ಅಪಘಾತ ಸಂದರ್ಭದಲ್ಲಿ ಮಾನವೀಯತೆ ತೋರಿ

ಸಾರ್ವಜನಿಕರು ಗಾಯಾಳುಗಳ ರಕ್ಷಣೆಗೆ ಮುಂದಾಗಲಿ: ರಾಹುಲ್ ಕುಮಾರ್

125

Get real time updates directly on you device, subscribe now.


ಕುಣಿಗಲ್: ಅಪಘಾತ ಸೇರಿದಂತೆ ತುರ್ತು ಸಂದರ್ಭದಲ್ಲಿ ಗಾಯಗೊಳ್ಳುವ ಗಾಯಾಳು ರಕ್ಷಣೆಗೆ ಎಲ್ಲಾ ನಾಗರಿಕರು ಮುಂದಾಗುವ ಮೂಲಕ ಗಾಯಾಳು ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಮನವಿ ಮಾಡಿದರು.

ಪಟ್ಟಣದ ಪೊಲೀಸ್ ಠಾಣೆಯ ಸಭಾಂಗಣದಲ್ಲಿ ಅನಾಥ, ನಿರ್ಗತಿಕ ಶವ ಸಂಸ್ಕಾರ ಸೇರಿದಂತೆ ಅಪಘಾತ ಸಂದರ್ಭದಲ್ಲಿ ಗಾಯಾಳುಗಳ ರಕ್ಷಣೆಗೆ ನಿಲ್ಲುವ ಕೆಲ ನಾಗರಿಕ ಸೇವಕರನ್ನು ಗುರುತಿಸಿ ಅವರಿಗೆ ಹಮ್ಮಿಕೊಳ್ಳಲಾದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ನೆರವೇರಿಸಿ ಮಾತನಾಡಿ, ಗಾಯಾಳುಗಳ ರಕ್ಷಣೆ ಸಂದರ್ಭದಲ್ಲಿ ಬಹುತೇಕರು ಪೊಲೀಸರ ಜವಾಬ್ದಾರಿ ಎಂದು ಹೇಳಿ ಜಾರಿಕೊಳ್ಳುತ್ತಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲಿ ಅಪಘಾತ ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲಿ ಗಾಯಾಳುಗಳನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿ ನಂತರ ಪೊಲೀಸರಿಗೆ ಕರೆ ಮಾಡಿ, ಇದರಿಂದ ಗಾಯಾಳ ರಕ್ಷಣೆ ಮಾಡಿದವರಿಗೆ ಯಾವುದೇ ಕಾನೂನಾತ್ಮಕ ಸಮಸ್ಯೆಯೂ ಇರುವುದಿಲ್ಲ. ಮನುಷ್ಯ ಕಷ್ಟದಲ್ಲಿರುವ ಮನುಷ್ಯನ ನೆರವಿಗೆ ನಿಲ್ಲಬೇಕು. ಇದರಿಂದ ಮಾನವೀಯತೆ ವೃದ್ಧಿಯಾಗುತ್ತದೆ.

ಗಾಯಾಳುವಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ಶ್ರಮಿಸುವುದು ಸಹ ಪುಣ್ಯದೆ ಕೆಲಸ. ಕೆಲವರು ರಸ್ತೆಯಲ್ಲಿ ಅಪಘಾತವಾಗಿದ್ದಲ್ಲಿ ಗಾಯಾಳುಗಳ ಸಾಗಾಣೆಗೆ ತಮ್ಮ ವಾಹನದಲ್ಲಿ ಹಾಕಿಕೊಂಡು ಹೋಗಲು, ವಾಹನದ ಸ್ವಚ್ಛತೆ, ಬೆಲೆ ಬಗ್ಗೆ ಆದ್ಯತೆ ನೀಡುತ್ತಾರೆ. ಆದರೆ ಮನುಷ್ಯನ ಜೀವಕ್ಕೆ ಬೆಲೆ ಕಟ್ಟಲಾಗುತ್ತದೆ. ಯಾವುದೇ ವ್ಯಕ್ತಿಯಾದರೂ ಆತನಿಗೆ ಒಂದು ಕುಟುಂಬ, ಅವಲಂಬಿತರು ಇರುತ್ತಾರೆ ಎಂಬುದ ಮರೆಯಬಾರದು. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಸೇರಿದಂತೆ ಸಾರ್ವಜನಿಕ ಸೇವೆಗೆ ಶ್ರಮಿಸಿ ಸಹಕಾರ ನೀಡುತ್ತಿರುವ ಮಾನವೀಯತೆ ಹೃದಯವಂತರು ಮತ್ತಷ್ಟು ಹೆಚ್ಚಾಗಬೇಕು ಎಂದರು.

