ಜಲ ಜೀವನ್ ಮಿಷನ್ ಯೋಜನೆಗೆ ಚಾಲನೆ

293

Get real time updates directly on you device, subscribe now.


ಮಧುಗಿರಿ: ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಕೊಡುವ 8 ಕೋಟಿ ರೂ. ವೆಚ್ಚದ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ವೀರಭದ್ರಯ್ಯ ತಿಳಿಸಿದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ನಾನು ಶಾಸಕನಾಗಿ 4 ವರ್ಷ 8 ತಿಂಗಳ ಅವಧಿಯಲ್ಲಿ ಹಲವಾರು ಜನಪರ ಯೋಜನೆಗಳಿಗೆ ಚಾಲನೆ ನೀಡಿದ್ದೇನೆ. ಶಾಸಕನಾದ ಮೊದಲ ವರ್ಷ ತೀವ್ರ ಬರಗಾಲ ಎದುರಿಸಿದ್ದು, ಮೇವು ಬ್ಯಾಂಕ್ ತೆರೆದು ರಾಸುಗಳಿಗೆ 6 ಕೋಟಿ 50 ಲಕ್ಷ ರೂ. ವೆಚ್ಚದಲ್ಲಿ ಪ್ರತಿ ಮನೆ ಮನೆಗೆ ನೀವು ವಿತರಿಸಿ ಇತಿಹಾಸ ನಿರ್ಮಿಸಲಾಗಿದ್ದು, ವಿರೋಧ ಪಕ್ಷದ ಸರ್ಕಾರವಿದ್ದರೂ ಅನುದಾನ ತಂದು ಅಭಿವೃದ್ಧಿ ಪಡಿಸಲಾಗಿದೆ. ಚೆಕ್ ಡ್ಯಾಂ, ರಸ್ತೆ, ಆಸ್ಪತ್ರೆ, ಶಾಲಾ ಕಟ್ಟಡ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಲಾಗಿದೆ.

ಕುಮಾರ ಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ 25000 ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದನ್ನು ಸ್ಮರಿಸಿ ಮತ್ತೆ ಅವರು ಮುಖ್ಯಮಂತ್ರಿಯಾದರೆ ಶ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಲಾಗುವುದು. ಅದೇ ಇದೇ ರೀತಿ ವಿಧವಾ ವೇತನ, ವೃದ್ಧಾಪ್ಯ ವೇತನ ಹೆಚ್ಚಿಸುವುದರ ಜೊತೆಗೆ ರೈತ ಚೈತನ್ಯ ಯೋಜನೆ ಅಡಿಯಲ್ಲಿ ಪ್ರತಿ ಎಕರೆಗೆ 10 ಸಾವಿರ ರೂ. ಗಳ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಶೀಘ್ರದಲ್ಲೇ ವಿಧಾನ ಸಭಾ ಚುನಾವಣೆ ಬರಲಿದ್ದು, ಕ್ಷೇತ್ರದ ಜನತೆ ಮತ್ತೊಮ್ಮೆ ನನ್ನನ್ನು ಆಶೀರ್ವದಿಸಬೇಕು. ಜೊತೆಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಖಚಿತ. ಅವರು ಸಿಎಂ ಆದರೆ ಮಧುಗಿರಿಯ ಭಾಗ್ಯದ ಬಾಗಿಲು ತೆರೆದಂತೆ ಮಧುಗಿರಿಯನ್ನು ಜಿಲ್ಲಾ ಕೇಂದ್ರ ಮಾಡುವುದರ ಜೊತೆಗೆ ಪ್ರವಾಸೋದ್ಯಮ ಕೇಂದ್ರ, ಎತ್ತಿನಹೊಳೆ ಯೋಜನೆ ಜಾರಿ, ಕೈಗಾರಿಕಾ ವಸಹಾತು ನಿರ್ಮಾಣ ಮುಂತಾದ ಯೋಜನೆ ನೆರವೇರಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡ ತುಂಗೋಟಿ ರಾಮಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜು, ಶ್ರೀನಿವಾಸ್, ವೆಂಕಟಪುರ ಗೋವಿಂದರಾಜು, ಮರುವೇಕೆರೆ ಗ್ರಾಪಂ ಅಧ್ಯಕ್ಷೆ ಸುಮಾ ಸಿದ್ದೇಶ್, ಜಯಲಕ್ಷಮ್ಮ, ರಂಗನಾಥ್, ರಾಮಣ್ಣ, ಕಂಬತನಹಳ್ಳಿ ರಘು, ಸಿದ್ದಣ್ಣ, ಶಿವಣ್ಣ, ಗುತ್ತಿಗೆದಾರರ ಆನಂದ್ ಇತರರಿದ್ದರು.

ಈ ಸಂದರ್ಭದಲ್ಲಿ ದೊಡ್ಡೇರಿ ಹೋಬಳಿಯ ಕಿತ್ತಗಳಿ, ತಿಪ್ಪನಹಳ್ಳಿ, ಆವಿನಮಡುಗು, ದಂಡಿನದಿಬ್ಬ, ಕಸಬಾ ವ್ಯಾಪ್ತಿಯ ಆರ್.ಎನ್.ರೊಪ್ಪ, ಜಡೇಗೊಂಡನಹಳ್ಳಿ, ಮರುವೇಕೆರೆ, ಭಕ್ತರಹಳ್ಳಿ ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.

Get real time updates directly on you device, subscribe now.

Comments are closed.

error: Content is protected !!