ಬೆಂಗಳೂರು: ಒಂದು ವೇಳೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಒಂದು ವೇಳೆ ಇಲ್ಲದಿದ್ದರೆ ನಾನು ಜೀವನಪೂರ್ತಿ ಊರಿನಲ್ಲಿ ಕುರಿ ಕಾಯುತ್ತಾ ಇರಬೇಕಿತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಅಂಬೇಡ್ಕರ್ ಅವರ 135 ನೇ ಜಯಂತಿಯ ಹಿನ್ನಲೆ ಮಾತನಾಡಿ, ಬಾಬಾ ಸಾಹೇಬರು ರಚಿಸಿದ ಸಂವಿಧಾನ ಇಲ್ಲದಿದ್ದರೆ ನಾನು ನನ್ನೂರಿನಲ್ಲಿ ಕುರಿಯನ್ನೋ, ದನವನ್ನೋ ಕಾಯುತ್ತಾ ಇರುತ್ತಿದ್ದೆ.ನಾನು ಎರಡೆರಡು ಬಾರಿ ಮುಖ್ಯಮಂತ್ರಿಯಾಗಿರುವುದು ಸಂವಿಧಾನದಿಂದ ಎಂದರು.ಯಾವುದೋ ಹಳ್ಳಿಯಿಂದ ಬಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದರೆ ಇದಕ್ಕೆ ಸಂವಿಧಾನವೇ ಕಾರಣ, ನನ್ನ ಬದುಕಿನ ಅನುಕ್ಷಣವೂ ಬಾಬಾ ಸಾಹೇಬರಿಗೆ ನಾನು ಋಣಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸಂವಿಧಾನ ಇಲ್ಲದಿದ್ರೆ ಕುರಿ ಕಾಯಬೇಕಿತ್ತು: ಸಿಎಂ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು