ತಿಪಟೂರು: ಕಲ್ಪತರು ತಾಲ್ಲೂಕಿನ ಜನ ಮತ ಭಿಕ್ಷೆ ನೀಡಿ ಆಶೀರ್ವಸಿದರೆ ತಾಲ್ಲೂಕಿಗೆ ಸಮಗ್ರ ನೀರಾವರಿ, ನಿರುದ್ಯೋಗ ಸಮಸ್ಯೆ ರೈತರ ಪರವಾಗಿ ಹಗಲಿರಳು ಶ್ರಮಿಸುತ್ತೇನೆ ಎಂದು ಜಾತ್ಯತೀತ ಜನತಾದಳದ ಬಾವುಟ ಹಿಡಿದು ಕೆ.ಟಿ.ಶಾಂತಕುಮಾರ್ ಪ್ರತಿಜ್ಞೆ ಮಾಡಿದರು.
ನಗರದ ಕೌಸ್ತುಭ ಹೋಟೆಲ್ನಲ್ಲಿ ಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷ ನನ್ನನ್ನು ಉಪಯೋಗಿಸಿಕೊಂಡು ಬೇರೊಬ್ಬರನ್ನು ಬೆಳೆಸುವ ಪ್ರಯತ್ನ ಮಾಡಿತು. ಆದರೆ ನನ್ನನ್ನೆ ನಂಬಿರುವ ಕಾರ್ಯಕರ್ತರ ಅಭಿಪ್ರಾಯದಂತೆ ಇದೀಗ ಜೆಡಿಎಸ್ ಪಕ್ಷ ಸೇರ್ಪಡೆ ವಿಚಾರವನ್ನು ಅಧಿಕೃತಗೊಳಿಸುತ್ತಿದ್ದು ಆ ಮೂಲಕ ತಿಪಟೂರು ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಲು ಹೊರಟಿರುವುದಾಗಿ ಹೇಳಿದರು.
ಅಭಿಮಾನಿಗಳು, ಕಾರ್ಯಕರ್ತರ ಬೆಂಬಲ ನನ್ನನ್ನು ಭಾವುಕನನ್ನಾಗಿ ಮಾಡಿದೆ. ನೀವು ಯಾವ ಪಕ್ಷದಲ್ಲಿದ್ದರೂ ನಿಮ್ಮ ಗೆಲುವಿಗೆ ಶ್ರಮಿಸುತ್ತೇವೆ ಎಂದು ಹೇಳಿದ್ದು ನನ್ನ ಹೃದಯ ತುಂಬಿ ಬಂದಿದೆ. ಜೊತೆಗೆ ಒಂದಷ್ಟು ಧೈರ್ಯ ಹೆಚ್ಚಿದೆ ಎಂದರು.
ರಾಜ್ಯ ಸುಭೀಕ್ಷವಾಗಿರಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮತ್ತೊಮ್ಮೆ ಸಿಎಂ ಆಗಬೇಕು. ನಮ್ಮ ತಾಲ್ಲೂಕು ಸಮೃದ್ಧಿಯಾಗಲು, ರೈತರ ಆಶೋತ್ತರಗಳಿಗೆ ಸ್ಪಂದಿಸಲು, ದೀನ ದಲಿತರ ಸೇವೆ ಮಾಡಲು, ಅಭಿವೃದ್ಧಿಯತ್ತ ಕೊಂಡೊಯ್ಯಲು ನಿಮ್ಮ ಶಾಂತಕುಮಾರ್ ಶಾಸಕನಾಗಲು ‘ಜನತಾ ದೇವರೇ ನನಗೆ ಹೈಕಮಾಂಡ್’ ಎಂದರು.
ಫೆ.3 ರಂದು ಮಾಜಿ ಮುಖ್ಯಮಂತ್ರಿ ಎಚ್ಡಿಕೆ ಸಮ್ಮುಖದಲ್ಲಿ ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ತಿಪಟೂರಿನಲ್ಲಿ ಸೇರ್ಪಡೆಯಾಗುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಜಾತ್ಯತೀತ ಜನತಾದಳದ ಅಧ್ಯಕ್ಷ ಶಿವಸ್ವಾಮಿ, ಮಾಜಿ ಜಿಪಂ ಸದಸ್ಯೆ ರಾಧಮ್ಮ ನಾರಾಯಣಗೌಡ, ತಿಮ್ಮೇಗೌಡ, ಪ್ರಕಾಶ್, ಗೋವಿಂದಸ್ವಾಮಿ ಕಾರ್ಯಕರ್ತರು ಇದ್ದರು.
Comments are closed.