ಕಣ್ಣಿನ ದೋಷ ಇರುವವರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

171

Get real time updates directly on you device, subscribe now.


ತುಮಕೂರು: ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ 63ನೇ ಹುಟ್ಟು ಹಬ್ಬದ ಪ್ರಯುಕ್ತ ಮುಖ್ಯಮಂತ್ರಿಗಳ ಕ್ಷೇತ್ರ ಶಿಗ್ಗಾವಿಯ ಕಣ್ಣಿನ ದೋಷ ಇರುವ 63 ಜನರಿಗೆ ತುಮಕೂರು ನಗರದ ಶಾಸಕ ಜಿ.ಬಿ.ಜೋತಿ ಗಣೇಶ್ ನೇತೃತ್ವದಲ್ಲಿ ನಗರದ ನಾರಾಯಣ ನೇತ್ರಾಲಯದಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಬೀಳ್ಕೊಡಲಾಯಿತು.

ಕಣ್ಣಿನ ತಜ್ಞರಾದ ಡಾ.ಬುಜಂಗಶೆಟ್ಟಿ ಅವರ ನೇತೃತ್ವದ ನಾರಾಯಣ ನೇತ್ರಾಲಯದ ವತಿಯಿಂದ ತುಮಕೂರಿನ ಗುಬ್ಬಿ ರಿಂಗ್ ರಸ್ತೆಯಲ್ಲಿ ತೆರೆದಿರುವ ನಾರಾಯಣ ದೇವಾಲಯವನ್ನು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರೇ ಲೋಕಾರ್ಪಣೆಗೊಳಿಸಿದ್ದರು. ಶಿಗ್ಗಾವಿ ಕ್ಷೇತ್ರದ 63 ಜನ ಕಣ್ಣಿನ ದೋಷ ಇರುವ ಬಡ ಮಹಿಳೆಯರು ಮತ್ತು ಪುರುಷರನ್ನು ಗುರುತಿಸಿ ಅವರ ಶಸ್ತ್ರಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು. ಶುಕ್ರವಾರ ಶಿಗ್ಗಾವಿಯಿಂದ ಮುಖ್ಯಮಂತ್ರಿ ಕಳುಹಿಸಿದ ವಾಹನದಲ್ಲಿ ಬಂದಿದ್ದ ರೋಗಿಗಳಿಗೆ ಸಿದ್ದಗಂಗಾ ಮಠದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಿದ್ದ ಶಾಸಕ ಜಿ.ಬಿ.ಜೋತಿ ಗಣೇಶ್, ಎರಡು ದಿನಗಳ ಕಾಲವೂ ಅವರಿಗೆ ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ಸಂಜೆ ಊಟದ ವ್ಯವಸ್ಥೆ ಮಾಡಿದ್ದಲ್ಲದೆ ಶಸ್ತ್ರ ಚಿಕಿತ್ಸೆ ಮುಗಿಸಿ ಹೊರಡುವ ಸಂದರ್ಭದಲ್ಲಿ ಅವರಿಗೆ ಹಣ್ಣು, ಹಂಪಲು ನೀಡಿ ಬಿಳ್ಕೋಟ್ಟರು.

ಈ ವೇಳೆ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ತುಮಕೂರಿನ ರಿಂಗ್ ರಸ್ತೆಯಲ್ಲಿ ಖ್ಯಾತ ಕಣ್ಣಿನ ವೈದ್ಯ ಡಾ.ಬುಜಂಗ್ಶೆಟ್ಟಿ ಅವರು ನಾರಾಯಣ ದೇವಾಲಯದ ಹೆಸರಿನಲ್ಲಿ ಕ್ಯಾಸ್ಲೇಸ್ ಆಸ್ಪತ್ರೆ ತೆರೆದಿದ್ದು, ಮೊದಲ ಬಾರಿಗೆ ನಮ್ಮ ಮುಖ್ಯ ಮಂತ್ರಿಗಳು ಪ್ರತಿನಿಧಿಸುವ ಶಿಗ್ಗಾವಿ ಕ್ಷೇತ್ರದ ಜನರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಅವರಿಗೆ ಬೇಕಾದ ಔಷಧಿಯನ್ನು ಉಚಿತವಾಗಿ ನೀಡಲಾಗಿದೆ. ಎಲ್ಲರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಎಲ್ಲರೂ ಆರೋಗ್ಯದಿಂದ ಇದ್ದಾರೆ. ಅವರನ್ನು ಇಂದು ಅವರ ಊರುಗಳಿಗೆ ಬಂದ ವಾಹನಗಳಲ್ಲಿಯೇ ವಾಪಸ್ ಹೋಗಲು ಅವಕಾಶ ಕಲ್ಪಿಸಲಾಗಿದೆ. ಎರಡು ದಿನಗಳ ಕಾಲ ಬಂದ ಅಷ್ಟೂ ಜನರಿಗೆ ಅಗತ್ಯವಿರುವ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸುವ ಅವಕಾಶ ನೀಡಿ, ಹಿರಿಯರ ಸೇವೆಗೆ ಅವಕಾಶ ಕಲ್ಪಿಸಿದ್ದಾರೆ. ಇದಕ್ಕಾಗಿ ಡಾ.ಬುಜಂಗಶೆಟ್ಟಿ ಮತ್ತು ವೈದ್ಯರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ನಾರಾಯಣ ದೇವಾಲಯದ ಕಾವ್ಯಶ್ರೀ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ರೋಗಿಗಳು ಅನುಸರಿಸಬೇಕಾದ ಕ್ರಮ, ಕಣ್ಣಿನ ಡ್ರಾಪ್ ಹಾಕಿಕೊಳ್ಳುವ ರೀತಿ ವಿವರಿಸಿದರು.
ಈ ವೇಳೆ ನಾರಾಯಣ ದೇವಾಲಯದ ವೈದ್ಯಕೀಯ ಸಿಬ್ಬಂದಿ ಡಾ.ಬಾಲಕೃಷ್ಣ, ಸಿದ್ದೇಶ್, ಚಿದಾನಂದ್, ರಾಜಣ್ಣ, ಕಾವ್ಯಶ್ರೀ, ಧನಂಜಯ, ಹರ್ಷಿತ್, ವಿಮಲ, ಶಿವರಾಜು, ನಿರೋಷ, ಸ್ವಾಮಿ, ಅರಸು, ರಕ್ಷಿತ್, ವಿಶ್ವನಾಥ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!