ಧಾರವಾಡ: ರಾಜ್ಯ ಸರ್ಕಾರ ಕಳೆದ 10 ವರ್ಷಗಳ ಹಿಂದಿನ ಜಾತಿ ಜನಗಣತಿಯನ್ನು ಈಗ ತರುತ್ತಿದೆ ಎಂಬ ಮೈಸೂರು ಸಂಸದ ಯದುವೀರ್ ಒಡೆಯರ್ ಅವರ ಆರೋಪಕ್ಕೆ ಸಚಿವ ಸಂತೋಷ ಲಾಡ್ ತಿರುಗೇಟು ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿ 10 ವರ್ಷಗಳ ಹಿಂದಿನದು ಎಂದು ಮೈಸೂರು ಮಹಾರಾಜರು ಆರೋಪಿಸಿದ್ದಾರೆ. ಕಳೆದ 14 ವರ್ಷಗಳಿಂದ ಕೇಂದ್ರ ಸರ್ಕಾರ ಜನ ಗಣತಿಯನ್ನೇ ಮಾಡಿಸಿಲ್ಲ. ಅದರ ಬಗ್ಗೆ ಮಹಾರಾಜರು ಮೊದಲು ಮಾತನಾಡಲಿ.ಹತ್ತು ವರ್ಷಕ್ಕೊಮ್ಮೆ ಜನ ಗಣತಿ ಆಗಬೇಕು. 14 ವರ್ಷದಿಂದ ಕೇಂದ್ರ ಸರ್ಕಾರ ಜನಗಣತಿಯನ್ನೇ ಮಾಡಿಲ್ಲ.
2020ರಲ್ಲಿ ಗಣತಿ ಆಗಬೇಕಿತ್ತು. ಬಿಜೆಪಿಯವರು ಗಣತಿ ಮಾಡಿಸಿಲ್ಲ. ಇದನ್ನು ಯಾಕೆ ಮಾಡಿಲ್ಲ ಎಂದು ಮಹಾರಾಜರು ಹೇಳಬೇಕು ಎಂದರು. ನಮ್ಮ ಸರ್ಕಾರದ ಜಾತಿ ಜನಗಣತಿಯಲ್ಲಿ ಲೋಪ ದೋಷ ಇದ್ದರೆ ಹೇಳಲಿ. ಮೊದಲು ವರದಿ ಹೊರಗೆ ಬರಲಿ. ಈ ಬಗ್ಗೆ ಸಿಎಂ ಅವರೇ ಹೇಳಿದ್ದಾರೆ. ಸಂಬಂಧಿಸಿದ ಇಲಾಖೆ ಇದರ ಬಗ್ಗೆ ಮಾಹಿತಿ ಕೊಡಲಿದೆ. ಅಲ್ಲಿಯವರೆಗೂ ಮಹಾರಾಜರು ಸ್ವಲ್ಪ ಸಮಾಧಾನದಿಂದ ಇರಬೇಕು ಎಂದರು.
10 ವರ್ಷಗಳ ಹಿಂದಿನ ಜಾತಿ ಜನಗಣತಿ ಯದುವೀರ್ ಆರೋಪಕ್ಕೆ ಲಾಡ್ ತಿರುಗೇಟು

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು