ಮನೆಮನೆಗೆ ನೀರು ಕೊಡುವುದು ಕೇಂದ್ರದ ಸಾಧನೆ

192

Get real time updates directly on you device, subscribe now.


ಹುಳಿಯಾರು: ಪ್ರತಿ ಮನೆ ಮನೆಗೆ ನಲ್ಲಿ ಕೊಟ್ಟಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಯಾಗಿದೆ ಎಂದು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗದ ಅಭಿಯಂತರ ಸೋಮಶೇಖರ್ ಹೇಳಿದರು.
ಹುಳಿಯಾರು ಸಮೀಪದ ದೊಡ್ಡಎಣ್ಣೇಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಚ್.ಎಂ.ಕಾವಲ್ ಹಾಗೂ ಬನ್ನಿಕೆರೆ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಪ್ರತಿಗೃಹಗಳಿಗೆ 24*7 ನೀರು ಸರಬರಾಜು ಮಾಡುವ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು.

ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರದ ರವೀಶ್ ಮಾತನಾಡುತ್ತಾ ಜಲಜೀವನ್ ಮಿಷನ್ ಯೋಜನೆ ಇಡಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ನೀರು ಒದಗಿಸುವ ಕಾರ್ಯಕ್ರಮ ಇದಾಗಿದ್ದು ಈ ಯೋಜನೆ ಸಂಪೂರ್ಣ ಉಪಯೋಗವನ್ನು ಪ್ರತಿ ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ವಸಂತ್ ಜಲಜೀವನ್ ಮಿಷನ್ ಯೋಜನೆಯಡಿ ಎಲ್ಲಾ ಮನೆಗಳಿಗೆ ಸಂಪರ್ಕ ಕಲ್ಪಿಸುವುದು ಪ್ರತಿ ಗ್ರಾಮ ಪಂಚಾಯಿತಿಯ ಸದುದ್ದೇಶವಾಗಿದೆ. ಈ ನೀರಿನ ಸದ್ಬಳಿಕೆ ಪ್ರತಿವ್ಯಕ್ತಿಗಳು ಮಿತವಾಗಿ ಬಳಸಬೇಕು ಬಳಸಿದ ನೀರನ್ನು ಹಿಂಗಿಸಲು ಇಂಗು ಗುಂಡಿಗಳ ನಿರ್ಮಾಣಕ್ಕೂ ಕೂಡ ಒತ್ತು ಕೊಡಬೇಕು. ನಿರ್ಮಾಣಗೊಂಡಿರುವ ನಳಗಳ ಸಂಪರ್ಕವನ್ನು ಯಾವುದೇ ಕಾರಣಕ್ಕೂ ಯಾರು ಹಾನಿಗೊಳಿಸಬಾರದು. ಇದು ಸಾರ್ವಜನಿಕರ ಆಸ್ತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಮ್ಯ ಮಂಜುನಾಥ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೃಷ್ಣಬಾಯಿ, ಸದಸ್ಯರಾದ ಪ್ರಶಾಂತ್, ಲಿಂಗರಾಜು, ಮಲ್ಲೇಶಯ್ಯ, ಮಂಗಳಮ್ಮ, ತೀರ್ಥರಾಮ, ಕೃಷ್ಣಮೂರ್ತಿ, ಶಿವಪ್ರಸಾದ್, ದೇವರಾಜು ಮತ್ತಿತರವರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!