ಅಪ್ರಾಪ್ತೆ ಮೇಲೆ ದೌರ್ಜನ್ಯ ಎಸಗಿದ್ದ ಆರೋಪಿಗೆ ಶಿಕ್ಷೆ

195

Get real time updates directly on you device, subscribe now.


ತುಮಕೂರು: ಚೇಳೂರು ಹೋಬಳಿ ಬಿದರೆ ಸಮೀಪದ ಶಾಲೆಗೆ ತೆರಳುತ್ತಿದ್ದು ವಿದ್ಯಾರ್ಥಿನಿಗೆ ಶಾಲೆಗೆ ಬಿಡುವುದಾಗಿ ಹೇಳಿ ಬೈಕ್ ನಲ್ಲಿ ಕೂರಿಸಿಕೊಂಡ ಆರೋಪಿ ಶೇಖರಯ್ಯ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು ರುಜುವಾತಾದ ಹಿನ್ನೆಲೆಯಲ್ಲಿ ಆರೋಪಿಗೆ 4 ವರ್ಷ ಸಜೆ ಮತ್ತು ರೂ.95 ಸಾವಿರ ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.

ಗೌರವಾನ್ವಿತ ಅಧಿಕ ಜಿಲ್ಲಾ ಸತ್ರ ಎಫ್ ಟಿಎಸ್ ಸಿ (ಫೋಕ್ಸೋ) ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ್ದು, ಅಭಿಯೋಜನೆಯ ಪರ ವಿಚಾರಣೆ ಮಾಡಲಾಗಿ ಸಾಕ್ಷಿ ವಿಚಾರಣೆಯಿಂದ ಹಾಗೂ ಹಾಜರು ಪಡಿಸಿದ ದಾಖಲೆಗಳಿಂದ ಆರೋಪಿ ಶೇಖರಯ್ಯನಿಗೆ ಕಲಂ 8 ಮತ್ತು ಫೋಕ್ಸೊ ಆಕ್ಟ್ 363, 354 (ಎ) ಐಪಿಸಿ ಅಡಿಯಲ್ಲಿ ದೌರ್ಜನ್ಯ ಕಂಡು ಬಂದಿದ್ದು ನ್ಯಾಯಾಧೀಶೆ ಸಂಧ್ಯಾರಾವ್ ತೀರ್ಪು ಪ್ರಕಟಿಸಿದ್ದಾರೆ.

4 ವರ್ಷ ಸಜೆ, 95 ಸಾವಿರ ದಂಡ ವಿಧಿಸಿದ್ದು, ನೊಂದ ಬಾಲಕಿಗೆ 25 ಸಾವಿರ ಡಿಎಲ್ ಎಸ್ಎ ಪರಿಹಾರ ನೀಡಬೇಕೆಂದು ತೀರ್ಪು ನೀಡಿದೆ. ಆಶಾ ಕೆ.ಎಸ್ ವಿಶೇಷ ಸರ್ಕಾರಿ ಅಭಿಯೋಜಕಿ ವಾದ ಮಂಡಿಸಿದ್ದರು.

Get real time updates directly on you device, subscribe now.

Comments are closed.

error: Content is protected !!