ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಪಾಳ್ಯ ಗೇಟ್ ಬಳಿ ಅಪಘಾತ ಜರುಗಿದೆ. ಅದೃಷ್ಟವಶಾತ್ ಈ ರಸ್ತೆ ಅಪಘಾತಕ್ಕೆ ಯಾರೂ ಬಲಿಯಾಗಿಲ್ಲವಾದರೂ ಮಿನಿಬಸ್ ಚಾಲಕ ಬಹಳ ಗಂಭೀರವಾಗಿ ಗಾಯಗೊಂಡಿದ್ದಾನೆ ಮತ್ತು ಲಭ್ಯವಾಗಿರುವ ಮಾಹಿತಿ ಪ್ರಕಾರ ಅವನ ಬಲಗಾಲು ಫ್ರ್ಯಾಕ್ಚರ್ ಆಗಿದೆ. ತನ್ನ ಮುಂದೆ ಚಲಿಸುತ್ತಿದ್ದ ಲಾರಿಯನ್ನು ಓವರ್ಟೇಕ್ ಮಾಡುವ ಭರದಲ್ಲಿ, ಮಿನಿಬಸ್ ಡ್ರೈವರ್ ಅದಕ್ಕೆ ಗುದ್ದಿದ್ದಾನೆ. ಬಸ್ಸಲ್ಲಿದ್ದ ಇತರ ಆರೇಳು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮಿನಿಬಸ್-ಲಾರಿ ನಡುವೆ ಅಪಘಾತ, 7-8 ಜನರಿಗೆ ಗಾಯ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು