ಬೆಟ್ಟದ ತಪ್ಪಲಿನಲ್ಲಿ 5 ಕರಡಿಗಳು ಪ್ರತ್ಯಕ್ಷ

147

Get real time updates directly on you device, subscribe now.


ಮಧುಗಿರಿ: ತಾಲ್ಲೂಕಿನ ಪುಲಮಾಚಿ ಗ್ರಾಮದ ಸಮೀಪದ ಭೂತಪ್ಪ ದೇವಾಲಯದ ಬೆಟ್ಟದ ತಪ್ಪಲಿನಲ್ಲಿ ಶುಕ್ರವಾರ 5 ಕರಡಿಗಳು ಪ್ರತ್ಯಕ್ಷವಾಗಿರುವುದನ್ನು ಗ್ರಾಮದ ಯುವಕರು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ.

ಶುಕ್ರವಾರ ಬೆಳಿಗ್ಗೆ 5 ಕರಡಿಗಳು ಪ್ರತ್ಯಕ್ಷವಾಗಿ ಆಹಾರಕ್ಕಾಗಿ ಹುಡುಕಾಟ ನಡೆಸುತ್ತಿರುವುದನ್ನು ಗ್ರಾಮದ ಯುವಕರು ನೋಡಿ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಕರಡಿಗಳು ಪ್ರತ್ಯಕ್ಷವಾಗಿರುವ ವಿಚಾರ ಗ್ರಾಮದ ಜನರಿಗೆ ತಿಳಿಸಿ, ದೇವಾಲಯದ ಸಮೀಪ ಯಾರು ಹೋಗದಂತೆ ಮನವಿ ಮಾಡಿದರು. ಒಂದೇ ಬಾರಿಗೆ ಇಷ್ಟೊಂದು ಕರಡಿಗಳು ಪ್ರತ್ಯಕ್ಷವಾಗಿರುವುದು ಇದೇ ಮೊದಲು, ಕರಡಿಗಳನ್ನು ನೋಡಿದ ಜನರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಜನರ ಮೇಲೆ ದಾಳಿ ಮಾಡುವ ಮುನ್ನ ಎಚ್ಚೆತ್ತುಕೊಳ್ಳುವಂತೆ ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!