ಮಾಡಿದ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆ: ಸುರೇಶ್ ಗೌಡ

ಬೆಳ್ಳಾವಿಯಲ್ಲಿ ಬೂತ್ ವಿಜಯ ಅಭಿಯಾನಕ್ಕೆ ವಿಜಯೇಂದ್ರ ಚಾಲನೆ ಇಂದು

66

Get real time updates directly on you device, subscribe now.


ತುಮಕೂರು: ಬೂತ್ ವಿಜಯ ಸಂಕಲ್ಪ ಅಭಿಯಾನ ಜ. 21 ರಿಂದ 29ರ ವರೆಗೆ ನಡೆಯುತ್ತದೆ. ಗ್ರಾಮಾಂತರ ಕ್ಷೇತ್ರದಲ್ಲಿ ಬೂತ್ ವಿಜಯ ಅಭಿಯಾನಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬೆಳ್ಳಾವಿ ಗ್ರಾಮದಲ್ಲಿ ಚಾಲನೆ ನೀಡಲಿದ್ದಾರೆ ಎಂದು ತುಮಕೂರು ಗ್ರಾಮಾಂತರದ ಮಾಜಿ ಶಾಸಕ ಬಿ.ಸುರೇಶ್ ಗೌಡ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದ್ದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಾಧನೆ ಜನರಿಗೆ ತಿಳಿಸಲು ಭಾರತೀಯ ಜನತಾ ಪಕ್ಷದ ವತಿಯಿಂದ ಬೂತ್ ವಿಜಯ ಸಂಕಲ್ಪ ಅಭಿಯಾನ ನಡೆಸಲಾಗುತ್ತಿದೆ ಎಂದರು.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 2.3 ಲಕ್ಷ ಮತದಾರರಿದ್ದು, 35 ಗ್ರಾಮ ಪಂಚಾಯತಿಗಳನ್ನು ಒಳಗೊಂಡಿದೆ. ಕ್ಷೇತ್ರದಲ್ಲಿ 226 ಬೂತ್ಗಳನ್ನು ರಚಿಸಲಾಗಿದೆ. ಪ್ರತಿ ಬೂತ್ಗೆ 300 ಜನ ಹೊಸ ಸದಸ್ಯರಿಂದ ಪಕ್ಷದ ಸದಸ್ಯತ್ವ ಮಾಡಿಸುವ ಗುರಿ ಹೊಂದಲಾಗಿದ್ದು, 67,000 ನೂತನ ಸದಸ್ಯರ ಸದಸ್ಯತ್ವ ಮಾಡಿಸಲಾಗುವುದು. ಪ್ರತಿ ಬೂತ್ನಲ್ಲಿ 10 ಕಡೆ ಗೋಡೆ ಬರಹ, 1 ಡಿಜಿಟಲ್ ವಾಲ್ ಫೈಂಟಿಂಗ್ ಮಾಡಿಸಲಾಗುವುದು ಎಂದು ತಿಳಿಸಿದರು.

ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಹೊಸ ಮತದಾರರಲ್ಲಿ ಶೇ.15 ಜನರಿಂದ ಪಕ್ಷದ ಸದಸ್ಯತ್ವ ನೋಂದಣಿ ಗುರಿ ಹೊಂದಲಾಗಿದೆ. ಪ್ರತಿ ಬೂತ್ನಲ್ಲಿ ಇರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಫಲಾನುಭವಿಗಳನ್ನು ಸಂರ್ಪಕ ಮಾಡಲು ಉದ್ದೇಶಿಸಲಾಗಿದ್ದು ಅವರ ಮತವನ್ನು ಬಿಜೆಪಿಗೆ ತರಲು ಪ್ರಯತ್ನ ಪಡಲಾಗುವುದು. ಅಭಿಯಾನದ ಕೊನೆಯ ದಿನ ಅಂದರೆ ಜನವರಿ 29ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ಅವರ ಭಿಮನ್ ಕೀ ಬಾತ್ ಭಿ ಅನ್ನು ಪ್ರತಿ ಬೂತ್ನ ಅಧ್ಯಕ್ಷರ ಮನೆಯಲ್ಲಿ ಸದಸ್ಯರೆಲ್ಲ ಸೇರಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗುವುದು. ಜನವರಿ 23 ಹಾಗೂ 24 ರಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇ ಗೌಡರು ಬೂತ್ ಮಟ್ಟದ ಪ್ರವಾಸ ಕೈಗೊಳ್ಳಲಿದ್ದಾರೆ ಎಂದರು.

