ತುಮಕೂರು: ಬಿಜೆಪಿಯ ಕೇಂದ್ರ, ರಾಜ್ಯದ ಡಬ್ಬಲ್ ಇಂಜಿನ್ ಸರ್ಕಾರಗಳ ಕಾರ್ಯಕ್ರಮ ಯೋಜನೆ ಸಾಧನೆ ಅನುಷ್ಠಾನಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಖರವಾಗಿ ಜನಸಾಮಾನ್ಯರು, ಮತದಾರರು ಮತ್ತು ಪಕ್ಷದ ಎಲ್ಲಾ ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚುರಪಡಿಸಬೇಕೆಂದು ಬಿಜೆಪಿ ಸಾಮಾಜಿಕ ಮಾಧ್ಯಮ ಪ್ರಕೋಷ್ಠದ ಕಾರ್ಯಕರ್ತರಿಗೆ ಗುಜರಾತ್ನ ಸಾಮಾಜಿಕ ಮಾಧ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಪ್ರಕೋಷ್ಠದ ರಾಜ್ಯ ಸಂಚಾಲಕ ಪಂಕಜ್ ಶುಕ್ಲಾ ನೀಡಿದರು.
ತುಮಕೂರು ಜಿಲ್ಲಾ ಕಾರ್ಯಾಲಯದಲ್ಲಿ ತುಮಕೂರು- ಮಧುಗಿರಿ- ದಾವಣಗೆರೆ ಜಿಲ್ಲೆಗಳ ದಾವಣಗೆರೆ ವಿಭಾಗದ ಸಾಮಾಜಿಕ ಮಾಧ್ಯಮ ಪ್ರಕೋಷ್ಠದ ವಿವಿಧ ಸಮಿತಿಗಳ ಸಂಚಾಲಕರು ಹಾಗೂ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿ, ಫೇಸ್ ಬುಕ್, ಇನ್ ಸ್ಟಾಗ್ರಾಮ್, ಟ್ವಿಟರ್, ಯೂಟ್ಯೂಬ್, ವಾಟ್ಸ್ಆಫ್ಗಳ ಮೂಲಕ ಬಿಜೆಪಿಯ ಪ್ರಮುಖರು ಮತ್ತು ಸರ್ಕಾರದ ದಿನನಿತ್ಯದ ಚಟುವಟಿಕೆ ಕಾರ್ಯಕ್ರಮಗಳ ಘೋಷಣೆ ಯೋಜನೆ ಅನುಷ್ಠಾನಗಳ ಬಗ್ಗೆ ಮತದಾರರಿಗೆ ತಿಳಿಸಬೇಕು ಮತ್ತು ಸರ್ಕಾರದ ಸಂಪರ್ಕ ಸೇತುವಿನಂತೆ ಕಾರ್ಯ ನಿರ್ವಹಿಸಲು ಮಾಹಿತಿ ನೀಡಿದರು.
ಕೇಂದ್ರದ ಪ್ರಧಾನಿ ನರೇಂದ್ರ ಮೋದಿರವರ ಸರ್ಕಾರವು ಗರೀಬ್ ಅನ್ನ ಕಲ್ಯಾಣ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ಮನೆ ಮನೆಗೆ ಗಂಗೆ ಜಲ್ ಜೀವನ್ ಮಿಷನ್, ಕೋವಿಡ್- 19ರ ಉಚಿತ ಲಸಿಕೆ, ಆಯುಷ್ಮಾನ್ ಭಾರತ್, ಮೂಲ ಸೌಲಭ್ಯ, ರಕ್ಷಣೆ, ನೀರಾವರಿ, ಕೈಗಾರಿಕಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಬಡವರ ಕಲ್ಯಾಣ ಯೋಜನೆ ಮತ್ತು ರಾಜ್ಯದ ಬೊಮ್ಮಾಯಿ ನೇತೃತ್ವದ ಉಚಿತ ಅಕ್ಕಿ ವಿತರಣೆ, ಎಸ್ಸಿ, ಎಸ್ಟಿ, ಹಿಂದುಳಿದವರಿಗೆ ಮೀಸಲಾತಿ, ಗೃಹಿಣಿ ಶಕ್ತಿ ಯೋಜನೆ, ರೈತರಿಗೆ 5 ಲಕ್ಷರೂ. ಬಡ್ಡಿ ರಹಿತ ಸಾಲ, ಭೂ ಸಿರಿ ಯೋಜನೆ, ವಿದ್ಯಾಸಿರಿ ಯೋಜನೆ, ಯಶಸ್ವಿನಿ, ಬಡವರು- ಹಿಂದುಳಿದ- ಅಲ್ಪಸಂಖ್ಯಾತರ ಶೋಷಿತರಿಗೆ ನೆರವು, ಮಹಿಳೆಯರು, ವಿದ್ಯಾರ್ಥಿಗಳು, ಮಕ್ಕಳು, ಅಂಗನವಾಡಿಗೆ ಸೌಲಭ್ಯ, ಯುವ ಜನರು, ಕೈಗಾರಿಕಾಭಿವೃದ್ಧಿ, ನಮ್ಮ ಕ್ಲಿನಿಕ್ ಸ್ಥಾಪನೆ, ನೀರಾವರಿ ಯೋಜನೆ ಮುಂತಾದ ನೂರಾರು ಕಾರ್ಯಕ್ರಮ- ಯೋಜನೆಗಳ ಬಗ್ಗೆ ಮಾಹಿತಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಜನರಿಗೆ ತಲುಪಿಸಿದರೆ, ಬಿಜೆಪಿ ಸರ್ಕಾರದ ಬಗ್ಗೆ ಮತದಾರರಿಗೆ ಸದಾಭಿಪ್ರಾಯ ಮೂಡಿಬರಲಿದೆ. ಸ್ಥಳೀಯ ಸಂಸದರು, ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಪ್ರದೇಶಗಳಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಕ್ರಮವನ್ನು ಸಮಗ್ರವಾಗಿ ಜನರಿಗೆ ಪ್ರಚುರಪಡಿಸಿದಾಗ ಮಾತ್ರ ಬಿಜೆಪಿಯ ಬಗ್ಗೆ ಒಲವು ಮೂಡಿ ಚುನಾವಣೆಗಳಲ್ಲಿ ಗೆಲುವು ಸಾಧಿಸುವುದರ ಮೂಲಕ ಸರ್ಕಾರ ರಚನೆಗೆ ಸಹಕಾರಿಯಾಗುತ್ತದೆ ಎಂದು ಪಂಕಜ್ ಶುಕ್ಲಾ ವಿವರಿಸಿದರು.
ಬಿಜೆಪಿ ಸಾಮಾಜಿಕ ಮಾಧ್ಯಮ ಪ್ರಕೋಷ್ಠದ ರಾಜ್ಯ ಸಹಸಂಚಾಲಕ ನರೇಂದ್ರಮೂರ್ತಿ ಮಾತನಾಡಿ, ಮುಂಬರುವ ಕರ್ನಾಟಕ ವಿಧಾನಸಭೆಗೆ ಶೀಘ್ರವಾಗಿ ಚುನಾವಣೆ ನಡೆಯಲಿದ್ದು, ಪ್ರತಿಯೊಬ್ಬ ಕಾರ್ಯಕರ್ತರು ಕ್ರೀಯಾಶೀಲರಾಗಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜನತೆಗೆ ಸಮಗ್ರ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮತದಾರರನ್ನು ತಲುಪುವುದಕ್ಕೆ ಆದ್ಯ ಗಮನ ಹರಿಸಲು ಸೂಚಿಸಿದರು.
ಸಾಮಾಜಿಕ ಮಾಧ್ಯಮ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಕೃಷ್ಣ ಜವರಯ್ಯ ಮಾತನಾಡಿ, ಕೇಂದ್ರ, ರಾಜ್ಯದ ಡಬ್ಬಲ್ ಇಂಜಿನ್ ಸರ್ಕಾರಗಳ ಕಾರ್ಯಕ್ರಮ ಮತ್ತು ಪಕ್ಷದ ಧ್ಯೇಯ ಸಿದ್ಧಾಂತಗಳ ಬಗ್ಗೆ ಕಾರ್ಯಕರ್ತರು ಯುಕ್ತಿ ಬುದ್ಧಿಯ ಮೂಲಕ ರಾಜ್ಯದ 3 ಕೋಟಿಗೂ ಹೆಚ್ಚು ಜನರು ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವವರಿಗೆ ಬಿಜೆಪಿ ಸಾಧನೆಗಳ ಅಂಕಿ ಅಂಶಗಳನ್ನು ಜನರಿಗೆ ತಲುಪಿಸಿರುವುದರ ಕಾರ್ಯದಲ್ಲಿ ಮುಂದಾಗುವಂತೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ತುಮಕೂರು ಜಿಲ್ಲಾ ಘಟಕದ ಹಿರಿಯ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿ, ಬಿಜೆಪಿಯು ಪ್ರಪಂಚದಲ್ಲೇ 18 ಕೋಟಿಗೂ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ ಏಕೈಕ ಪಕ್ಷವಾಗಿದೆ. ಪಕ್ಷ ಮತ್ತು ಸರ್ಕಾರದ ಎಲ್ಲಾ ಯೋಜನೆ, ಕಾರ್ಯಕ್ರಮ ಪ್ರಚುರ ಮಾಡುತ್ತಿರುವ ಸಾಮಾಜಿಕ ಮಾಧ್ಯಮ ಪ್ರಕೋಷ್ಠವು ಬಿಜೆಪಿಯ ಹೃದಯವಾಗಿದೆ. ಸಾಮಾಜಿಕ ಜಾಲತಾಣದ ಸಕ್ರೀಯ ಕಾರ್ಯಕರ್ತರು ಎಲ್ಲರಿಗೂ ಸಿಹಿ ಹಂಚುವವರು ಎಂದು ಪ್ರಶಂಶಿಸಿ ಬೂತ್ ಮಟ್ಟದಿಂದ ರಾಷ್ಟ್ರಾಧ್ಯಕ್ಷರ ವರೆಗಿನ ಸಂಪರ್ಕ ಸೇತುವೆ ಸೋಷಿಯಲ್ ಮೀಡಿಯಾ ಎಂದು ಮೆಚ್ಚುಗೆ ನುಡಿಗಳನ್ನಾಡಿದರು.
ಬಿಜೆಪಿ ಸಾಮಾಜಿಕ ಮಾಧ್ಯಮ ಪ್ರಕೋಷ್ಠದ ತುಮಕೂರು ಜಿಲ್ಲಾ ಸಂಚಾಲಕ ವಿನಯ್ ಅದ್ವೆತ, ಮಧುಗಿರಿ ಜಿಲ್ಲಾ ಸಂಚಾಲಕ ರವಿಕಿರಣ್, ಚಿತ್ರದುರ್ಗ ಜಿಲ್ಲಾ ಸಂಚಾಲಕ ಮನೋಜ್ ಹೊಸಮನಿ ಇತರರು ಇದ್ದರು.
ರಾಜ್ಯ ಸಾಮಾಜಿಕ ಮಾಧ್ಯಮ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ನಾಗೂರು, ತುಮಕೂರು ಸಾಮಾಜಿಕ ಮಾಧ್ಯಮ ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕಿ ಶಕುಂತಲಾ ನಟರಾಜ್, ಜಿಲ್ಲಾ ಸಮಿತಿ ಸದಸ್ಯ ರಾಜೇಶ್ ಕಂಬೇಗೌಡ, ಶರತ್, ಮಂಜುನಾಥ್ ಜಿ.ಹೊಸಹಳ್ಳಿ ಇತರರು ಇದ್ದರು.
Comments are closed.