ನ್ಯಾಯಾಧೀಶರ ಸಮ್ಮುಖದಲ್ಲಿ ಒಂದಾದ ದಂಪತಿ

251

Get real time updates directly on you device, subscribe now.


ಗುಬ್ಬಿ: ದಂಪತಿ ಸಣ್ಣಪುಟ್ಟ ವಿಚಾರಗಳಿಗೆ ಜಗಳ ಮಾಡಿಕೊಂಡು ನ್ಯಾಯಾಲಯಕ್ಕೆ ಬರುವ ಬದಲಿಗೆ ಪ್ರೀತಿ, ವಿಶ್ವಾಸದಿಂದ ರಾಜಿ ಸಂಧಾನಗಳ ಮೂಲಕ ಬಗೆಹರಿಸಿಕೊಂಡರೆ ಬದುಕನ್ನು ಉತ್ತಮವಾಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹಿರಿಯ ನ್ಯಾಯಾಧೀಶರಾದ ಉಂಡಿ ಮಂಜುಳ ಶಿವಪ್ಪ ತಿಳಿಸಿದರು.

ಪಟ್ಟಣದ ನ್ಯಾಯಾಲಯದಲ್ಲಿ ಮಂಗಳವಾರ ಚಿಕ್ಕನರಸಯ್ಯ, ಮಂಗಳಮ್ಮ ಎಂಬ ದಂಪತಿ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಮಾತನಾಡಿ ದಂಪತಿ ಹಾಗೂ ಮಗ ಅರುಣ್ ಕುಮಾರ್ ಅವರನ್ನು ನ್ಯಾಯಾಲಯಕ್ಕೆ ಕರೆಸಿ ದಂಪತಿಗೆ ಕಾನೂನು ತಿಳುವಳಿಕೆ ನೀಡಿದರು.

ದಂಪತಿ ಒಂದುಗೂಡುವುದರಿಂದ ಮಕ್ಕಳ ಬದುಕು ಉತ್ತಮವಾಗಿರುತ್ತದೆ. ಕಾನೂನು ಸೇವಾಪ್ರಾಧಿಕಾರ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡಲು ಸದಾ ಸಿದ್ಧವಿದೆ. ದಂಪತಿ ಒಂದುಗೂಡಿಸಿದ್ದು ನಮಗೂ ಸಂತೋಷ ಉಂಟು ಮಾಡಿದೆ. ಅವರ ಮುಂದಿನ ಜೀವನ ಉತ್ತಮವಾಗಿರಲಿ ಎಂದರು.

ಮೂರನೇ ವ್ಯಕ್ತಿಗಳ ಮಾತಿನಿಂದ ಹೆಂಡತಿ ಮಕ್ಕಳಿಂದ ದೂರ ಉಳಿದ್ದಿದ್ದ ನನಗೆ ನ್ಯಾಯಾಧೀಶರು ಕಾನೂನಿನ ಅರಿವು ಮೂಡಿಸಿದ್ದಾರೆ. ಕಾನೂನು ಸೇವಾ ಪ್ರಾಧಿಕಾರದಿಂದ ನನಗೆ ತುಂಬಾ ಅನುಕೂಲವಾಯಿತು. ಇನ್ನು ಮುಂದೆ ಹೆಂಡತಿ ಮಕ್ಕಳ ಜೊತೆ ಸುಖವಾಗಿ ಬದುಕುತ್ತೇನೆ ಎಂದು ಸಂತ್ರಸ್ತ ಚಿಕ್ಕನರಸಯ್ಯ ತಿಳಿಸಿದರು.

ಪಾರ್ಶ್ವವಾಯು ಪೀಡಿತನಾಗಿದ್ದ ಗಂಡನನ್ನು ಸುಮಾರು ಹಣ ಖರ್ಚುಮಾಡಿ ಉಳಿಸಿಕೊಂಡಿದ್ದೆವು. ಯಾರದೋ ಮಾತು ಕೇಳಿಕೊಂಡು ನಮ್ಮಿಂದ ದೂರ ಹೋಗಿದ್ದ ಗಂಡನನ್ನು ನ್ಯಾಯಾಧೀಶರು ಒಂದು ಗೂಡಿಸಿದ್ದಾರೆ. ನಾನು, ನನ್ನ ಮಕ್ಕಳು ನನ್ನ ಗಂಡನನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಎಂದು ಪತ್ನಿ ಮಂಗಳಮ್ಮ ತಿಳಿಸಿದರು.

ಈ ಸಂದರ್ಭದಲ್ಲಿ 5 ವರ್ಷದ ನಂತರ ಒಂದುಗೂಡಿದ ದಂಪತಿಯನ್ನು ಹಾರ ಬದಲಾಯಿಸುವ ಮೂಲಕ ನ್ಯಾಯಾಧೀಶರು ಶುಭ ಕೋರಿದರು.

Get real time updates directly on you device, subscribe now.

Comments are closed.

error: Content is protected !!