ಜನರ ಒಡನಾಡಿಯಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ: ಪರಂ

183

Get real time updates directly on you device, subscribe now.


ಕೊರಟಗೆರೆ: ಕರ್ನಾಟಕದ ಡಿಸಿಎಂ ಮತ್ತು ಕೊರಟಗೆರೆಯ ಶಾಸಕನಾಗಿ 5 ವರ್ಷ ಜನರ ಒಡನಾಡಿಯಾಗಿ ಪ್ರತಿ ಹಳ್ಳಿಯಲ್ಲೂ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಆದರೆ ನಾನು ಜನರ ಕೈಗೆ ಸೀಗೋದೇ ಇಲ್ಲವೆಂದು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರು ಆರೋಪ ಮಾಡ್ತಾರೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.

ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಯಾದವ ಸಮುದಾಯದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕೊರಟಗೆರೆ ಕ್ಷೇತ್ರದ ಜನತೆಯ ಆರ್ಶೀವಾದದಿಂದ ನನಗೆ ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ, ಡಿಸಿಎಂ ಹುದ್ದೆ ದೊರೆತಿದೆ. ಭಾರತದ ಯಾವುದೇ ರಾಜ್ಯಕ್ಕೆ ಹೋದ್ರು ಅಲ್ಲಿ ಕೊರಟಗೆರೆ ಅಂದ್ರೆ ಡಾ.ಜಿ.ಪರಮೇಶ್ವರ್ ಅಂತಾರೆ. ಕೊರಟಗೆರೆ ಕ್ಷೇತ್ರಕ್ಕೆ ಕಳೆದ 5 ವರ್ಷದಲ್ಲಿ 2500 ಕೋಟಿ ಅನುದಾನ ತಂದು ಮತದಾರರ ಋಣ ತೀರಿಸುವ ಕೆಲಸ ಮಾಡಿದ್ದೇನೆ. ಅಂಕಿ ಅಂಶದ ದಾಖಲೆಯ ಪುಸ್ತಕ ನೀಡಿ 2023ರ ಚುನಾವಣೆಗೆ ಹೋಗ್ತಿದ್ದೇನೆ ಎಂದು ತಿಳಿಸಿದರು.

ತುಮಕೂರು ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಸಣ್ಣಮುದ್ದಯ್ಯ ಮಾತನಾಡಿ, 2023 ಕ್ಕೆ ಕೊರಟಗೆರೆ ಕ್ಷೇತ್ರದಿಂದ ಡಾ.ಜಿ.ಪರಮೇಶ್ವರ್ ಮತ್ತೆ ಶಾಸಕರಾದ್ರೆ ಕರ್ನಾಟಕ ರಾಜ್ಯದ ಸಿಎಂ ಆಗ್ತಾರೆ. ಗೊಲ್ಲ ನುಡಿದ ಮಾತು ಎಂದಿಗೂ ಸುಳ್ಳಾಗಲ್ಲ. ಬ್ರೋಕರ್ ಮತ್ತು ದಳ್ಳಾಳಿಗಳ ಮಾತಿಗೆ ಯಾರು ಬೆಲೆ ಕೊಡಬೇಡಿ. ತುಮಕೂರು ಜಿಲ್ಲೆಯ ಗೊಲ್ಲ ಸಮುದಾಯದ ಪ್ರತಿನಿಧಿ ಒಬ್ಬರೆ, ಅವರೇ ಪರಮೇಶ್ವರ್. ಪರಮೇಶ್ವರ್ ಸಿಎಂ ಆಗ್ಬೇಕು. ಗೊಲ್ಲರು ಎಂಎಲ್ಸಿ ಆಗ್ಬೇಕು. ಅದೆ ನಮ್ಮೆಲ್ಲರ ಪ್ರತಿಜ್ಞೆ ಎಂದು ತಿಳಿಸಿದರು.

ತುಮಕೂರು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ ಮಾತನಾಡಿ, ಡಾ.ಜಿ.ಪರಮೇಶ್ವರ್ ಜೊತೆ ಗೊಲ್ಲ ಸಮುದಾಯ 30 ವರ್ಷದಿಂದ ಇದ್ದೀವಿ. 2023ಕ್ಕೆ ಪರಮೇಶ್ವರ್ ಕಡೆಯ ಚುನಾವಣೆ ಆಗಲಿದೆ. ಜೇಬುಗಳ್ಳರ ಬಗ್ಗೆ ಎಚ್ಚರ ಅಗತ್ಯ. ಯಾರು ಒತ್ತಡಕ್ಕೆ ಒಳಗಾಗದೆ ಒಂದಾಗಿ, ಶ್ರೀಕೃಷ್ಣ ಪರಮಾತ್ಮನ ಹೆಸರಲ್ಲಿ ನಾವು ಘೋಷಣೆ ಮಾಡ್ತೀವಿ. ನಾವೆಲ್ಲರೂ ಮತ್ತೆ ಪರಮೇಶ್ವರ್ಗೆ ಆರ್ಶೀವಾದ ಮಾಡಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ವೇಣುಗೋಪಾಲ್, ಓಬಿಸಿ ಜಿಲ್ಲಾಧ್ಯಕ್ಷ ಪುಟ್ಟರಾಜು, ಕೊರಟಗೆರೆ ಅಧ್ಯಕ್ಷ ಆನಂದ್, ಮಾಜಿ ತಾಪಂ ಅಧ್ಯಕ್ಷ ಟಿ.ಸಿ.ರಾಮಯ್ಯ, ಸದಸ್ಯ ವೀರಣ್ಣ, ಗ್ರಾಪಂ ಅಧ್ಯಕ್ಷ ರಾಮಕೃಷ್ಣಯ್ಯ, ಪಾವರ್ತಮ್ಮ, ಶಿವರಾಮಯ್ಯ, ಯಾದವ ಮುಖಂಡರಾದ ರಂಗನಾಥ, ಪುಟ್ಟಣ್ಣ, ವೆಂಕಟೇಶ್, ಕೃಷ್ಣಯ್ಯ, ಚಂದ್ರು, ಲಕ್ಷ್ಮೀನರಸಪ್ಪ, ನರೇಂದ್ರ, ಮುತ್ತುರಾಜು, ಶಿವರಾಮು, ಬಸವರಾಜು, ಕಾಂತರಾಜು, ನರಸಿಂಹರಾಜು, ನಾಗರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!