ನಗರ ವಾಸಿಗಳು ಜನಪದ ದೇಸಿ ಸೊಗಡು ಅರಿಯಲಿ

254

Get real time updates directly on you device, subscribe now.


ತುಮಕೂರು: ಮರೆಯಂಚಿನಲ್ಲಿರುವ ಹಳ್ಳಿಯ ಸಂಸ್ಕೃತಿಯ ಸೊಗಡಿನ ಅರಿವು ಮೂಡಿಸುವ ಅನಿವಾರ್ಯತೆ ಅತ್ಯಾವಶ್ಯಕ ಎಂದು ಸಂಸ್ಥಾಪಕ ಅಧ್ಯಕ್ಷ ಕೆ.ಬಿ.ಜಯಣ್ಣ ತಿಳಿಸಿದರು.

ನಗರದ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ವಿ-ಸುಗ್ಗಿ ಸಾಂಸ್ಕೃತಿಕ ಹಾಗೂ ಜಾನಪದ ಕಲಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಕೃತಿಯ ಸವಲತ್ತು ಬಳಸಿ ದುಡಿದು ಸಂಪಾದನೆ ಮಾಡುವ ಬದುಕು ಕಣ್ಮರೆಯಾಗುತ್ತಿದ್ದು, ಜನಪದ ದೇಸಿ ಸೊಗಡು ಹಾಗೂ ಹಳ್ಳಿಗರ ಶ್ರಮ ಹಾಗೂ ಸಂಸ್ಕೃತಿಯ ಪರಿಚಯ ಎಲ್ಲ ನಗರದ ವಿದ್ಯಾರ್ಥಿಗಳಿಗೂ ಆಗಬೇಕೆಂದು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಮಾತನಾಡಿ ನಮ್ಮ ದೇಸೀಯತೆ ಇರುವುದು ಕೇವಲ ಹಳ್ಳಿಗಳಲ್ಲಿ ಮಾತ್ರ. ದುಡಿಮೆಯೇ ದೇವರೆಂದು ಅಕ್ಷರಶಃ ಭಾವಿಸಿರುವ ಹಳ್ಳಿಯ ರೈತರೇ ನಮ್ಮ ಅನ್ನದಾತರು. ಕೃಷಿಯೇ ರೈತರ ಜೀವನ ವಿಧಾನವಾಗಿದೆ. ಆಹಾರಕ್ಕಾಗಿ ಕೃಷಿ ವಲಯ ಅವಲಂಭಿಸಿರುವುದರಿಂದ ಈ ಕೃಷಿ ಸಂಸ್ಕೃತಿಯ ಅರಿವು ವಿದ್ಯಾರ್ಥಿಗಳಿಗೆ ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕೃಷಿ ಉಪಕರಣ, ಸಿರಿಧಾನ್ಯ, ರಾಸುಗಳು, ವಿವಿಧ ಹಳೆಯ ನಾಣ್ಯ ಪ್ರದರ್ಶಿಸಲಾಯಿತು.

ವಿಶೇಷವಾಗಿ ಭಾರತೀಯ ಪರಂಪರೆಯ ಆಹಾರ ಪದಾರ್ಥಗಳ ಸ್ಟಾಲ್ಗಳು, ಹೊಲ ಗದ್ದೆ ಕಾಪಾಡುವ ಬೆದರು ಗೊಂಬೆ, ಎತ್ತಿನ ಗಾಡಿ, ಹೆಚ್ಚಿನ ಗಮನ ಸೆಳೆದವು. ವಿವಿಧ ಜಾನಪದ ಹಾಗೂ ಸಾಂಸ್ಕೃತಿಕ ರೀತಿಯ ಸ್ಪರ್ಧೆ ಏರ್ಪಡಿಸಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಧರ್ಮ ಹಾಗೂ ಸಂಸ್ಕೃತಿಯ ಉಡುಗೆ ತೊಡುಗೆಗಳಲ್ಲಿ ವಿದ್ಯಾರ್ಥಿಗಳು ಕಂಗೊಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸಿದ್ದೇಶ್ವರ ಸ್ವಾಮಿ ಹಾಗೂ ಬೋಧಕ, ಬೋಧಕೇತರ ವರ್ಗದವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!