ಹಾಸನ: ಬಿಜೆಪಿಯವರು ಗೋಡ್ಸೆ ಹಿಂದುತ್ವ ಪ್ರತಿಪಾದಿಸುತ್ತಾರೆ, ಕಾಂಗ್ರೆಸ್ ನವರಾದ ನಾವು ಗಾಂಧೀಜಿ ಹಿಂದುತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದು ಸಮಾಜದ ಮತಕ್ಕಾಗಿ ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಾರೆ. ನಾವು ಯಾವ ಸಮಾಜವನ್ನು ಒಡೆದಿಲ್ಲ ಎಂದರು.
ಹಿಂದುವಾಗಿ ಹುಟ್ಟಿದ್ದೇನೆ ಹಿಂದುವಾಗಿ ಸಾಯುವುದಿಲ್ಲ ಎಂದು ಅಂಬೇಡ್ಕರ್ ಹೇಳಿರಲಿಲ್ಲವೇ? ಹಿಂದು ಹೆಸರಿನಲ್ಲಿ ಏನೆಲ್ಲಾ ಮೂಢನಂಬಿಕೆಗಳು, ದಬ್ಬಾಳಿಕೆಗಳು, ಅಸ್ಪಶ್ಯರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯಿಂದ ಬೆಸತ್ತು ನಾನು ಹಿಂದುವಾಗಿ ಸಾಯಲ್ಲ ಎಂದು ಬೌದ್ಧ ಧರ್ಮ ಸ್ವೀಕರಿಸಿದರು. ಕಾಂಗ್ರೆಸ್ಸಿಗರಾದ ನಾವೂ ಹಿಂದುಗಳೇ, ನಮ್ಮದು ಗಾಂಧೀಜಿ ಪ್ರತಿಪಾದನೆ ಮಾಡಿದ ಹಿಂದುತ್ವ. ಗೋಡ್ಸೆ ಪ್ರತಿಪಾದನೆ ಮಾಡಿದಂತಹ ಹಿಂದುತ್ವ ನಮಗೆ ಬೇಕಿಲ್ಲ್ ಎಂದು ಟಾಂಗ್ ನೀಡಿದರು.
ನಾವು ಯಾವ ಸಮಾಜವನ್ನು ಒಡೆದಿಲ್ಲ: ಕೆ ಎನ್ ಆರ್

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು