ಪಾವಗಡ: 2023ರ ಚುನಾವಣೆ ಹಿನ್ನಲೆಯಲ್ಲಿ ಭಾರತ ಸರ್ಕಾರದ ಚುನಾವಣಾ ಆಯೋಗದ ನಿರ್ದೇರ್ಶನದಂತೆ ಜಿಲ್ಲೆಯಾದ್ಯಾಂತ ಮತಗಟ್ಟೆ ಭೇಟಿ ನೀಡುತ್ತೀದ್ದೇನೆ ಎಂದು ತುಮಕೂರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ತಿಳಿಸಿದರು.
ಶನಿವಾರ ಪಟ್ಟಣದ ಸರ್ಕಾರಿ ಬಾಲಕಿಯರ, ಮೌಲಾನಾ, ಉರ್ದು, ವೇಣುಗೋಪಾಲ ಬಾಲಕಿಯರ ಪ್ರೌಢಶಾಲೆ, ಕಸ್ತೂರಿ ಬಾ ಗಾಂಧಿ ಶಾಲೆಗಳಲ್ಲಿನ ಮತಗಟ್ಟೆ ಪರಿವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 2023 ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಜಿಲ್ಲಾಯಾದ್ಯಾಂತ 2600 ಕ್ಕೂ ಅಧಿಕ ಮತಗಟ್ಟೆಗಳಿದ್ದು ಅವುಗಳಲ್ಲಿ ನಾನು 10 ರಷ್ಟು ಮತಗಟ್ಟೆಗಳಿಗೆ ಭೇಟಿ ನೀಡುತ್ತಿದ್ದು, ಉಳಿದಂತೆ ಎಸಿ ತಹಶೀಲ್ದಾರ್, ನಮ್ಮ ಕಂದಾಯ ಸಿಬ್ಬಂದಿ ಭೇಟಿ ನೀಡಿ ಏನಾದರೂ ಸಣ್ಣಪುಟ್ಟ ತೊಂದರೆಗಳಿದ್ದರೆ ಅವುಗಳನ್ನು ಚುನಾವಣೆಗೆ ಮುನ್ನಾ ಸರಿಪಡಿಸಿ ಚುನಾವಣೆ ಆಯೋಗಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ನಾನು ಕೇವಲ ಮತಗಟ್ಟೆಗಳನ್ನು ನೋಡದೆ ಶಾಲಾ ಮಕ್ಕಳ ಜೊತೆ ಸಂಭಾಷಣೆ ಮಾಡಿ ಅವರ ಕಲಿಕಾ ಪ್ರಗತಿ, ಬಿಸಿಯೂಟ ಯೋಜನೆಯ ಪ್ರಯೋಜನ ಮತ್ತು ಶಿಕ್ಷಕರ ಭೋದನಾ ವಿವರಣೆ ಕೇಳಿ ಪಡೆದಿದ್ದೇನೆ ಎಂದು ತಿಳಿಸಿದರು.
