ತುರುವೇಕೆರೆ: ತಾಲೂಕು ಜೆಡಿಎಸ್ ಛಲವಾದಿ ಘಟಕದ ಬಗ್ಗೆ ಮಾತನಾಡುತ್ತಿರುವ ಜಿಪಂ ಮಾಜಿ ಸದಸ್ಯ ಹನುಮಂತಯ್ಯ ಅವಕಾಶವಾದಿ ರಾಜಕಾರಣಿಯಾಗಿದ್ದು, ಜೆಡಿಎಸ್ ಛಲವಾದಿ ಘಟಕದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಜೆಡಿಎಸ್ ಛಲವಾದಿ ಘಟಕದ ಅಧ್ಯಕ್ಷ ಬೀಚನಹಳ್ಳಿ ಮಹಾದೇವಯ್ಯ ಲೇವಡಿ ಮಾಡಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಹನುಮಂತಯ್ಯ ತಮ್ಮ ಸ್ವಾರ್ಥಕ್ಕಾಗಿ ಜೆಡಿಎಸ್ ಪಕ್ಷ ಸೇರಿದ್ದರು. ಜೆಡಿಎಸ್ ಪಕ್ಷದಲ್ಲಿ ತಮ್ಮ ಬೇಳೆ ಬೇಯದಿದ್ದಾಗ ಮತ್ತೆ ಕಾಂಗ್ರೆಸ್ ಸೇರಿರುವ ಹನುಮಂತಯ್ಯ ವಲಸೆ ರಾಜಕಾರಣಿ ಇದ್ದಂತೆ, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರ ಕಾಲದಲ್ಲಿ ಛಲವಾದಿಗಳಿಗೆ ನೀಡಿರುವ ಗಂಗಾ ಕಲ್ಯಾಣ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ ಹನುಮಂತಯ್ಯನವರು ತಾವೂ ಸಹ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿ ಎಂಬುದನ್ನು ಮರೆತಂತಿದೆ. ಈ ಹಿಂದೆ ನೀವು ಜೆಡಿಎಸ್ ಪಕ್ಷ ಸೇರುವ ವೇಳೆ ಮಲ್ಲಿಕಾರ್ಜುನ ಖರ್ಗೆಯವರು ಹಾಗೂ ಡಾ.ಜಿ.ಪರಮೇಶ್ವರ್ ಅವರ ಬಗ್ಗೆ ಎಲ್ಲಿಲ್ಲದ ಗೌರವ ತೋರುತ್ತಿರುವ ನಿಮಗೆ ಈ ಹಿಂದೆ ನೀವು ಜೆಡಿಎಸ್ ಪಕ್ಷ ಸೇರುವ ವೇಳೆ ನೆನೆಪಿಗೆ ಬರಲಿಲ್ಲವೇ. ಕ್ಷೇತ್ರದಲ್ಲಿ ನಮ್ಮ ಛಲವಾದಿಗಳ ಹಿತ ಕಾಪಾಡಿರುವ ಎಂಟಿಕೆ ಗೆಲುವಿಗಾಗಿ ಜೆಡಿಎಸ್ ಛಲವಾದಿ ಘಟಕ ಸ್ಥಾಪಿಸಿ ಹೋರಾಡಲು ನಿಮ್ಮ ಅನುಮತಿ ಪಡೆಯಬೇಕಿತ್ತೇ ಎಂದು ತಿರುಗೇಟು ನೀಡಿದರು.
ಛಲವಾದಿ ಘಟಕದ ಕಾರ್ಯದರ್ಶಿ ಸದಾಶಿವಯ್ಯ ಮಾತನಾಡಿ, ಒಂದು ಪಕ್ಷದ ಪರವಾಗಿ ತಾಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಡೊಂಕಿಹಳ್ಳಿ ರಾಮಯ್ಯನವರೇ ಹೇಳಿಕೆ ನೀಡುವುದು ಎಷ್ಟು ಸರಿ, ನಿಜವಾಗಿ ಛಲವಾದಿ ಮಹಾಸಭಾ ಅಧ್ಯಕ್ಷರಾಗಿ ನೀಡುತ್ತಿರುವ ಹೇಳಿಕೆ ಛಲವಾದಿ ಸಮುದಾಯದಲ್ಲಿ ಗೊಂದಲ ಸೃಷ್ಟಿಸುತ್ತೆ ಎಂಬುದರ ಅರಿವಿಲ್ಲವೇ. ಛಲವಾದಿ ಮಹಾಸಭಾ ಹೆಸರಿನಲ್ಲಿ ಒಂದು ಪಕ್ಷದ ಪರವಾಗಿ ಮಾತನಾಡುವ ಬದಲು ನಿಮ್ಮ ಅಧ್ಯಕ್ಷ ಸ್ಥಾನ ತ್ಯಜಿಸಿ ಹೇಳಿಕೆ ನೀಡುವುದು ಒಳಿತು ಎಂದು ಸಲಹೆ ನೀಡಿದರು.
ಜೆಡಿಎಸ್ ಛಲವಾದಿ ಘಟಕದ ಪುಟ್ಟರಾಜು ಕಲ್ಲಬೋರನಹಳ್ಲಿ ಜಯರಾಮ್, ರವಿ, ಯತೀಶ್, ವಸಂತಕುಮಾರ್, ಸೋಮಣ್ಣ, ಸಾಸಲು ಕೃಷ್ಣಮೂರ್ತಿ, ಸಿದ್ದಾಪುರ ಮಧು ಮತ್ತಿತರಿದ್ದರು.
Comments are closed.