ಮಸಾಲ ಜಯರಾಮ್ ಮತ್ತೆ ಶಾಸಕರಾಗುವುದು ಖಚಿತ

123

Get real time updates directly on you device, subscribe now.


ತುರುವೇಕೆರೆ: ಕ್ಷೇತ್ರ ವ್ಯಾಪ್ತಿಯ ವೀರಶೈವ ಸಮುದಾಯದ ಬಹುತೇಕ ಮತದಾರರು ಬಿಜೆಪಿ ಬೆಂಬಲಿಸಲಿದ್ದು, ಮಸಾಲ ಜಯರಾಮ್ ಮತ್ತೆ ಶಾಸಕರಾಗಿ ಆಯ್ಕೆಯಾಗುವುದು ಖಚಿತ ಎಂದು ವೀರಶೈವ ಮುಖಂಡ, ಪೀಕಾಡ್ ಬ್ಯಾಂಕ್ ಸದಸ್ಯ ವಿ.ಬಿ.ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಬಿಜೆಪಿ ಪಕ್ಷದ ವೀರಶೈವ ಮುಖಂಡರು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೀರಶೈವ ಮುಖಂಡರ ಸೋಗಿನಲ್ಲಿ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಜೆಡಿಎಸ್ ಮತ್ತಿತರ ಪಕ್ಷಗಳಿಗೆ ಹೋಗಿದ್ದಾರೆ. ಮಸಾಲ ಜಯರಾಮ್ ಮತ್ತೆ ಶಾಸಕರಾಗುವುದನ್ನು ಸಹಿಸದ ಜೆಡಿಎಸ್ ನವರು ವೀರಶೈವರಲ್ಲಿ ಗೊಂದಲ ಮೂಡಿಸಲು ವೀರಶೈವರ ಬೆಂಬಲ ನಮಗಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ನಮ್ಮ ಪಕ್ಷ ಬಿಟ್ಟು ಅನ್ಯ ಪಕ್ಷಗಳಿಗೆ ಸೇರಿರುವ ವೀರಶೈವರು ಮಸಾಲ ಜಯರಾಮ್ ಅವರನ್ನು ಸೋಲಿಸುತ್ತೇವೆ ಎಂದು ತೊಡೆ ತಟ್ಟುತ್ತಿದ್ದಾರೆ. ಯಾರೇ ತೊಡೆ ತಟ್ಟಿದರೂ ಮಸಾಲ ಜಯರಾಮ್ ಶಾಸಕರಾಗುವುದನ್ನು ತಡೆಯಲಾಗದು ಎಂದರು.

ಯಲದಬಾಗಿ ಸೋಮಶೇಖರ್ ಮಾತನಾಡಿ, ಕಳೆದ 20 ವರ್ಷಗಳಲ್ಲಿ ಅಭಿವೃದ್ಧಿಯಿಂದ ವಂಚಿತವಾಗಿದ್ದ ಸಂಪಿಗೆ ಪಂಚಾಯಿತಿ ಹಾಗೂ ದಂಡಿನಶಿವರ ಹೋಬಳಿಯಲ್ಲಿ ಕೋಟ್ಯಾಂತರ ರೂ. ವೆಚ್ಚದಲ್ಲಿ ಮಸಾಲ ಜಯರಾಮ್ ಅಭಿವೃದ್ಧಿ ಮಾಡಿದ್ದಾರೆ. ಒಕ್ಕಲಿಗ ಪ್ರಾಬಲ್ಯವಿರುವ ದಬ್ಬೇಘಟ್ಟ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 120 ಕೋಟಿ ವೆಚ್ಚದ ಕಾಮಗಾರಿ ಕೈಗೊಂಡಿರುವ ಮಸಾಲ ಜಯರಾಮ್ ಜಾತ್ಯಾತೀತ ನಾಯಕರು ಎಂದು ಬಣ್ಣಿಸಿದರು.

ಎಪಿಎಂಸಿ ನಾಮಿನಿ ಸದಸ್ಯ ಹರಿಕಾರನಹಳ್ಳಿ ಪ್ರಸಾದ್ ಮಾತನಾಡಿ, ಜೆಡಿಎಸ್ ಪಕ್ಷದಲ್ಲಿ ವೀರಶೈವರಿಗೆ ಪ್ರಾತಿನಿಧ್ಯವಿಲ್ಲ. ತಮ್ಮ ವೈಯಕ್ತಿಕ ಲಾಭಕ್ಕಾಗಿ ಜೆಡಿಎಸ್ ಪಕ್ಷ ಸೇರಿದ ವೀರಶೈವರಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಮುಂದಿನ ಚುನಾವಣೆಯಲ್ಲಿ ವೀರಶೈವ ಮತದಾರರು ಹೆಚ್ಚಿರುವ ಬೂತ್ಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಹೆಚ್ಚು ಮತ ಹಾಕಿಸಿ, ಇತ್ತೀಚೆಗೆ ಜೆಡಿಎಸ್ ಸೇರಿರುವ ವೀರಶೈವ ಮುಖಂಡರು ತಮ್ಮ ಸಾಮರ್ಥ್ಯ ಪ್ರದರ್ಶಿಸಲಿ ಎಂದು ಸವಾಲು ಹಾಕಿದರು.

ಗ್ರಾಪಂ ಅಧ್ಯಕ್ಷ ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷರಾದ ಬೊಮ್ಮಲಿಂಗಯ್ಯ, ಕಿರಣ್, ಗ್ರಾಪಂ ಸದಸ್ಯ ಆದರ್ಶ, ಅರಳಿಕೆರೆ ಬಸವರಾಜು, ಸಿದ್ದಪ್ಪಾಜಿ, ವೀರಭಧ್ರಯ್ಯ ಮತ್ತಿತರಿದ್ದರು.

Get real time updates directly on you device, subscribe now.

Comments are closed.

error: Content is protected !!