ಮಧುಗಿರಿ: ಸ್ನೇಹಿತರ ಜತೆ ರಾತ್ರಿ ಮದ್ಯಪಾನ ಮಾಡಿದ ವ್ಯಕ್ತಿಗೆ ಬೆಳಿಗ್ಗೆ ಆಗುವ ವೇಳೆ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ತಾಲೂಕಿನ ಮಿಡಿಗೇಶಿ ಹೋಬಳಿ ವೀರ ಚಿನ್ನೇನಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ರಾಜಣ್ಣ ಅಲಿಯಾಸ್ ಪಾಣಿ (46) ಹತ್ಯೇಗೀಡಾದ ವ್ಯಕ್ತಿ. ಮನೆ ಪಕ್ಕದ ಈರಮ್ಮ ಎಂಬುವವರ ಮನೆಯ ಮುಂದೆ ಮದ್ಯಪಾನ ಮಾಡಿಸಿ ಕೈ ಕಾಲು-ಕಾಲು ಕಟ್ಟಿ ಚಾಕುವಿನಿಂದ ಎದೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದಾರೆ.
ಕತ್ತಿನ ಮೇಲೆ ಹಾಗೂ ಹೊಟ್ಟೆ ಬಳಿ ಕೋಳಿ ಕೊಯ್ಯುವ ಚೂರಿಯಿಂದ ಬರ್ಬರವಾಗಿ ಚುಚ್ಚಿ ಹತ್ಯೆ ಮಾಡಲಾಗಿದೆ. ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಒಬ್ಬರಿಂದ ಕೊಲೆ ಮಾಡಲು ಸಾಧ್ಯವಿಲ್ಲ ನಾಲ್ಕೈದು ಜನ ಸೇರಿ ಕೊಲೆ ಮಾಡಿದ್ದು ಸೂಕ್ತ ನ್ಯಾಯ ಒದಗಿಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಎಫ್ ಎಸ್ ಎಲ್ ಹಾಗೂ ಬೆರಳಚ್ಚು ತಂಡ ಶ್ವಾನದಳ ಸೇರಿದಂತೆ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಸಿ ಗೋಪಾಲ್, ಮಧುಗಿರಿ ಸಿಪಿಐ ಹನುಮಂತರಾಯಪ್ಪ ಪಿ ಎಸ್ ಐ ಮೊಹಮ್ಮದ್ ಪೈಗಂಬರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಮೃತರ ಕುಟುಂಬಕ್ಕೆ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಸಂತಾಪ ಸೂಚಿಸಿದ್ದು ಮೃತರಿಗೆ ಪತ್ನಿ ಸೇರಿದಂತೆ ಇಬ್ಬರು ಹೆಣ್ಣು ಮತ್ತು ಒಂದು ಗಂಡು ಮಗುವಿದೆ. ಮೃತ ದೇಹವನ್ನು ತುಮಕೂರು ಜಿಲ್ಲಾ ಶವಗಾರಕ್ಕೆ ರವಾನಿಸಿದ್ದಾರೆ.
ಕಾಂಗ್ರೆಸ್ ಮುಖಂಡ ರಾಜಣ್ಣನ ಬರ್ಬರ ಕೊಲೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು