ವೈಭವದ ಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವ

187

Get real time updates directly on you device, subscribe now.


ಶಿರಾ: ಶತಮಾನಗಳ ಇತಿಹಾಸ ಹೊಂದಿರುವ ಇಲ್ಲಿನ ಪ್ರಸಿದ್ಧ ಶ್ರೀಲಕ್ಷ್ಮೀನಾರಾಯಣ ಸ್ವಾಮಿ ಬ್ರಹ್ಮರಥೋತ್ಸವ ಭಾನುವಾರ ಮಧ್ಯಾಹ್ನ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ನಗರದ ಏಕೈಕ ರಥೋತ್ಸವಕ್ಕೆ ಶುಕ್ರವಾರ ಅಂಕುರಾರ್ಪಣೆ ನಡೆಸಲಾಗಿತ್ತು. ಶನಿವಾರ ಸಂಜೆ ದೇವಾಲಯದ ಆವರಣದಲ್ಲಿ ಭೂ-ನೀಲಾ ಸಹಿತ ನಾರಾಯಣರ ಕಲ್ಯಾಣೋತ್ಸವ ವಿಜೃಂಭಣೆಯಿಂದ ಜರುಗಿತು.

ಭಾನುವಾರ ಬೆಳಗ್ಗೆ ರಥೋತ್ಸವಕ್ಕೂ ಮುನ್ನ ಸಾಂಪ್ರದಾಯಿಕ ಆಚರಣೆ, ಹೋಮ, ಪೂರ್ಣಾಹುತಿ ನಂತರ ದೇವರ ಉತ್ಸವ ವಿಗ್ರಹವನ್ನು ರಥದಲ್ಲಿ ಪ್ರತಿಷ್ಟಾಪಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ದಾರಿಯುದ್ದಕ್ಕೂ ಹಲವು ಭಕ್ತರು ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ಕಂದಾಯ ಇಲಾಖೆ ಅಧಿಕಾರಿ ಮಂಜುನಾಥ್, ನಗರಸಭಾ ಸದಸ್ಯ ಆರ್. ರಾಮು, ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಬಿ.ಎನ್. ಅಚ್ಚುತರಾವ್, ಅರ್ಚಕ ಸತ್ಯನಾರಾಯಣ ಶರ್ಮ, ಸುರೇಶ್ ಶಾಸ್ತ್ರಿ, ಜಯಕೃಷ್ಣ, ವೆಂಕಟರಂಗಪ್ಪ, ಮುರಳಿಧರ, ಡಿ.ಎಸ್.ದತ್ತಾತ್ರೇಯ, ಗುರುಪ್ರಸಾದ್, ಪ್ರಕಾಶ್ ಮುದ್ದುರಾಜ್, ರೂಪೇಶ್ ಕೃಷ್ಣಯ್ಯ, ಶಾರದ ಮಹಿಳಾ ಮಂಡಳಿ ಸದಸ್ಯರು ಸೇರಿದಂತೆ ಹಲವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!