ತುರುವೇಕೆರೆ: ಪಟ್ಟಣದ ಅಧಿದೇವತೆ ಶ್ರೀಉಡುಸಲಮ್ಮ ದೇವಿಯವರ ದೇಗುಲದ ಬಾಗಿಲಿಗೆ ಹಾಕಿದ್ದ ಬೀಗ ಮುರಿದ ಕಳ್ಳರು ಹುಂಡಿಯಲ್ಲಿದ್ದ ನಗದು ದೋಚಿ ಪರಾರಿಯಾಗಿದ್ದಾರೆ
ಪಟ್ಟಣದ ಸಂತೆ ಮೈದಾನದಲ್ಲಿರುವ ಉಡುಸಲಮ್ಮ ದೇವಿಯ ದೇಗುಲಕ್ಕೆ ನಿತ್ಯದ ಪೂಜೆ ಸಲ್ಲಿಸಲು ಆಗಮಿಸಿದ್ದ ಅರ್ಚಕರು ದೇಗುಲದ ಬಾಗಿಲಿಗೆ ಹಾಕಿದ್ದ ಬೀಗ ಮುರಿದಿರುವುದನ್ನು ಕಂಡಿದ್ದಾರೆ. ದೇಗುಲದಲ್ಲಿದ್ದ ಸಿಸಿ ಕ್ಯಾಮೆರಾದ ಡಿವಿಆರ್ ಕಳ್ಳರು ಹೊತ್ತೊಯ್ದು ಚಾಣಾಕ್ಷತೆ ಮೆರೆದಿದ್ದಾರೆ. ದೇಗುಲ ಸಮಿತಿಯವರಿಂದ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ದೇಗುಲದ ಅರ್ಚಕ ಚಂದ್ರು ಮಾತನಾಡಿ, ಶುಕ್ರವಾರ ರಾತ್ರಿ ದೇಗುಲದ ಬೀಗ ಹಾಕಿಕೊಂಡು ಮನೆಗೆ ತೆರಳಿದ್ದೆ, ಶನಿವಾರ ಬೆಳಗ್ಗೆ ಅಮ್ಮನವರಿಗೆ ನಿತ್ಯ ಪೂಜೆ ಸಲ್ಲಿಸಲು ಬಂದಾಗ ದೇಗುಲದ ಬೀಗ ಮುರಿದಿರುವುದು ಕಂಡೆ, ಹುಂಡಿಯಲ್ಲಿದ್ದ ಸುಮಾರು 30 ಸಾವಿರಕ್ಕೂ ಹೆಚ್ಚು ನಗದು ಹೊತ್ತೊಯ್ದಿದ್ದಾರೆ. ಸಿಸಿ ಕ್ಯಾಮೆರಾದ ಡಿವಿಆರ್ ಸಹ ಹೊತ್ತೊಯ್ದಿದ್ದಾರೆ. ಪೊಲೀಸರು ಶೀಘ್ರ ಕಳ್ಳರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ದೇಗುಲದ ಕನ್ವೀನರ್ ಶ್ರೀನಿವಾಸ್, ಗ್ರಾಮಸ್ಥರು ಪಟ್ಟಣದ ಅಧಿದೇವತೆ ದೇಗುಲದಲ್ಲಿ ನಡೆದಿರುವ ಕಳ್ಳತನಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.
Comments are closed.