ಕುಣಿಗಲ್: ಪಟ್ಟಣದ ಕೋಟೆ ಮುಖ್ಯರಸ್ತೆ, ಸಂತೇ ಮೈದಾನ ಮುಖ್ಯ ರಸ್ತೆಯಲ್ಲಿನ ಒತ್ತುವರಿಯನ್ನು ಪುರಸಭೆ ಅಧಿಕಾರಿಗಳೊಂದಿಗೆ ಸಿಪಿಐ ಗುರುಪ್ರಸಾದ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.
ಪಟ್ಟಣದ ಪ್ರಮುಖರ ರಸ್ತೆಯಾದ ಸಂತೆ ಮೈದಾನ ರಸ್ತೆ, ಕೋಟೆ ಮುಖ್ಯರಸ್ತೆ ಒತ್ತುವರಿಯಾಗಿದ್ದು ಪಾದಚಾರಿಗಳು ಸಹ ಸಮರ್ಪಕವಾಗಿ ನಡೆದುಕೊಂಡು ಹೋಗದ ಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಇತ್ತೀಚೆಗೆ ರಸ್ತೆ ಸುರಕ್ಷತಾ ಸಪ್ತಾಹದ ಕಾರ್ಯಕ್ರಮ ನಡೆಸಿದಾಗ ರಸ್ತೆಗಳು ವ್ಯಾಪಕ ಒತ್ತುವರಿಯಾಗಿರುವ ಬಗ್ಗೆ ಸಾರ್ವಜನಿಕರು ಗಮನ ಸೆಳೆದಿದ್ದು, ಸಿಪಿಐ ಗುರುಪ್ರಸಾದ್, ಪಿಎಸ್ಐ ಜಮಾಲ್ ಅಹಮದ್ ಸಿಬ್ಬಂದಿ ಕಳೆದ ಕೆಲ ದಿನಗಳ ಹಿಂದೆ ಮುಖ್ಯರಸ್ತೆಯ ಇಕ್ಕೆಲಗಳಲ್ಲಿರುವ ಮಳಿಗೆ ಮಾಲೀಕರಿಗೆ ರಸ್ತೆ ಒತ್ತುವರಿ ಮಾಡದಂತೆ, ಮಾಡಿದ್ದಲ್ಲಿ ತೆರವುಗೊಳಿಸುವಂತೆ ಸೂಚನೆ ನೀಡಿದ್ದರು. ಆದರೆ ಶನಿವಾರ ಬೆಳಗ್ಗೆ ಪುರಸಭೆ ಮುಖ್ಯಾಧಿಕಾರಿ ರಮೇಶ್, ಆರೋಗ್ಯ ನಿರೀಕ್ಷಕ ಉಮೇಶ್ ಅವರೊಂದಿಗೆ ಪೊಲೀಸರು ದಿಡೀರ್ ಕಾರ್ಯಾಚರಣೆ ನಡೆಸಿ ರಸ್ತೆ ಒತ್ತುವರಿ ಮಾಡಿಕೊಂಡಿದ್ದವರಿಗೆ ಎಚ್ಚರಿಕೆ ನೀಡಿ ಒತ್ತುವರಿ ತೆರವುಗೊಳಿಸಿದರು. ಮುಂದಿನ ದಿನಗಳಲ್ಲಿ ರಸ್ತೆ ಅತಿಕ್ರಮಿಸಿ ಅಂಗಡಿ ಇಟ್ಟಲ್ಲಿ ಮುಲಾಜಿಲ್ಲದೆ ಒತ್ತುವರಿ ತೆರವು ಮಾಡಿ ಇಟ್ಟಿರುವ ಸಾಮಾಗ್ರಿ ವಶಕ್ಕೆ ಪಡೆದು ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು.
Comments are closed.