ಕೊರಟಗೆರೆ: ತನ್ನ ಸ್ವಂತ ಅಜ್ಜಿಯನ್ನೇ ಮನೆಯಿಂದ ಹೊರ ಹಾಕಿದ ಪಾಪಿ ಮೊಮ್ಮಗ, ನ್ಯಾಯಕ್ಕಾಗಿ ಮಧುಗಿರಿ ಎಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ಅಜ್ಜಿ ಕಾವಲಮ್ಮ. ಬೀದಿ ಪಾಲಾಗಿದ್ದ ವಯೋ ವೃದ್ಧೆ ಅಜ್ಜಿಗೆ ಆಸರೆಯಾದ ಮಧುಗಿರಿ ಎಸಿ ನ್ಯಾಯಾಲಯ. ಹಿರಿಯ ನಾಗರಿಕ ಕಾಯ್ದೆ ಅನ್ವಯ ಅಜ್ಜಿಯ ಪರವಾಗಿ ಆದೇಶ. ಕೊರಟಗೆರೆ ತಹಶೀಲ್ದಾರ್ ಮತ್ತು ಪೊಲೀಸರ ಭದ್ರತೆಯಲ್ಲಿ ಮತ್ತೆ ಮನೆ ಸೇರಿದ ಅಜ್ಜಿ.
ಕೊರಟಗೆರೆ ಪಟ್ಟಣದ 3ನೇ ವಾರ್ಡ್ನ ಹನುಮಂತಪುರ ವಾಸಿಯಾದ ಲೇ.ರಾಮಯ್ಯನ ಮಡದಿಯಾದ ಕಾವಲಮ್ಮ ಎನ್ನುವ ವೃದ್ಧೆಯ ಮಗಳಾದ ಲೇ.ಲಕ್ಷ್ಮಮ್ಮನ ಮಗನಾದ ಮಾರುತಿ ಎಂಬಾತ ಕಳೆದ 6 ತಿಂಗಳ ಹಿಂದೆಯಷ್ಟೆ ಮನೆಯಿಂದ ಹೊರ ಹಾಕಿದ ದಾರುಣ ಘಟನೆ ನಡೆದಿತ್ತು. ಹಿರಿಯ ನಾಗರಿಕ ಕಾಯ್ದೆಯಂತೆ ವಯೋ ವೃದ್ಧೆ ಅಜ್ಜಿ ಮತ್ತೆ ಪೊಲೀಸರ ಭದ್ರತೆಯಲ್ಲಿ ಮನೆ ಸೇರಿದ್ದಾರೆ.
ವಯೋ ವೃದ್ಧೆ ಕಾವಲಮ್ಮ ನ್ಯಾಯಕ್ಕಾಗಿ ವಿಶೇಷ ಚೇತನ ಮಗನ ಜೊತೆಗೂಡಿ ಮನೆಗಾಗಿ ಕೊರಟಗೆರೆ ತಹಶೀಲ್ದಾರ್ ಮೂಲಕ ಮಧುಗಿರಿ ಎಸಿ ನ್ಯಾಯಾಲಯಕ್ಕೆ ಕಳೆದ 6 ತಿಂಗಳ ಹಿಂದೆಯಷ್ಟೆ ಅರ್ಜಿ ಸಲ್ಲಿಸುತ್ತಾರೆ. ಮನೆ ಕಂದಾಯ, ಮನೆ ಕ್ರಯ, ವಿದ್ಯುತ್ ಪಾವತಿ ಶುಲ್ಕದ ರಸೀದಿ ಪತ್ರ ಸೇರಿದಂತೆ ಇನ್ನೀತರ ದಾಖಲೆ ಪರಿಶೀಲಿಸಿದ ಮಧುಗಿರಿ ಎಸಿ ನ್ಯಾಯಾಲಯ 78 ವರ್ಷ ವಯಸ್ಸಿನ ಕಾವಲಮ್ಮನ ಪರವಾಗಿ ತೀರ್ಪುನೀಡಿ ಆದೇಶ ಮಾಡಿದ್ದಾರೆ.
ಮಧುಗಿರಿ ಉಪ ವಿಭಾಗಾಧಿಕಾರಿ ಸಿ.ಆನಂದ್ ಅವರ ಆದೇಶದಂತೆ ಕೊರಟಗೆರೆ ತಹಶೀಲ್ದಾರ್ ನರಸಿಂಹಮೂರ್ತಿ ಮತ್ತು ಎಎಸೈ ಧರ್ಮೆಗೌಡ, ರಾಮಚಂದ್ರಪ್ಪ ಸೇರಿದಂತೆ ಕಂದಾಯ ಇಲಾಖೆಯ ಪ್ರತಾಪ್ ಕುಮಾರ್, ಬಸವರಾಜು, ಪವನಕುಮಾರ್, ರಘು ನೇತೃತ್ವದ ಪೊಲೀಸರ ತಂಡ ವಯೋವೃದ್ಧೆ ಅಜ್ಜಿ ಕಾಮಲಮ್ಮ ಮತ್ತು ವಿಶೇಷ ಚೇತನ ಬೈರೇಗೌಡನಿಗೆ ಮತ್ತೆ ಮನೆ ಹಸ್ತಾಂತರ ಮಾಡುವಲ್ಲಿ ಯಶಸ್ವಿ ಆಗಿದೆ.
Comments are closed.