ಪಟ್ಟಣದ ಮೌಲಾನಾ ಆಜಾದ್ ಶಾಲೆಗೆ ಭೇಟಿ ನೀಡಿದಾಗ ಎಸ್ಎಸ್ಎಲ್ಸಿಯ ವಿದ್ಯಾರ್ಥಿಗಳಿಗೆ ಹಿಂದಿ ಟೆಸ್ಟ್ ಮಾಡಲಾಗುತ್ತಿತ್ತು. ಈ ವೇಳೆ ಜಿಲ್ಲಾಧಿಕಾರಿಗಳು ವಿದ್ಯಾರ್ಥಿಗಳ ಜೊತೆ ಸಂಭಾಷಣೆ ನಡೆಸಿದರು. ನಂತರ ಪಟ್ಟಣದ ಕಸ್ತೂರಿ ಬಾ ಗಾಂಧಿ ಶಾಲೆಯ ವಿದ್ಯಾರ್ಥಿನಿಯರ ಜೊತೆ ಸಂವಾದ ನಡೆಸಿದಾಗ ಈ ಶಾಲಾ ಮಕ್ಕಳು ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ರಾಜ್ಯ ಮತ್ತು ಅಂತರ್ ರಾಜ್ಯ ಸ್ಫರ್ಧೆಯಲ್ಲಿ ವಿಜೇತರಾಗಿ ಚಿನ್ನದ ಪದಕ ಸಾಧಿಸಿರುವ ವಿಷಯ ಪತ್ರಕರ್ತರಿಂದ ತಿಳಿದು ಕ್ರೀಡಾಪಟುಗಳ ಜೊತೆ ಫೋಟೊ ಕ್ಲಿಕ್ಕಿಸಿ ನಂತರ ವಿದ್ಯಾರ್ಥಿನಿಯಿಂದ ಭಗವದ್ಗೀತೆ ಶ್ಲೋಕ ಕೇಳಿ ಖುಷಿ ಪಟ್ಟರು. ನನ್ನ ಹೆಸರೇನು ಎಂದು ಕೇಳಿದಾಗ ವೈ.ಎಸ್. ಪಾಟೀಲ್ ಎಂದು ತಿಳಿಸಿದಾಗ ವೈ.ಎಸ್ ಎಂದರೇನು ವಿದ್ಯಾರ್ಥಿಗಳ ಪ್ರಶ್ನೆಗೆ ವೈ ಎಂದರೆ ಯಲ್ಲನಗೌಡ, ಎಸ್ ಎಂದರೆ ಶಿವನಗೌಡ ಎಂದು, ಪಾಟೀಲ್ ಎಂದರೆ ಸರ್ ನೇಮ್ ಎಂದು ತಿಳಿಸಿದರು. ನಿಮ್ಮ ಶಾಲಾ ವಾರ್ಷಿಕೋತ್ಸವ ಸಮಾರಂಭಕ್ಕೆ ನಾನು ತಪ್ಪದೆ ಆಗಮಿಸುತ್ತೇನೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದಾಗ ಮಕ್ಕಳ ಸಂತೋಷಕ್ಕೆ ಪಾರವೆ ಇಲ್ಲದಂತಾಯಿತು.
ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ಉತ್ತಮ ಸಾಧನೆ ತೋರಿ ಪ್ರಶಸ್ತಿ ಪಡೆದುಕೊಂಡಿರುವ ಬಗ್ಗೆ ಪತ್ರಕರ್ತರು ಕೇಳಿದಾಗ ಈ ಸಾಧನೆಗೆ ನಾನೊಬ್ಬನೆ ಕಾರಣರಲ್ಲ. ಜಿಲ್ಲಾ ಪಂಚಾಯತ್ನ ಸಿಇಓ, ಜಿಲ್ಲಾ ಎಸ್ಪಿ, ಬಿಎಲ್ಓಗಳು, ಗ್ರಾಮಾಡಳಿತಾಧಿಕಾರಿಗಳು, ಕಂದಾಯ ಅಧಿಕಾರಿಗಳಿಗೆ ಹಾಗೂ ಮತದಾರರಿಗೆ ಈ ಪ್ರಶಸ್ತಿ ಸಲ್ಲುತ್ತದೆ ಎಂದು ತಿಳಿಸಿದರು.
ಈ ವೇಳೆ ತಹಶೀಲ್ದಾರ್ ಡಿ.ವರದರಾಜು, ಕಸಬಾ ಆರ್ಐ ರಾಜಗೋಪಾಲ್, ಪಾವಗಡ ಗ್ರಾಮಾ ಆಡಳಿತಾಧಿಕಾರಿ ರಾಜೇಶ್, ಗೀರೀಶ್, ಮಹೇಶ್, ಪುರಸಭಾ ಆರ್ಐ. ನಂದೀಶ್, ಮುಖ್ಯ ಶಿಕ್ಷಕ ಭೀಮಪ್ಪ, ಚಂದ್ರಶೇಖರ್ ಹಾಜರಿದ್ದರು.
Comments are closed.