ಡಿವೈಎಸ್ಪಿ ಲಕ್ಷ್ಮೀಕಾಂತ ಮಾತನಾಡಿ, ಸಮಾಜದಲ್ಲಿ ಯಾವುದೇ ವ್ಯಕ್ತಿ ಆತ ಮಾಡುವ ಕೆಲಸದಿಂದ ದೊಡ್ಡವನಾಗೊಲ್ಲ. ಆದರೆ ಆತ ಮಾನವೀಯತೆ ಹಿನ್ನೆಲೆಯಲ್ಲಿ ನೀಡುವ ಸೇವೆ, ಕೊಡುಗೆ ಆತನನ್ನು ದೊಡ್ಡವನ್ನು ಮಾಡುತ್ತದೆ. ಮನುಷ್ಯ ಸತ್ತ ನಂತರವೂ ಆತನಿಗೆ ಗೌರವ ನೀಡಬೇಕಿದೆ. ಎಷ್ಟೋ ಪ್ರಕರಣಗಳಲ್ಲಿ ಅನಾಥ ಶವ ಇರಬಹುದು. ನೀರಿನಲ್ಲಿ ಕೊಳೆತ ಶವ ಇರಬಹುದು ಅವುಗಳನ್ನು ಸುರಕ್ಷಿತವಾಗಿ ಹೊರ ತೆಗೆದು ಅವುಗಳಿಗೆ ಸಲ್ಲಬೇಕಾದ ಗೌರವ ನೀಡಿ ಅಂತಿಮ ಕಾರ್ಯ ನೆರವೇರಿಸುವ ಇಂತಹ ಸೇವಕರು ನಿಜಕ್ಕೂ ಅವರ ಕಾರ್ಯದಿಂದ ಅವರು ದೊಡ್ಡವರಾಗಿದ್ದಾರೆ. ಇವರಿಗೆ ಇಲಾಖೆ ಸೇರಿದಂತೆ ನಾಗರಿಕರ ವತಿಯಿಂದ ಅಭಿನಂದನೆಗಳು ಎಂದರು.

ಅನಾಥ, ನಿರ್ಗತಿಕ ಶವ ಸಂಸ್ಕಾರದಲ್ಲಿ ತಮ್ಮದೆ ಆದ ರೀತಿಯಲ್ಲಿ ಸೇವೆ ನೀಡುತ್ತಿರುವ ಶಿವರಾಮ, ಅಕ್ಬರ್, ಚಂದ್ರಶೇಖರ ಮತ್ತು ತಂದೆ, ಗಾಯಾಳುಗಳ ರಕ್ಷಣೆಗೆ, ಅಪಘಾತ ವಾಹನ ತೆರವುಗೊಳಿಸಲು ಶ್ರಮಿಸುತ್ತಿರುವ ಪ್ರದೀಪ, ಉಮೇಶ, ಮಂಜುನಾಥ ಹಾಗೂ ಇಲಾಖೆ ವತಿಯಿಂದ ಶ್ರಮಿಸುತ್ತಿರುವ ಮುಖ್ಯಪೇದೆ ರವಿ ಇತರರನ್ನು ಸನ್ಮಾನಿಸಲಾಯಿತು.

ಸಿಪಿಐ ಗುರುಪ್ರಸಾದ್ ಸೇವಕರ ಕೊಡುಗೆ ಸ್ಮರಿಸಿದರು. ಸಿಪಿಐ ಅರುಣ್ ಸಾಲುಂಕಿ, ಪಿಎಸೈ ಜಮಾಲ್ ಅಹಮದ್ ಹಾಗೂ ಸಿಬ್ಬಂದಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!