29ರಂದು ಅಭಿಯಾನ ಅಂತ್ಯವಾಗಲಿದ್ದು ಪಕ್ಷದ ಕಾರ್ಯಕ್ರಮ ಚುರುಕು ಗೊಳಿಸಲಾಗುವುದು. ಕೇಂದ್ರ, ರಾಜ್ಯ ಸರ್ಕಾರ ಎರಡೂ ಒಂದೇ ಇದ್ದರೆ ಅಭಿವೃದ್ಧಿ ವೇಗ ಪಡೆದುಕೊಳ್ಳಲಿದೆ. ಡಬಲ್ ಎಂಜಿನ್ ಸರ್ಕಾರ ಏಕೆ ಬೇಕು ಎನ್ನುವುದು ಪ್ರತಿಯೊಬ್ಬರಿಗೂ ಅಭಿಯಾನದಲ್ಲಿ ತಿಳಿಸಲು ಉದ್ದೇಶಿಸಲಾಗಿದೆ. ತುಮಕೂರು ಜಿಲ್ಲೆಯ ಬಗ್ಗೆ ಪ್ರಧಾನ ಮಂತ್ರಿಗಳು ವಿಶೇಷ ಒಲವು ಹೊಂದಿದ್ದು ಜಿಲ್ಲೆಯ ಸ್ಥಾಪಿಸಲಾಗುತ್ತಿರುವ ಇಸ್ರೋ, ಎಚ್ಎಎಲ್ ವಿಮಾನ ಘಟಕ, ಎತ್ತಿನಹೊಳೆ ಯೋಜನೆ, ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ತುಮಕೂರಿನ ತೆಂಗು ಆಯ್ಕೆ ಮಾಡಲಾಗಿದೆ. ತೆಂಗು ಉತ್ಪನ್ನಗಳ ರಫ್ತಿಗೆ ಕೇಂದ್ರ ಸರ್ಕಾರ ಹೆಚ್ಚು ಉತ್ತೇಜನ ನೀಡಲಿದೆ. ತುಮಕೂರು ಗ್ರಾಮಾಂತರ ಕ್ಷೇತ್ರ ಅತಿ ಹೆಚ್ಚು ತೆಂಗು ಬೆಳೆಯುವ ಪ್ರದೇಶವಾಗಿದ್ದು ಯೋಜನೆಯಿಂದ ಆಗುವ ಉಪಯೋಗವನ್ನು ಪ್ರತಿ ಮನೆಗೆ ತಲುಪಿಸಲಾಗುವುದು.

ಇದಲ್ಲದೇ ಗ್ರಾಮಾಂತರ ಕ್ಷೇತ್ರದಲ್ಲಿ ನಾನು ಶಾಸಕನಾಗಿದ್ದ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಾದ 256 ಕಿ.ಮೀ ಉದ್ದದ ರಸ್ತೆ, 20000 ರೈತರಿಗೆ ಉಚಿತ ಟ್ರಾನ್ಸ್ ಫಾರ್ಮರ್ಗಳ ವಿತರಣೆ, ಎಲ್ಲಾ 35 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಗಳು, ಹಲವಾರು ಗ್ರಾಮಗಳಲ್ಲಿ ಕೈಗೊಂಡ ಉಪ ವಿದ್ಯುತ್ ಸ್ಥಾವರಗಳು, ಶುದ್ಧ ಕುಡಿಯುವ ನೀರಿನ ಘಟಕ , ಚೆಕ್ ಡ್ಯಾಂಗಳ ನಿರ್ಮಾಣ, 220 ಗ್ರಾಮಗಳಿಗೆ ಹೇಮಾವತಿ ನೀರು ಒದಗಿಸುವ ಯೋಜನೆ, ಗುಡಿಸಲು ಮುಕ್ತ ಕ್ಷೇತ್ರಕ್ಕಾಗಿ ಕೈಗೊಂಡ ಯೋಜನೆಗಳು, ದೇವಸ್ಥಾನಗಳ ಪುನರ್ ನಿರ್ಮಾಣ, ಹೈಟೆಕ್ ಸರ್ಕಾರಿ ಶಾಲೆಗಳು ಸೇರಿದಂತೆ ಹತ್ತು ಹಲವು ಕಾರ್ಯಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದರು.

ಕೊರೊನಾ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಾಣ ಪಣಕ್ಕಿಟ್ಟು ಜನರ ಸೇವೆ ಮಾಡಿದ್ದಾರೆ. ಹದಿನೈದು ಸಾವಿರಕ್ಕೂ ಹೆಚ್ಚು ಕುಟುಂಬಕ್ಕೆ ಕಿಟ್ ಹಂಚಿದ್ದೇನೆ. ಕೊರೊನಾ ಸಮಯದಲ್ಲಿ ನನ್ನ ಕೆಲಸಕ್ಕೆ ಕ್ಷೇತ್ರದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು ಗ್ರಾಮಾಂತರ ಕ್ಷೇತ್ರದಲ್ಲಿ 25 ಸಾವಿರ ಮತಗಳ ಅಂತರದಿಂದ ನಾನು ಗೆಲುವು ಸಾಧಿಸಬೇಕೆಂಬುದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಇಂಗಿತವಾಗಿದೆ. ಇದಕ್ಕಾಗಿ ಕಾರ್ಯಕರ್ತರ ಪಡೆ ಕೆಲಸ ಮಾಡುತ್ತಿದೆ. ಗ್ರಾಮಾಂತರದಲ್ಲಿ ನನ್ನ ಕಾಲದಲ್ಲಿ ಆದ ಕೆಲಸಗಳನ್ನು ಜನರು ಮೆಚ್ಚುಗೆಯಿಂದ ನೋಡುತ್ತಿದ್ದಾರೆ. ನಾನು ಕಟ್ಟಿದ ಸರ್ಕಾರಿ ಶಾಲೆಗಳು, ಗುಣಮಟ್ಟದ ರಸ್ತೆಗಳು, ಗೂಳೂರು- ಹೆಬ್ಬೂರು ಏತ ನೀರಾವರಿ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹೀಗೆ ಪ್ರತಿ ಮನೆ, ಮನಸ್ಸನ್ನು ಮುಟ್ಟಿದ್ದೇನೆ, ಜನರ ಶ್ರೀ ರಕ್ಷೆ ನನ್ನ ಪರವಾಗಿದೆ ಎಂದರು.

ಮುಖಂಡರಾದ ನರಸಿಂಹಮೂರ್ತಿ, ಗೂಳೂರು ಶಿವಕುಮಾರ್, ಶಂಕರಣ್ಣ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

Get real time updates directly on you device, subscribe now.

Comments are closed.

error: Content is protected !!