ಗುಬ್ಬಿ: ಸರ್ಕಾರಿ ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ. ಅದನ್ನು ಸರ್ಕಾರ ಮಟ್ಟದಲ್ಲಿ ಸರಿಪಡಿಸಿ ಅವರ ಸಮಸ್ಯೆ ಬಗ್ಗೆ ಗಮನ ಹರಿಸುತ್ತಾರೆ ಎಂದು ಶಾಸಕರ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಮಡೇನಹಳ್ಳಿ, ಬ್ಯಾಡಗೆರೆ ಹಾಗೂ ಜವರೇಗೌಡನ ಪಾಳ್ಯ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ಹಾಗೂ ನೂತನ ಶಾಲೆಯ ಕಟ್ಟದ ಉದ್ಘಾಟನೆ ಮಾಡಿ ಮಾತನಾಡಿ, ಜನರ ಅಭಿಪ್ರಾಯವೆ ಚುನಾವಣೆಯಲ್ಲಿ ಮತದಾರರ ಮತವೇ ಅಂತಿಮವೇ ಹೊರತು ಯಾರೋ ಯಾರನ್ನು ಸೋಲಿಸಲು ಸಾಧ್ಯವಿಲ್ಲ. ಯಾರೇ ಸೋತರು ಅದಕ್ಕೆ ಅವರೇ ಹೊಣೆ ಹೊರಬೇಕು ಹೊರತು ಬೇರೆಯವರನ್ನ ಗುರಿ ಮಾಡಬಾರದು. ನನ್ನ ಪತ್ನಿ ಚುನಾವಣೆಯಲ್ಲಿ ಸೋತರೆ ಅದಕ್ಕೆ ಅವರು ಕಾರಣವೇ ಹೊರತು ಬೇರೆಯವರಲ್ಲ ಎಂದು ತಿಳಿಸಿದರು.
ಜಿ.ಹೊಸಹಳ್ಳಿ ಉಪಾಧ್ಯಕ್ಷ ನರಸಿಂಹ ಮೂರ್ತಿ ಮಾತನಾಡಿ, ಜವರೇಗೌಡನ ಪಾಳ್ಯದಲ್ಲಿ ಶಾಲೆಯ ಕಟ್ಟದ ನಿರ್ಮಾವಾಗಿದ್ದು ಇನ್ನೂ ಹಲವು ಅವಶ್ಯಕತೆ ಸಂಪನ್ಮೂಲ ಅಗತ್ಯವಿದ್ದು ಸಂಘ ಸಂಸ್ಥೆಗಳು ದಾನಿಗಳು ಇನ್ನೂ ಹೆಚ್ಚಿನ ಸಹಕಾರ ಮಾಡಿದರೆ ಗ್ರಾಮೀಣ ಭಾಗದ ಶಾಲೆಗಳು ಅಭಿವೃದ್ಧಿಯಾಗಲಿವೆ. ಇದಕ್ಕೆ ಎಲ್ಲರ ಸಹಕಾರ ಬೇಕಿದೆ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಹರ್ಷ, ನಾಗರಾಜ ಅರಸ್, ವೆಂಕಟೇಶ್, ಪ್ರಮೀಳಾ, ಗಂಗಾಮಣಿ, ಚಿಕ್ಕಮ್ಮ, ತುಮಕೂರು ಪಾಲಿಕೆ ಸದಸ್ಯೆ ಶ್ರೀನಿವಾಸ್, ಮುಖಂಡರಾದ ವೆಂಕಟಸ್ವಾಮಿ, ನಂಜಪ್ಪ, ಸೀನಪ್ಪ, ವೆಂಕಟೇಶ್, ರವಿ, ಜಯರಾಮ್, ಲಕ್ಷ್ಮಣ, ಎಸ್ಡಿಎಂಸಿ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷೆ ಮಮತಾ ಹಾಗೂ ಸದಸ್ಯರು ಗ್ರಾಮಸ್ಥರು ಹಾಜರಿದ್ದರು.
Comments are closed.