕ-597
ವಿಜ್ಞಾನ ವಿಭಾಗ
1.ಅಮೂಲ್ಯ ಕಾಮತ್ – ಎಕ್ಸ್ ಫರ್ಟ್ ಪಿಯು ಕಾಲೇಜು ಮಂಗಳೂರು, ಅಂಕ-599
2.ದೀಕ್ಷಾ.ಆರ್, ವಾಗ್ದೇವಿ ಪಿಯು ಕಾಲೇಜು ತೀರ್ಥಹಳ್ಳಿ, ಅಂಕ-599
3.ಬಿಂದು ನಾವಳೆ- ಆಳ್ವಾಸ್ ಕಾಲೇಜು ಮೂಡಬಿದಿರೆ, ಅಂಕ-598