ಮತಗಟ್ಟೆಗಳಲ್ಲಿ ಮೂಲ ಸೌಕರ್ಯ ಪರಿಶೀಲಿಸಿ

ಆರ್ ಓ, ಎಆರ್ ಓಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸೂಚನೆ

86

Get real time updates directly on you device, subscribe now.

ತುಮಕೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ರ್ಯಾಂಪ್, ಶೌಚಾಲಯ, ಕುಡಿಯುವ ನೀರು, ಇತ್ಯಾದಿ ಸೇರಿದಂತೆ ಎಲ್ಲಾ ಮೂಲ ಸೌಕರ್ಯ ಲಭ್ಯವಿರುವ ನಿಟ್ಟಿನಲ್ಲಿ ಆರ್ಓ ಹಾಗೂ ಎಆರ್ಓಗಳು ಖಾತರಿಪಡಿಸಿಕೊಂಡು ತಮಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮತಗಟ್ಟೆಗಳಿರುವ ಕಟ್ಟಡಗಳಲ್ಲಿ ಶೌಚಾಲಯದ ಸುಸ್ಥಿತಿ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಮತಗಟ್ಟೆಗಳಲ್ಲಿ ರ್ಯಾಂಪ್ ಕಡ್ಡಾಯವಾಗಿರುತ್ತದೆ. ಆದರೆ ನೆಲಮಟ್ಟದ ಕಟ್ಟಡವಿರುವ ಮತಗಟ್ಟೆಗಳಿಗೆ ಇದು ಅನ್ವಯಿಸುವುದಿಲ್ಲ. ಅಶೂರ್ಡ್ ಮಿನಿಮಮ್ ಸೌಕರ್ಯಗಳ ಬಗ್ಗೆ ತಹಶೀಲ್ದಾರರು ರೂಪುರೇಷೆ ರಚಿಸಿಕೊಂಡು ಗ್ರಾಮ ಪಂಚಾಯತಿ ಹಾಗೂ ನಾಡ ಕಚೇರಿಗಳಿಂದ ಈ ಸೌಕರ್ಯ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಸೆಕ್ಟರ್ ಮ್ಯಾಪ್, ರೂಟ್ ಮ್ಯಾಪ್ ರಚಿಸಿ ವಾಹನಗಳ ಅವಶ್ಯಕತೆಗಳ ಬಗ್ಗೆ ಶೀಘ್ರದಲ್ಲೇ ತಮಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಕಡಿಮೆ ಮತದಾನವಾಗಿರುವಂತಹ 10-15 ಮತಗಟ್ಟೆಗಳನ್ನು ಆಯ್ಕೆ ಮಾಡಿಕೊಂಡು, ಕಡಿಮೆ ಮತದಾನಕ್ಕೆ ಕಾರಣವೇನೆಂಬುದನ್ನು ತಹಶೀಲ್ದಾರರು ಮತ್ತು ಇಓಗಳು ಪತ್ತೆ ಹಚ್ಚಬೇಕು ಮತ್ತು ಮತದಾನ ಹೆಚ್ಚಳದ ಬಗ್ಗೆ ಕ್ರಮವಹಿಸಬೇಕು ಮತ್ತು ಈ ಕುರಿತು ತಮಗೆ ವರದಿ ನೀಡಬೇಕೆಂದು ತಿಳಿಸಿದರು.
ಎಸಿ, ತಹಶೀಲ್ದಾರ್ ಗಳು ಕೇಂದ್ರ ಸ್ಥಾನ ಬಿಡುವ ಮುನ್ನ ತಮಗೆ ಮಾಹಿತಿ ಸಲ್ಲಿಸಬೇಕು ಮತ್ತು ಜಿಲ್ಲೆಗೆ ಹೊಸ ತಹಶೀಲ್ದಾರ್ ಗಳು ವರ್ಗಾವಣೆಯಾಗಿ ಬಂದಿದ್ದು, ತಮ್ಮ ಕಾರ್ಯ ವ್ಯಾಪ್ತಿಯ ಬಗ್ಗೆ ಅರಿಯಬೇಕು ಎಂದು ತಿಳಿಸಿದರು.
ಜಿಲ್ಲೆಯ 3 ಉಪವಿಭಾಗಗಳ ಉಪವಿಭಾಗಾಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯ ಮತಗಟ್ಟೆಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು. ಮತಗಟ್ಟೆಗಳ ಬದಲಾವಣೆ ಬಗ್ಗೆ ಈಗಾಗಲೇ ಪ್ರಸ್ತಾವನೆಗಳನ್ನು ತಮಗೆ ಕಳುಹಿಸಿದ್ದು, ಇನ್ನು ಮುಂದೆ ಈ ಕುರಿತ ಪ್ರಸ್ತಾವನೆ ಸಲ್ಲಿಸಬಾರದು ಎಂದ ಜಿಲ್ಲಾಧಿಕಾರಿಗಳು, ತಮ್ಮ ಮತಗಟ್ಟೆಗಳ ಬಗ್ಗೆ ಶೇ.100 ರಷ್ಟು ಜ್ಞಾನವನ್ನು ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಹೊಂದಿರಬೇಕು. ನಮೂನೆ 6, 7, 8, ಫಾರಂ ಬಾಕಿ ಪ್ರಕರಣಗಳನ್ನು ಶೀಘ್ರವೇ ಇತ್ಯರ್ಥಗೊಳಿಸಬೇಕು ಎಂದು ಸೂಚಿಸಿ ಭೂಮಿ ಬಾಕಿ ಪ್ರಕರಣಗಳು 0-7 ದಿನಗಳೊಳಗಾಗಿ ಇತ್ಯರ್ಥಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಮುಂತಾದ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!