ಭ್ರಷ್ಟಚಾರ, ಗೂಂಡಾಗಿರಿ ಅಂದ್ರೇನೆ ಕಾಂಗ್ರೆಸ್ ಪಕ್ಷ

ದುಡ್ಡು ಕೊಟ್ರೆ ಮಾತ್ರ ಡಿಕೆಶಿ ಸೇವೆ ನೀಡ್ತಾರೆ- ತಮ್ಮವರ ರಕ್ಷಣೆಗೆ ಸಿದ್ದು ಎಸಿಬಿ ರಚನೆ ಮಾಡಿದ್ರು

242

Get real time updates directly on you device, subscribe now.


ಕೊರಟಗೆರೆ: ಲೋಕಾಯುಕ್ತ ಅಧಿಕಾರ ಮೊಟಕು ಗೊಳಿಸಿದ್ದು ಸಿದ್ದರಾಮಯ್ಯ, ತಮ್ಮ ರಕ್ಷಣೆಗಾಗಿ ಎಸಿಬಿ ಇಲಾಖೆ ಪ್ರಾರಂಭ ಮಾಡಿದ್ರು, ದುಡ್ಡು ಕೊಟ್ರೆ ಮಾತ್ರ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಸೇವೆ ನೀಡ್ತಾರೆ. ಇಲ್ಲಂದ್ರೆ ಕಾರ್ಯಕರ್ತರ ಒಂದೇ ಒಂದು ಅರ್ಜಿ ಕೂಡ ಕೆಲಸ ಮಾಡೋದಿಲ್ಲ. ಭ್ರಷ್ಟಚಾರ, ಗೂಂಡಾಗಿರಿ ಅಂದ್ರೇನೆ ಕಾಂಗ್ರೆಸ್ ಪಕ್ಷ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್ ಆರೋಪ ಮಾಡಿದರು.

ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿಯ ಕರಕಲಘಟ್ಟ ಮತ್ತು ಕೊರಟಗೆರೆ ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿಯು ಪ್ರಜಾ ದ್ರೋಹದ ಧ್ವನಿಯಾಗಿದೆ. ಕಾಂಗ್ರೆಸ್ ಪಕ್ಷದ ಬಸ್ಸಿನಲ್ಲಿ ಎಷ್ಟು ಸೀಟು ಇದೆಯೊ ಅಷ್ಟೇ ಮಾತ್ರ ಅವರು ಸೀಮಿತ, ಭ್ರಷ್ಟಚಾರದ ಸಾಕ್ಷಿ ಆಧಾರ ಇದ್ರೇ ಸದನದಲ್ಲಿ ಧ್ವನಿ ಮಾಡದೇ ಈಗ ಬೀದಿ ನಾಟಕ ಮಾಡುತ್ತಿದ್ದಾರೆ. ಭ್ರಷ್ಟಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಪಕ್ಷದ ನಾಯಕರು ಜಾತಿ ವಿಂಗಡಣೆಗೆ ಮಾತ್ರ ಸೀಮಿತ, ಕಾಂಗ್ರೆಸ್ ಪಕ್ಷವನ್ನು ಈಗ ಕರ್ನಾಟಕದ ಜನತೆ ನಂಬೋದಿಲ್ಲ. ನಾವೆಲ್ಲರೂ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡೋಣ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಮನೆಯು ಇಟಲಿಯಲ್ಲಿದೆ. ಜೆಡಿಎಸ್ ಪಕ್ಷವು ಒಂದು ಕುಟುಂಬಕ್ಕೆ ಮಾತ್ರ ಸೇರಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯು ಸ್ಪಷ್ಟವಾಗಿ ಕಾಣುವುದು ಬಿಜೆಪಿ ಪಕ್ಷದಲ್ಲಿ ಮಾತ್ರ. ವಿಶ್ವನಾಯಕ ನರೇಂದ್ರ ಮೋದಿ ಭಾರತ ದೇಶದ ಆಸ್ತಿ, ಅಭಿವೃದ್ಧಿ ಯುಗದಲ್ಲಿ ಭಾರತ ದೇಶವು ಈಗ ಮುನ್ನುಗ್ಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಭಾರತ ದೇಶದ ಯಾವುದೇ ಕ್ಷೇತ್ರದಲ್ಲಿ ನೀವು ಕೇಳಿ ಶೇ.65 ರಷ್ಟು ಜನತೆ ನರೇಂದ್ರ ಮೋದಿ ಹೆಸರನ್ನೇ ಹೇಳ್ತಾರೆ ಎಂದು ತಿಳಿಸಿದರು.

ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ, 40 ವರ್ಷದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಅಧಿಕಾರ ನಡೆಸಿದೆ. ಪರಮೇಶ್ವರ್ರನ್ನ ಕಾಂಗ್ರೆಸ್ ಪಕ್ಷದವರೇ ಸೋಲಿಸ್ತಾರೆ. ಈಗ ನಮಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಯೇ ಸವಾಲು. ಕೇಂದ್ರ ಮತ್ತು ರಾಜ್ಯದ ಬಿಜೆಪಿಯ ಡಬಲ್ ಇಂಜಿನ್ ಸರಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಕೊರಟಗೆರೆ ಕ್ಷೇತ್ರದಲ್ಲಿ 2023ಕ್ಕೆ ಬಿಜೆಪಿ ಪಕ್ಷದ ಅಭ್ಯರ್ಥಿಯು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾ ವ್ಯಕ್ತಪಡಿಸಿದರು.

ಕೊರಟಗೆರೆ ಬಿಜೆಪಿ ಮಂಡಲ ಅಧ್ಯಕ್ಷ ಪವನಕುಮಾರ್, ಪ್ರಧಾನ ಕಾರ್ಯದರ್ಶಿ ಗುರುದತ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್.ಅನಿಲ್ಕುಮಾರ್, ಮಾಜಿ ಶಾಸಕ ಗಂಗಹನುಮಯ್ಯ, ಬಿಜೆಪಿ ಮುಖಂಡ ಡಾ.ಲಕ್ಷ್ಮೀಕಾಂತ್, ಮಂಡಲ ಸಂಚಾಲಕ ಶಿವಕುಮಾರ ಸ್ವಾಮಿ, ಸಹ ಸಂಚಾಲಕ ಅರುಣ್ಕುಮಾರ್, ಮುಖಂಡರಾದ ವೆಂಕಟಾಚಲಯ್ಯ, ಡಾ.ಡಿ.ವೆಂಕಟೇಶ್, ರಘುಕುಮಾರ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!