ಹೆಣ್ಣಿಗೆ ತಾಯ್ತನ ಅತ್ಯಂತ ಸಂತೋಷ ತರುವ ವಿಚಾರ

145

Get real time updates directly on you device, subscribe now.


ತುಮಕೂರು: ಜಗತ್ತಿನಲ್ಲಿ ಗುರು, ದೈವ, ಹಿರಿಯರು ಎಲ್ಲರ ಋಣ ತೀರಿಸಲು ಸಾಧ್ಯವಿದೆ. ಆದರೆ ತಾಯಿ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.

ಸಮೃದ್ಧಿ ಸೇವಾ ಟ್ರಸ್ಟ್ ಹೆಗ್ಗೆರೆ ಇವರು ಆಯೋಜಿಸಿದ್ದ 201 ಗರ್ಭಿಣಿ ಹೆಣ್ಣು ಮಕ್ಕಳ ಮಡಿಲು ತುಂಬುವ ಸಾಮೂಹಿಕ ಸೀಮಂತ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಹಿಳೆಯರಿಗೆ ಮಡಿಲು ತುಂಬಿ ಮಾತನಾಡಿ, ತನ್ನ ಮಗನ ಬಗ್ಗೆ ನಾಲ್ಕಾರು ಒಳ್ಳೆಯ ಮಾತನಾಡಿದಾಗ ಮಾತ್ರ ತನ್ನ ಮಗನ ಬಗ್ಗೆ ಅಭಿಮಾನ ತುಂಬಿ ಬರಲು ಸಾಧ್ಯ. ಅದಕ್ಕಾಗಿಯೆ ಹಿರಿಯರು ತಾಯಿಗಿಂತ ದೇವರಿಲ್ಲ ಎಂದಿದ್ದಾರೆ. ಇದರ ಹಿಂದಿನ ಗೂಡಾರ್ಥವನ್ನು ನಾವೆಲ್ಲರು ಮಾಡಿಕೊಳ್ಳಬೇಕಿದೆ ಎಂದರು.

ಹೆಣ್ಣಿಗೆ ತಾಯ್ತನವೆಂಬುದು ಅತ್ಯಂತ ಸಂತೋಷ ತರುವ ವಿಚಾರ. ಹೆರಿಗೆ ಎಂಬುದು ಪುನರ್ ಜನ್ಮ, ಅಂತಹ ಪುನರ್ ಜನ್ಮದ ಹೊಸ್ತಿನಲ್ಲಿರುವ 200 ಕ್ಕು ಹೆಚ್ಚು ಹೆಣ್ಣು ಮಕ್ಕಳನ್ನು ಸಮೃದ್ಧಿ ಸೇವಾ ಟ್ರಸ್ಟ್ ನ ಶಾಂತಕುಮಾರಿ, ಅವರ ಗಂಡ ನಂಜಪ್ಪ, ಮಗ ಶಶಾಂಕ ಮತ್ತು ಮಗಳು ಒಂದೆಡೆ ಕಲೆ ಹಾಕಿ, ಅವರನ್ನು ತಮ್ಮ ಮನೆ ಮಕ್ಕಳಂತೆ ಪರಿಗಣಿಸಿ, ಸಾಮೂಹಿಕ ಉಡಿ ತುಂಬುವ ಕೆಲಸ ಮಾಡುತ್ತಿರುವುದು ಸಂತೋಷದ ವಿಚಾರವಾಗಿದೆ. ಇದು ಸಮಾಜ ಸೇವೆಯಲ್ಲಿ ನಿರತರಾಗಿರುವ ಎಲ್ಲಾ ಹೆಣ್ಣು ಮಕ್ಕಳಿಗೆ ಮಾದರಿ. ಇವರ ನಿಸ್ವಾರ್ಥ ಸೇವೆಗೆ ನನ್ನ ಕಡೆಯಿಂದ ಒಂದು ಲಕ್ಷ ರೂ. ಗಳನ್ನು ಟ್ರಸ್ಟ್ ಗೆ ದೇಣಿಗೆ ನೀಡುವುದಾಗಿ ಶಾಸಕ ಗೌರಿಶಂಕರ್ ತಿಳಿಸಿದರು.

