ತುಮಕೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಗತಿದಾಯಕ ಬಜೆಟ್ ಮಂಡಿಸಿದ್ದಾರೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.
ಕಳಸ ಬಂಡೂರಿ ನಾಲೆ ತಿರುವು ಯೋಜನೆ ಕಾಮಗಾರಿ ಪ್ರಾರಂಭಿಸಲು 1 ಸಾವಿರ ಕೋಟಿ ಅನುದಾನ ನೀಡಲು ಉದ್ದೇಶಿಸಿದ್ದು, ತುಮಕೂರು- ಚಿತ್ರದುರ್ಗ- ದಾವಣಗೆರೆ- ಚಿಕ್ಕಮಗಳೂರು ಜಿಲ್ಲೆಗಳ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ನೀರಾವರಿ ಕ್ಷೇತ್ರಕ್ಕೆ 25 ಸಾವಿರ ಕೋಟಿ ಅನುದಾನ, ಉತ್ತರ ಕರ್ನಾಟಕದ ಪ್ರಮುಖ ಯೋಜನೆ ಕೃಷ್ಣ ಮೇಲ್ದಂಡೆ ಯೋಜನೆ ಹಂತ-3ರಡಿ ಪ್ರಸಕ್ತ ಸಾಲಿನಲ್ಲಿ 5 ಸಾವಿರ ಕೋಟಿ ಅನುದಾನ, 100 ಕೋಟಿ ವೆಚ್ಚದಲ್ಲಿ ಶಾಲೆಗೆ ತೆರಳಲು ಮಕ್ಕಳ ಬಸ್ ಯೋಜನೆ, ಬದುಕುವ ದಾರಿ ಯೋಜನೆಯಡಿ ಯುವ ಜನರಿಗೆ 3 ತಿಂಗಳು ಐಟಿಐ ತರಬೇತಿ, ಯುವಕರು ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಯುವ ಸ್ನೇಹಿ ಯೋಜನೆಯಡಿ ತಲಾ 2 ಸಾವಿರ ಕೊಡಲಾಗುವುದು.
ವಿದ್ಯಾವಾಹಿನಿ ಯೋಜನೆಯಡಿ ವಿದ್ಯಾರ್ಥಿನಿಯರಿಗೆ 350 ಕೋಟಿ ವೆಚ್ಚದಲ್ಲಿ ಉಚಿತ ಬಸ್ ಪಾಸ್ ಸೌಲಭ್ಯ, ರೈತ ಶಕ್ತಿ ಯೋಜನೆಗೆ 400 ಕೋಟಿ ಮೀಸಲು, ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪರಿಕರಕ್ಕೆ 92 ಕೋಟಿ ಮೀಸಲು, ರೈತರಿಗೆ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಹಾಗೂ ಸಾಲದ ಮೊತ್ತವನ್ನು 3 ರಿಂದ 5 ಲಕ್ಷಕ್ಕೆ ಏರಿಕೆ. ರಾಜ್ಯ ಮಠ ಮಂದಿರ ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ 10 ಸಾವಿರ ಕೋಟಿ, ಹನುಮ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗಾಗಿ 100 ಕೋಟಿ ಅನುದಾನ, ನಗರಭಿವೃದ್ಧಿ ಇಲಾಖೆಗೆ 17,938 ಕೋಟಿ ಅನುದಾನ ನೀಡಿದ್ದು, ನಗರಗಳ ಸರ್ವತೋಮುಖ ಅಭಿವೃದ್ಧಿಗೆ ಸಹಾಯವಾಗಲಿದೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ 37,960 ಕೋಟಿ, ಆಹಾರ ಕ್ಷೇತ್ರಕ್ಕೆ 4,600 ಕೋಟಿ, ವಸತಿ ಇಲಾಖೆಗೆ 3,787 ಕೋಟಿ, ಜಲಸಂಪನ್ಮೂಲ ಇಲಾಖೆ 22,854 ಕೋಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 15,151 ಕೋಟಿ, ಸಾರಿಗೆ ಇಲಾಖೆಗೆ 14,509 ಕೋಟಿ, ಇಲಾಖೆಗೆ 13,803 ಕೋಟಿ, ಸಮಾಜ ಕಲ್ಯಾಣ ಇಲಾಖೆಗೆ 11,163 ಕೋಟಿ, ಲೋಕೋಪಯೋಗಿ ಇಲಾಖೆಗೆ 10,741 ಕೋಟಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 5,676 ಕೋಟಿ ಹೀಗೆ ಇವೆಲ್ಲವೂ ಭವಿಷ್ಯದಲ್ಲಿ ರಾಜ್ಯದ ಸದೃಢಗೊಳಿಸುವ ಸಾಧನಗಳೆನಿಸಿವೆ ಎಂದು ಜೋತಿಗಣೇಶ್ ತಿಳಿಸಿದ್ದಾರೆ.
Comments are closed.