ದೈಹಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲು ಅಗತ್ಯ ಕ್ರಮ: ನಾಗೇಶ್

120

Get real time updates directly on you device, subscribe now.


ಕುಣಿಗಲ್: ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ದೈಹಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಶುಕ್ರವಾರ ತಾಲೂಕಿನ ಗಿರಿಗೌಡನಪಾಳ್ಯದ ಅರವಿಂದ್ ಇಂಟರ್ ನ್ಯಾಷನಲ್ ಸ್ಕೂಲ್ನಲ್ಲಿ ಹಮ್ಮಿಕೊಳ್ಳಲಾದ ತುಮಕೂರು ದಕ್ಷಿಣ ಸರ್ಕಾರಿ ಅನುದಾನಿತ, ಅನುದಾನ ರಹಿತ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳ ದೈಹಿಕ ಶಿಕ್ಷಕರ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಪರಿಪೂರ್ಣವಾಗಲು ದೈಹಿಕ ಕ್ಷಮತೆ ಪರಿಪೂರ್ಣವಾಗಿರಬೇಕು. ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಕರ ಪಾತ್ರ ಮಹತ್ವದಾಗಿದೆ. ಪಸ್ರಸಕ್ತ ಸಾಲಿನಲ್ಲಿ 2500 ಶಿಕ್ಷಕರ ನೇಮಕಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ದೈಹಿಕ ಶಿಕ್ಷಕರ ಶ್ರಮದಿಂದ ಗ್ರಾಮಾಂತರ ಪ್ರದೇಶದಲ್ಲಿನ ಕ್ರೀಡಾ ಪ್ರತಿಭೆ ಹೊರಹೊಮ್ಮಿ ರಾಜ್ಯ, ರಾಷ್ಟ್ರ ಅಂತಾರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಹೊಂದುವಂತಾಗಬೇಕು ಎಂದರು.

ರಾಜ್ಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚೌಡಪ್ಪ ಮಾತನಾಡಿ, ದೈಹಿಕ ಶಿಕ್ಷಕರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಇನ್ನು ನ್ಯಾಯಯುತ ಪರಿಹಾರ ಸಿಕ್ಕಿಲ್ಲ. ಹಲವು ಶ್ರಮ, ಸಂಘಟಿತ ಹೋರಾಟದಿಂದಾಗಿ ದೈಹಿಕ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸಲಾಗುತ್ತಿದೆ. ಆದರೂ ಮುಖ್ಯ ಶಿಕ್ಷಕರ ಹುದ್ದೆಗೆ ಪರಿಗಣನೆ ಆಗುತ್ತಿಲ್ಲ. ಈ ಹಿಂದೆ ಡ್ರಿಲ್ ಟೀಚರ್ ಎಂದು ನೇಮಕವಾಗುತ್ತಿದ್ದು, ಯಾವುದೇ ವಿದ್ಯಾರ್ಹತೆ ಮಾನದಂಡವಾಗಿರಲಿಲ್ಲ. ಆದರೆ ನಂತರ ಬಂದ ದೈಹಿಕ ಶಿಕ್ಷಣ ವಿಶೇಷತೆ ಕೋರ್ಸ್ಗಳು ದೈಹಿಕ ಶಿಕ್ಷಕರನ್ನು ಮತ್ತಷ್ಟು ಸಮರ್ಥ, ಸಧೃಢತೆಯಿಂದ ಕರಾರುವಕ್ಕಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಯಿತು ಎಂದರು.

ಡಿಡಿಪಿ ನಂಜಯ್ಯ, ಬಿಇಒ ಬೋರೇಗೌಡ, ಅರಿವಿಂದ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಎಂ.ಕೆ.ಅಶೋಕ್, ಸಂಪನ್ಮೂಲ ವ್ಯಕ್ತಿಗಳಾದ ಡಾ.ಸುಂರರಾಜ ಅರಸ್, ಡಾ.ರವೀಶ್, ದೈಹಿಕ ಶಿಕ್ಷಕ ಸಂಘದ ಜಿಲ್ಲಾ ಪದಾಧಿಕಾರಿಗಳಾದ ಶಿವಕುಮಾರ, ಸುರೇಶ, ನಾಗರಾಜ, ಚಂದ್ರಮೌಳಿ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!