ಚಿಕ್ಕೋಡಿ: ತಾಯಿ ಮತ್ತು ಮಗನ ಹತ್ಯೆ ಮಾಡಿ, ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಡಗಾನೂರು ಗ್ರಾಮದಲ್ಲಿ ಭಾನುವಾರ ನಡೆದಿದೆ.
ಚಂದ್ರವ್ವ ಅಪ್ಪಾರಾಯ ಇಚೇರಿ(65), ಅವರ ಪುತ್ರ ವಿಠ್ಠಲ ಅಪ್ಪಾರಾಯ ಇಚೇರಿ(42) ಮೃತರು. ಮೃತರು ಕೊಡಗನೂರುನಲ್ಲಿರುವ ತಮ್ಮ ಕೃಷಿ ಭೂಮಿಯಲ್ಲಿರುವ ಸಣ್ಣ ಮನೆಯಲ್ಲಿ ವಾಸವಿದ್ದರು.
ಚಂದ್ರವ್ವ ಪತಿ ನಿಧರನಾಗಿದ್ದು, ಮಗಳು ವಿವಾಹವಾಗಿ ಬೇರೆಡೆ ವಾಸವಿದ್ದಾರೆ. ಅಪಘಾತ ಪ್ರಕರಣವೊಂದರಲ್ಲಿ ಚಂದ್ರವ್ವ ಅವರು ಸಂಧಾನಕ್ಕೆ ನಿರಾಕರಿಸಿದ್ದರು. ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೇ ಕಾರಣಕ್ಕೆ ಹತ್ಯೆಯಾಗಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ತಾಯಿ ಮತ್ತು ಮಗನ ಹತ್ಯೆ

ತುಮಕೂರು ವಾರ್ತೆ ಕನ್ನಡ ದಿನಪತ್ರಿಕೆ ಪ್ರಧಾನ ಸಂಪಾದಕರು