ಒಂದು ಕಾಲದಲ್ಲಿ ವಾರದಲ್ಲಿ ಒಂದು ದಿನ ನುಚ್ಚಕ್ಕಿ ಗಂಜಿ ಊಟ ಮಾಡುತಿದ್ದ ನಾವು ಇಂದು ಒಂದು ಲಕ್ಷ ಜನರಿಗೆ ಊಟ ಹಾಕುವ ಶಕ್ತಿ ಇದೆ ಎಂದರೆ ಅದಕ್ಕೆ ನಮ್ಮ ತಾಯಿ ಮಾಡಿದ ದಾನ, ಧರ್ಮವೇ ಕಾರಣ, ಕೊರೊನ ಕಾಲದಲ್ಲಿ ಜಾತಿ, ಧರ್ಮದ ಹಂಗಿಲ್ಲದೆ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಜನರಿಗೆ ಆಹಾರ ಧಾನ್ಯ, ತರಕಾರಿ, ಹಣ್ಣು, ಮೆಡಿಷನ್ ನೀಡಿದಲ್ಲದೆ ಹತ್ತಾರು ಲಕ್ಷ ರೂ. ಖರ್ಚು ಮಾಡಿ ಸರಕಾರಿ ಶಾಲೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿ ಕ್ಷೇತ್ರದ ಜನರ ಆರೋಗ್ಯ ಕಾಪಾಡಿದ್ದೇನೆ. ಈ ಎಲ್ಲಾ ಕಾರ್ಯಕ್ರಮಗಳ ಹಿಂದಿನ ಸ್ಫೂರ್ತಿ ನನ್ನ ತಾಯಿ ಎಂದರು.

ಪ್ರಾಸ್ತಾವಿಕ ವಾಗಿ ಮಾತನಾಡಿದ ಸಮೃದ್ಧಿ ಅಏವಾ ಟ್ರಸ್ಟ್ ನ ಅಧ್ಯಕ್ಷೆ ಶಾಂತಕುಮಾರಿ ನಂಜಪ್ಪ, ಹೆಣ್ಣಿಗೆ ತಾಯ್ತನದ ಸಂದರ್ಭದಲ್ಲಿ ಅನೇಕ ಬಯಕೆಗಳಿರುತ್ತವೆ. ಕೆಲವೊಂದು ಸಂದರ್ಭದಲ್ಲಿ ಕುಟುಂಬದವರು ಅದನ್ನು ಪೂರೈಸಲಾಗದೆ ಕಷ್ಟ ಪಡುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಇಂತಹ ಸಮಯದಲ್ಲಿ ತಾಯಿಯ ಮನಸ್ಸಿನ ವೇದನೆ ಹೇಳತೀರದು. ಹಾಗಾಗಿ ನಮ್ಮ ಹೆಣ್ಣು ಮಕ್ಕಳು ಇಂತಹ ಪರಿಸ್ಥಿತಿಗೆ ಬರಬಾರದು ಎಂಬ ಮನೋಭಾವದಿಂದ ಕಳೆದ ಮೂರು ವರ್ಷಗಳಿಂದ ಈ ರೀತಿಯಲ್ಲಿ ಸಾಮೂಹಿಕ ಸೀಮಂತ ಕಾರ್ಯ ಆಯೋಜಿಸಿಕೊಂಡು ಬರಲಾಗುತ್ತಿದೆ. ಪ್ರತಿ ಬಾರಿಯು ನಮಗೆ ಗ್ರಾಮಾಂತರ ಶಾಸಕ ಗೌರಿಶಂಕರ್ ಅವರು ಸಹಕಾರ ನೀಡುತ್ತಾ ಬಂದಿದ್ದಾರೆ. ಶಾಸಕರಾಗಿ ಕ್ಷೇತ್ರದ ಮನೆ ಮಗನಂತೆ ಹಬ್ಬ ಹರಿದಿನಗಳಲ್ಲಿ ಮಹಿಳೆಯರುಗೆ ಬಾಗಿನ ನೀಡುವ ಕೆಲಸ ಮಾಡಿದ್ದಾರೆ. ಇಂತಹ ಜನಪ್ರತಿನಿಧಿಯೂ ಮುಂದೆಯೂ ನಮ್ಮ ಜೊತೆ ಇರಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತುಮಕೂರು ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ಹಾಲೆನೂರು ಆನಂತ್, ತುಮಕೂರು ನಗರ ಜೆಡಿಎಸ್ ಅಧ್ಯಕ್ಷ ಪ್ರಸನ್ನ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಿ, ಮಾಜಿ ಸಚಿವ ಬಿ.ಸತ್ಯನಾರಾಯಣ ಅವರ ಪತ್ರ ಸತ್ಯಪ್ರಕಾಶ್ ಕಾರ್ಯಕ್ರಮ ಕುರಿತು ಮಾತನಾಡಿದರು. ಜೆಡಿಎಸ್ ಪಕ್ಷದ ಮುಖಂಡರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಿದ್ದಾರ್ಥ ವೈದ್ಯಕೀಯ ವಿದ್ಯಾಲಯದ ವತಿಯಿಂದ ಗರ್ಭಿಣಿಯರಿಗೆ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು. 200ಕ್ಕು ಹೆಚ್ಚು ಗರ್ಭಿಣಿಯರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!