ಹೈಕೋರ್ಟ್ ಆದೇಶದಂತೆ ವಾಣಿಜ್ಯ ಮಳಿಗೆ ವಶಕ್ಕೆ

165

Get real time updates directly on you device, subscribe now.


ಕುಣಿಗಲ್: ಪಟ್ಟಣದ ಹೃದಯ ಭಾಗದಲ್ಲಿರುವ ಶೂರಾ ಸಮಿತಿಯ 23 ವಾಣಿಜ್ಯ ಮಳಿಗೆಗಳನ್ನು ಮಾನ್ಯ ಹೈಕೋರ್ಟ್ ಆದೇಶದಂತೆ ಜಿಲ್ಲಾ ವಕ್ಫ್ ಸಮಿತಿ ಅಧಿಕಾರಿಗಳು, ತಾಲೂಕು ಸೂರಾ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ಸೋಮವಾರ ಮಧ್ಯಾಹ್ನ ಪೊಲೀಸರ ರಕ್ಷಣೆಯಲ್ಲಿ ವಶಕ್ಕೆ ಪಡೆದರು.

ಪಟ್ಟಣದ ಈದ್ಗಾ ಮೈದಾನಕ್ಕೆ ಹೊಂದಿ ಕೊಂಡಂತೆ ಶೂರಾ ಸಮಿತಿ ವತಿಯಿಂದ ಮಳಿಗೆ ನಿರ್ಮಿಸಲಾಗಿತ್ತು. ಮಳಿಗೆ ಬಾಡಿಗೆದಾರರಿಗೆ ಹಂಚಿಕೆ ವಿಷಯವಾಗಿ ತಗಾದೆ ಏರ್ಪಟ್ಟು 23 ಮಳಿಗೆಳನ್ನು ಕೆಲವರು ಬಾಡಿಗೆಗೆ ಇದ್ದರು ಎನ್ನಲಾಗಿದ್ದು, ತಗಾದೆ ಉಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದು ಶೂರಾ ಸಮಿತಿ, ವಕ್ಫ್ ಸಮಿತಿಯವರು ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯದ ಆದೇಶದಂತೆ ಸೋಮವಾರ ಜಿಲ್ಲಾ ವಕ್ಫ್ ಅಧಿಕಾರಿ ನವೀದ್, ಪಟ್ಟಣದ ಶೂರಾ ಸಮಿತಿ ಅಧ್ಯಕ್ಷ ಅನ್ಸರ್ಪಾಶ ಹಾಗೂ ಸದಸ್ಯರು ಸೋಮವಾರ ಮಧ್ಯಾಹ್ನ ಡಿವೈಎಸ್ಪಿ ಲಕ್ಷ್ಮೀಕಾಂತ್, ಸಿಪಿಐ ಗುರುಪ್ರಸಾದ್ ಮತ್ತು ಸಿಬ್ಬಂದಿಯ ಬಿಗಿ ಪೊಲೀಸ್ ಬಂದೋ ಬಸ್ತ್ನಲ್ಲಿ 23 ಮಳಿಗೆಗಳನ್ನು ವಶಕ್ಕೆ ಪಡೆದರು. ಕೆಲ ಮಳಿಗೆಗಳನ್ನು ವಶಕ್ಕೆ ಪಡೆಯುವ ಹಂತದಲ್ಲಿ ಮಹಿಳೆಯರು ತೀವ್ರ ಪ್ರತಿರೋಧ ಒಡ್ಡಿ ಅಡ್ಡ ಪಡಿಸಲು ಯತ್ನಿಸಿದರು.

ಮಹಿಳಾ ಪೊಲೀಸರು, ಅಮೃತೂರು ಪಿಎಸೈ ಮಂಗಳಗೌರಮ್ಮ ಮಧ್ಯ ಪ್ರವೇಶಿಸಿ ಮಹಿಳೆಯರನ್ನು ಕಾರ್ಯಾಚರಣೆಗೆ ಅಡ್ಡಿ ಪಡಿಸದಂತೆ ತಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶೂರಾ ಸಮಿತಿ ಅಧ್ಯಕ್ಷ ಅನ್ಸರ್ ಪಾಶ, ಘನ ನ್ಯಾಯಾಲಯದ ಆದೇಶದಂತೆ ಜಿಲ್ಲಾ ವಕ್ಫ್ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ಮಳಿಗೆಗಳನ್ನು ವಶಕ್ಕೆ ಪಡೆಯಲಾಗಿದೆ. ಕೆಲ ಕಿಡಿಗೇಡಿಗಳು ಇಲ್ಲಸಲ್ಲದ ಅಡತಡೆ ಮಾಡುತ್ತಿದ್ದಾರೆ ಎಂದರು.

Get real time updates directly on you device, subscribe now.

Comments are closed.

error: Content is protected !!