ತಿಪಟೂರು: ಬಟ್ಟೆ ತೊಳೆಯಲು ಹೋಗಿದ್ದ ಅತ್ತೆ, ಸೊಸೆ ನೀರಿನಲ್ಲಿ ಮುಳುಗಿ ಸೋಮವಾರ ಸಂಜೆ ಮೃತಪಟ್ಟಿದ್ದಾರೆ. ಟಿ.ಎಂ.ಮಂಜುನಾಥ ನಗರದ ರಾಜಣ್ಣ ಅವರ ಪತ್ನಿ ಅನಸೂಯಮ್ಮ (50), ಪುತ್ರ ರಘು ಪತ್ನಿ ಚಂದ್ರಿಕಾ (25) ಮೃತಪಟ್ಟಿದ್ದಾರೆ.
ಟಿ.ಎಂ.ಮಂಜುನಾಥ ನಗರದ ಹಿಂಭಾಗದ ಕಟ್ಟೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮನೆಗೆ ವಾಪಸ್ ಬಾರದ್ದನ್ನು ಗಮನಿಸಿದ ಕುಟುಂಬದವರು ರಾತ್ರಿ ಹುಡುಕಾಟ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ.
Get real time updates directly on you device, subscribe now.
Prev Post
Comments are closed.