ಬೆಂಗಳೂರು: ನಗರದ ಜನತೆಗೆ ಹಾಲು, ಮೊಸರು, ವಿದ್ಯುತ್ ಬಿಲ್ ಏರಿಕೆಯ ನಂತ್ರ ಈಗ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಅದೇ ಕಾವೇರಿ ನೀರು ಸರಬರಾಜಿನ ದರ ಹೆಚ್ಚಳಕ್ಕೆ ಬಿ ಡಬ್ಲ್ಯೂ ಎಸ್ ಎಸ್ ಬಿ ನಿರ್ಧರಿಸಿದೆ. ಈ ಕುರಿತಂತೆ ಬಿ ಡಬ್ಲ್ಯೂ ಎಸ್ ಎಸ್ ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾಹಿತಿ ಹಂಚಿಕೊಂಡಿದ್ದು, ನಗರದಲ್ಲಿ ನೀರಿನ ದರವನ್ನು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ.
ಗೃಹ ಬಳಕೆಯ ನೀರು ಸರಬರಾಜಿನ ದರವನ್ನು 1 ಪೈಸೆ ಹೆಚ್ಚಳ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. 8 ಲೀಟರ್ ಒಳಗಿನ ನೀರು ಸರಬರಾಜಿಗೆ 0.15 ಪೈಸೆ ಹೆಚ್ಚಳ ಮಾಡಲಾಗುತ್ತಿದೆ. 8 ರಿಂದ 25 ಸಾವಿರ ಲೀಟರ್ ಗೆ 0.40 ಪೈಸೆ ಹೆಚ್ಚಳ ಮಾಡಲಾಗುತ್ತಿದೆ. 25 ಸಾವಿರದಿಂದ 55 ಸಾವಿರ ಲೀಟರ್ ವರೆಗೆ 0.80 ಪೈಸೆ ಏರಿಕೆ ಮಾಡಲಾಗುತ್ತದೆ. 55 ಸಾವಿರದಿಂದ 1 ಲಕ್ಷದವರೆಗೆ 1 ಪೈಸೆ ಹೆಚ್ಚಳ ಮಾಡಲಾಗುತ್ತದೆ. ಇನ್ಮುಂದೆ ಪ್ರತಿ ವರ್ಷ ಏಪ್ರಿಲ್ ನಲ್ಲಿ ನೀರಿನ ದರ ಪರಿಷ್ಕರಣೆ ಮಾಡಲಾಗುವುದು ಎಂಬುದಾಗಿ ಮಾಹಿತಿ ನೀಡಿದ್ದಾರೆ.
ಇನ್ನೂ ಬೆಂಗಳೂರು ಜಲಮಂಡಳಿಯಿಂದ ನೀರಿನ ದರ ಹೆಚ್ಚಳ ಸಂಬಂಧ ಅಧಿಕೃತ ಆದೇಶ ಹೊರಬಿದ್ದಿಲ್ಲ, ಶೀಘ್ರದಲ್ಲೇ ನೀರಿನದ ದರ ಹೆಚ್ಚಳ ಸಂಬಂಧ ಬಿ ಡಬ್ಲ್ಯೂಎಸ್ಎಸ್ ಬಿ ಆದೇಶವನ್ನು ಹೊರಡಿಸಲಿದೆ. ಆ ಮೂಲಕ ಬೆಂಗಳೂರಿನ ಜನತೆಗೆ ನೀರಿನ ದರ ಏರಿಕೆಯ ಶಾಕ್ ಅನ್ನು ನೀಡಲಾಗುತ್ತದೆ.