ಕೊರಟಗೆರೆ: ಅಭಿವೃದ್ಧಿಯೇ ನನ್ನ ಹೆಜ್ಜೆ ಗುರುತು, ಜನರಿಗಾಗಿ ನನ್ನ ಜೀವನವೇ ಮುಡಿಪು, ಕೊರಟಗೆರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನನ್ನ ಶಾಸಕ ಅವಧಿಯ 5 ವರ್ಷದಲ್ಲಿ ಒಟ್ಟು 4080 ವಿವಿಧ ಕಾಮಗಾರಿಗೆ 2573 ಕೋಟಿ ವಿಶೇಷ ತಂದಿದ್ದೇನೆ. 2018 ರಿಂದ 2023ರ 5 ವರ್ಷದ ಅವಧಿಯ ಅಭಿವೃದ್ಧಿಯ ಅಂಕಿ ಅಂಶದ ದಾಖಲೆಯ ಹೆಜ್ಜೆ ಗುರುತು ಪುಸ್ತಕವನ್ನು ನನ್ನ ಕ್ಷೇತ್ರದ ಮತದಾರರಿಗೆ ನೀಡುತ್ತೇನೆ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕೊರಟಗೆರೆ ಪಟ್ಟಣದಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯ ಹೆಜ್ಜೆ ಗುರುತು ಪುಸ್ತಕ ಬಿಡುಗಡೆ ಮಾಡಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2018 ರಿಂದ 2023ರ 5ವರ್ಷದ ಅವಧಿಯಲ್ಲಿ ನಾನು ಕೊರಟಗೆರೆ ಪಟ್ಟಣ ಪಂಚಾಯ್ತಿ ಮತ್ತು ಕೊರಟಗೆರೆ ಕ್ಷೇತ್ರದ 36 ಗ್ರಾಪಂ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 1294 ಕೋಟಿ ಮತ್ತು ಎತ್ತಿನಹೊಳೆ ಯೋಜನೆಯ 1,279 ಕೋಟಿ ಅನುದಾನ ಸೇರಿ ಒಟ್ಟು 2573 ಕೋಟಿ ಅನುದಾನ ತಂದಿದ್ದೇನೆ. ಬಡವರಿಗೆ 9275 ಮನೆ, 153 ಜನರಿಗೆ ಗಂಗಾ ಕಲ್ಯಾಣ, 576 ಜನರಿಗೆ ಸಾಲ ಸೌಲಭ್ಯ, ಇತರೆ ಇಲಾಖೆಯಡಿ 9521 ಜನರಿಗೆ ಸರಕಾರಿ ಸೌಲಭ್ಯ ಸೇರಿ ಒಟ್ಟು 19501 ಜನ ಫಲಾನುಭವಿಗಳಿಗೆ ಸರಕಾರದ ಸೌಲಭ್ಯ ಕಲ್ಪಿಸಿದ್ದೇನೆ ಎಂದರು.
ಬಡ ಜನತೆಯ ಶೈಕ್ಷಣಿಕ ಅಭಿವೃದ್ಧಿಗೆ ಕೊರಟಗೆರೆ ಕ್ಷೇತ್ರದ ನಾಲ್ಕು ದಿಕ್ಕಿನಲ್ಲಿಯು ಶಿಕ್ಷಣ ಕ್ರಾಂತಿ, ಗ್ರಾಮೀಣ ರೈತರ ಅನುಕೂಲಕ್ಕಾಗಿ ನೂರಾರು ಚೆಕ್ಡ್ಯಾಂ ನಿರ್ಮಾಣ, ಹಳ್ಳಿಗಳ ಅಭಿವೃದ್ಧಿಗೆ ರಸ್ತೆ ಮತ್ತು ಚರಂಡಿ, ಕೆಎಸ್ಆರ್ಪಿ ಘಟಕ, ಸರಕಾರಿ ಶಾಲೆಗಳ ಉನ್ನತೀಕರಣ, ಅಗ್ನಿಶಾಮಕ ಠಾಣೆ, ಪೊಲೀಸ್ ಠಾಣೆ, ವಸತಿಗೃಹ, ಆರೋಗ್ಯ ಕೇಂದ್ರ, ಒಳಾಂಗಣ ಕ್ರೀಂಡಾಗಣ, ರೈತ ಸಂಪರ್ಕ ಕೇಂದ್ರ, ವೈಟ್ ಟ್ಯಾಪಿಂಗ್ ರಸ್ತೆ ಸೇರಿದಂತೆ ನೂರಾರು ಶಾಶ್ವತ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಮಾಜಿ ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಅಶ್ವತ್ಥನಾರಾಯಣ್, ಮಾಜಿ ತಾಪಂ ಉಪಾಧ್ಯಕ್ಷ ವೆಂಕಟಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್, ಮಾಜಿ ನಗರಸಭಾ ಉಪಾಧ್ಯಕ್ಷ ವಾಲೇಚಂದ್ರಯ್ಯ, ಪಪಂ ಸದಸ್ಯ ಬಲರಾಮಯ್ಯ, ಓಬಳರಾಜು, ನಾಗರಾಜು, ಮುಖಂಡರಾದ ಕವಿತಮ್ಮ, ಜಯರಾಮು, ವೆಂಕಟರಾಜು, ಅರವಿಂದ, ರವಿಕುಮಾರ್, ಮಾರುತಿ ಇತರರು ಇದ್ದರು.
Comments are closed.