ಗುಬ್ಬಿ: ತಾಲೂಕಿನ ದೊಡ್ಡಗುಣಿ ಗ್ರಾಮದ ಬೆಸ್ಕಾಂ ಕಚೇರಿ ಮುಂದೆ ರೈತರಿಂದ ಶುಕ್ರವಾರ ಪ್ರತಿಭಟನೆ ನಡೆಸಿದರು.
ರೈತರಿಗೆ ತೋಟ, ಹೊಲಗಳಿಗೆ ನೀರು ಹಾಯಿಸಲು ನಿರಂತರ ತ್ರಿ ಫೇಸ್ ವಿದ್ಯುತ್ ಕೊಡುವ ಬದಲು ಕೇವಲ ಎರಡರಿಂದ ಮೂರು ಗಂಟೆ ಮಾತ್ರ ವಿದ್ಯುತ್ ನೀಡುತ್ತಿದ್ದು, ಅದರಲ್ಲಿಯೂ ಸಮರ್ಪಕವಾಗಿ ನೀಡುತ್ತಿಲ್ಲ ಎಂದು ಆಗ್ರಹಿಸಿ ದೊಡ್ಡಗುಣಿ, ಕಾರೆ ಕುರ್ಚಿ ಮುಸ್ಕೊಡ್ಲಿ, ಹರೆನಹಳ್ಳಿ ಸೇರಿದಂತೆ ಇನ್ನಿತರ ಗ್ರಾಮದ ರೈತರು ಪ್ರತಿಭಟನೆ ಮಾಡಿದರು.
ಪ್ರತಿಭಟನಾಕಾರರು ಮಾತನಾಡಿ, ಬೆಸ್ಕಾಂ ಅಧಿಕಾರಿಗಳು ರೈತರ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಕೂಡಲೇ ಇದನ್ನು ಸರಿ ಪಡಿಸದೆ ಹೋದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಆಗಮಿಸಿ ಸರಿ ಪಡಿಸುವುದಾಗಿ ಮಾಹಿತಿ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಯೋಗೀಶ್, ರೇಣುಕಪ್ಪ, ಲೋಹಿತ್, ಉಗ್ರಪ್ಪ, ನಂದೀಶ್, ಮೂರ್ತಪ್ಪ, ರೇಣುಕಯ್ಯ, ದಯಾನಂದ ಇನ್ನಿತರರು ಹಾಜರಿದ್ದರು.
Comments are closed.