ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಿ

153

Get real time updates directly on you device, subscribe now.


ಗುಬ್ಬಿ: ವಕೀಲ ಸಂರಕ್ಷಣಾ ಕಾಯ್ದೆಗೆ ಒತ್ತಾಯಿಸಿ ಪಟ್ಟಣದಲ್ಲಿ ವಕೀಲರು ಸೋಮವಾರ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಗುಬ್ಬಿ ವೀರಣ್ಣ ವೃತ್ತದಲ್ಲಿ ಮಾನವಸರಪಳಿ ನಿರ್ಮಿಸಿ, ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ವಕೀಲರ ಮೇಲೆ ಇತ್ತೀಚೆಗೆ ಹಲ್ಲೆ ಪ್ರಕರಣ ಹೆಚ್ಚಾಗುತ್ತಿದ್ದು ಅವರ ಸಂರಕ್ಷಣೆಗೆ ಕಾಯ್ದೆ ಅಗತ್ಯವಾಗಿದೆ ಎಂದರು.

ವಕೀಲರ ಸಂಘದ ಉಪಾಧ್ಯಕ್ಷ ಕೆ.ಟಿ.ಪ್ರಕಾಶ್ ಮಾತನಾಡಿ, ವಕೀಲರಿಗೆ ರಕ್ಷಣೆ ಇಲ್ಲವಾದಲ್ಲಿ ಕೆಲಸ ನಿರ್ವಹಿಸುವುದು ಕಷ್ಟವಾಗುತ್ತೆ. ಸರ್ಕಾರವು ವಕೀಲರ ಸಂಕಷ್ಟಗಳನ್ನು ಅರ್ಥೈಸಿಕೊಂಡು ಅವರ ರಕ್ಷಣೆಗೆ ಕಾಯ್ದೆಯನ್ನು ಪ್ರಸ್ತುತ ಅಧಿವೇಶನದಲ್ಲಿಯೇ ಪಾಸು ಮಾಡುವಂತೆ ಒತ್ತಾಯಿಸಿದರು.

ಸಂಘದ ಕಾರ್ಯದರ್ಶಿ ರವೀಶ್ ಮಾತನಾಡಿ, ಸಂವಿಧಾನದ ರಕ್ಷಕರಂತೆ ಕೆಲಸ ಮಾಡುತ್ತಿರುವ ವಕೀಲರಿಗೆ ರಕ್ಷಣೆ ಅಗತ್ಯವಿದೆ. ಇಂದಿನ ಪ್ರತಿಭಟನೆ ಕೇವಲ ಸಾಂಕೇತಿಕವಾಗಿದ್ದು, ಕಾಯ್ದೆ ಅನುಮೋದನೆ ಗೊಳ್ಳದಿದ್ದರೆ ಪ್ರತಿಭಟನೆ ತೀವ್ರತೆ ಎದುರಿಸಬೇಕಾಗತ್ತದೆ ಎಂದು ಎಚ್ಚರಿಕೆ ನೀಡಿದರು.

ವಕೀಲ ಕೆ.ಜಿ.ನಾರಾಯಣ್ ಮಾತನಾಡಿ, ವಕೀಲರು ಯಾವುದೇ ಭದ್ರತೆ ಇಲ್ಲದ ವಕೀಲರಿಗೆ ಏನಾದರೂ ಹೆಚ್ಚು-ಕಮ್ಮಿಯಾದಲ್ಲಿ ಅವರ ಕುಟುಂಬಗಳು ಬೀದಿಗೆ ಬೀಳುವ ಸಾಧ್ಯತೆ ಇರುವುದರಿಂದ ಸರ್ಕಾರ ತಕ್ಷಣವೇ ವಕೀಲರ ರಕ್ಷಣೆಗೆ ಮುಂದಾಗಬೇಕು ಎಂದರು.
ಹಿರಿಯ ವಕೀಲ ಸದಾಶಿವಯ್ಯ ಮಾತನಾಡಿ, ಕಕ್ಷಿಧಾರರ ಪರವಾಗಿ ನಿಲ್ಲುವುದೇ ವಕೀಲರ ವೃತ್ತಿಧರ್ಮ ವಾಗಿದ್ದರೂ, ಅದನ್ನು ಅರ್ಥೈಸಿಕೊಳ್ಳದೆ ಪೊಲೀಸರನ್ನು ಒಳಗೊಂಡಂತೆ ಕೆಲವರು ವಕೀಲರ ಮೇಲೆ ಹಲ್ಲೆ ನಡೆಸುವ ಮೂಲಕ ಕಾನೂನನ್ನು ಕೈಗೆತ್ತಿಕೊಳ್ಳುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದರು.
ಈ ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಎಲ್ಲಾ ವಕೀಲರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!