ಕುಡಿಯೋ ನೀರಿನ ಬಾಟಲಿಯಲ್ಲಿ ರಾಸಾಯನಿಕ ಪತ್ತೆ
ಬೆಂಗಳೂರು: ಕರ್ನಾಟಕದಲ್ಲಿ ಬಳಕೆಯಾಗುತ್ತಿರುವಂತ ಬ್ರ್ಯಾಂಡೆಡ್ ಕಂಪನಿಯ ಕುಡಿಯೋ ನೀರಿನ ಬಾಟಲಿಯನಲ್ಲೂ ರಾಸಾಯನಿಕ ಪತ್ತೆಯಾಗಿದೆ. ಅಲ್ಲದೇ ನೀರು ಕುಡಿಯೋದಕ್ಕೆ ಯೋಗ್ಯವಲ್ಲ ಎಂಬುದಾಗಿ ಆರೋಗ್ಯ ಇಲಾಖೆಯ ವರದಿಯಿಂದ ಶಾಕಿಂಗ್ ಮಾಹಿತಿ ಬಹಿರಂಗಗೊಂಡಿದೆ.ಈ ಸಂಬಂಧ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯಿಂದ ಬಾಟಲಿಯ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
ಈ ವೇಳೆ ಆಘಾತಕಾರಿ ಮಾಹಿತಿ ಲ್ಯಾಬ್ ಪರೀಕ್ಷೆಯಲ್ಲಿ ಹೊರಬಿದ್ದಿದೆ. ವಿಶೇಷ ಅಭಿಯಾನದ ಮೂಲಕ ಕುಡಿಯುವ ನೀರಿನ ಬಾಟಲ್ ಗಳಲ್ಲಿನ ನೀರಿನ 296 ಮಾದರಿಗಳನ್ನು ವಿಶ್ಲೇಷಣೆಗಾಗಿ ಸಂಗ್ರಹಿಸಿದ್ದು, ಅವುಗಳಲ್ಲಿ 255 ಮಾದರಿಗಳ ವಿಶ್ಲೇಷಣಾ ಕಾರ್ಯ ಪೂರ್ಣಗೊಂಡಿದ್ದು, 72 ಮಾದರಿಗಳು ಸುರಕ್ಷಿತ ಎಂದು, 95 ಮಾದರಿಗಳು ಅಸುರಕ್ಷಿತ ಎಂದು ಹಾಗೂ 88 ಮಾದರಿಗಳು ಕಳಪೆ ಗುಣಮಟ್ಟದ್ದು ಎಂದು ವರದಿಯಾಗಿರುತ್ತವೆ. ಉಳಿದ ಮಾದರಿಗಳ ವಿಶ್ಲೇಷಣಾ ಕಾರ್ಯವು ಪ್ರಗತಿಯಲ್ಲಿರುತ್ತದೆ ಎಂಬುದಾಗಿ ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.
ವಾಟರ್ ಬಾಟಲ್ ನೀರು ಸುರಕ್ಷಿತವಲ್ಲ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು