ಪ್ರತಿಭಟನೆಗೆ ಹೆದರಿ ಸ್ಮಶಾನ ಜಾಗ ನೀಡಿದ ಆಡಳಿತ

288

Get real time updates directly on you device, subscribe now.


ಕುಣಿಗಲ್: ಸ್ಮಶಾನಕ್ಕೆ ಜಾಗ ಗುರುತಿಸಿದ್ದರೂ ಅದನ್ನು ಬಳಕೆಗೆ ನೀಡದೆ ನಿರ್ಲಕ್ಷ್ಯ ವಹಿಸಿದ್ದ ತಾಲೂಕು ಆಡಳಿತ ಕ್ರಮ ಖಂಡಿಸಿ ಹೇರೂರು ಗ್ರಾಮ ಪಂಚಾಯಿತಿ ಸದಸ್ಯ ರಾಮಸ್ವಾಮಿ, ಮುಖಂಡ ಧನರಾಜ್ ನೇತೃತ್ವದಲ್ಲಿ ಪ್ರತಿಭಟನೆ ಮುಂದಾದಾಗ ತಹಶೀಲ್ದಾರ್ ಸ್ಥಳಕ್ಕೆ ತೆರಳಿ ಸ್ಮಶಾನ ಜಾಗ ಗುರುತಿಸಿ ಜನಾಂಗಕ್ಕೆ ನೀಡಿದ ಘಟನೆ ಬುಧವಾರ ನಡೆಯಿತು.

ತಾಲೂಕಿನ ಹೇರೂರು ಗ್ರಾಮದಲ್ಲಿ ಪ.ಜಾತಿ, ಪ.ಪಂಗಡ ಸ್ಮಶಾನಕ್ಕೆ ಜಾಗ ಗುರುತಿಸಿ ಮಂಜೂರಾಗಿದ್ದರೂ ತಾಲೂಕು ಆಡಳಿತ ಅದನ್ನು ಗುರುತಿಸಿ ಬಳಕೆಗೆ ನೀಡದ ಕಾರಣ ಅಕ್ಕಪಕ್ಕದಲ್ಲಿದ್ದ ಇತರೆ ಬಲಾಢ್ಯರು ಸ್ಮಶಾನಕ್ಕೆ ಸೇರಿದ ಜಾಗ ಕಬಳಿಸಿಕೊಂಡು ಪ.ಜಾತಿ, ಪ.ಪಂಗಡದ ಜನರು ಅಂತ್ಯಕ್ರಿಯೆಗೆ ಜಾಗ ಇಲ್ಲದೆ ಪರದಾಡುವಂತಾಗಿತ್ತು. ಹೇರೂರು ಗ್ರಾಮದ ಸ.ನಂ.77 ರಲ್ಲಿ 30 ಗುಂಟೆ ಜಮೀನನ್ನು 2014 ರಲ್ಲೆ ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದರು.

ಆದರೆ ತಾಲೂಕು ಆಡಳಿತ ಜಾಗ ಗುರುತಿಸಿ ಜನಾಂಗದ ಬಳಕೆಗೆ ನೀಡದ ಕಾರಣ ಇಕ್ಕೆಲಗಳಲ್ಲಿದ್ದವರು ಜಾಗ ಕಬಳಿಕೆ ಮಾಡಿದ್ದಾರೆಂದು ಹೇಳಲಾಗಿತ್ತು. ತಾಲೂಕು ಆಡಳಿತಕ್ಕೆ ಗ್ರಾಮದ ಜನಾಂಗದ ಮುಖಂಡರು ಹಲವಾರು ಬಾರಿ ಮನವಿ ನೀಡಿ ಎಚ್ಚರಿಸಿದ್ದರೂ ಯಾವುದೇ ಕೆಲಸವಾಗದೆ ಇದ್ದಾಗ ಗ್ರಾಪಂ ಸದಸ್ಯ ರಾಮಸ್ವಾಮಿ, ಮುಖಂಡ ಧನರಾಜ್ ನೇತೃತ್ವದಲ್ಲಿ ಪ್ರಮುಖರಾದ ಶೇಖರ, ಲಕ್ಷ್ಮೀನರಸಿಂಹ, ಚಿಕ್ಕನರಸಿಂಗ, ರಾಮಕೃಷ್ಣ ಇತರರು ಬುಧವಾರ ತಾಲೂಕು ಕಚೇರಿ ಮುಂದೆ ಸ್ಮಶಾನ ಜಾಗ ಗುರುತಿಸಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಶಾಮಿಯಾನ ಹಾಕಿ ಸಿದ್ಧತೆ ನಡೆಸಿದರು. ತಹಶೀಲ್ದಾರ್ ಮಹಾಬಲೇಶ್ವರ್ ಪ್ರತಿಭಟನಾಕಾರರ ಮನವೊಲಿಸಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಸ್ಮಶಾನಕ್ಕೆ ಗುರುತಿಸಲಾದ ಜಾಗವನ್ನು ಅಗತ್ಯ ಕ್ರಮ ಜರುಗಿಸಿ ನೀಡಿದ ಮೇರೆಗೆ ದಲಿತ ಮುಖಂಡರು ಪ್ರತಿಭಟನೆ ಹಿಂಪಡೆದರು.

Get real time updates directly on you device, subscribe now.

Comments are closed.

error: Content is protected !!