ಕುಣಿಗಲ್: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕುಣಿಗಲ್ ಕ್ಷೇತ್ರದಿಂದ ನಾನೇ ಅಭ್ಯರ್ಥಿ, ಈ ಬಗ್ಗೆ ಅನುಮಾನ ಬೇಡ ಎಂದು ಬಿಜೆಪಿ ಮುಖಂಡ ಹೆಚ್.ಡಿ.ರಾಜೇಶ್ ಗೌಡ ಹೇಳಿದರು.
ಶುಕ್ರವಾರ ತಾಲೂಕಿನ ಸಂತೇಪೇಟೆ ಉರಿಗದ್ದಿಗೇಶ್ವರ ಸ್ವಾಮಿ ಶಾಲಾ ಆವರಣದಲ್ಲಿ ಹುತ್ರಿದುರ್ಗ ಹೋಬಳಿಯ ಸಂತೇಪೇಟೆ ಶಾಲಾ ಆವರಣದಲ್ಲಿ ಹೆಚ್.ಡಿ.ರಾಜೇಶಗೌಡ ಅಭಿಮಾನಿ ಬಳಗ ಹುತ್ರಿದುರ್ಗ ಹೋಬಳಿ ವತಿಯಿಂದ ಹಮ್ಮಿಕೊಳ್ಳಲಾದ ಸ್ತ್ರೀಶಕ್ತಿ ಸಮಾಗಮ ಹಾಗೂ ಅಭಿನಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ತಾವೂ ಕುಣಿಗಲ್ ತಾಲೂಕಿನ ಅಲ್ಕೆರೆ ಗ್ರಾಮದ ಬಡ ರೈತ ಕುಟುಂಬದಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಉದ್ದಿಮೆ ನಡೆಸಿ ಕಷ್ಟಪಟ್ಟು ಮೇಲೆ ಬಂದಿದ್ದು, ಕಳೆದ ಹವು ದಶಕಗಳಿಂದ ತಾಲೂಕಿಗೆ ಬರುತ್ತಿದ್ದು ಯಾವುದೇ ಅಭಿವೃದ್ಧಿ ಆಗಿಲ್ಲದ ಕಾರಣ ಪತ್ನಿ ಕ್ಷೇತ್ರದ ಅಭಿವೃದ್ದಿ ಮಾಡಬೇಕೆಂಬ ಹೇಳಿದ್ದಲ್ಲದೆ ತಾವೂ ಸಹ ಈ ಕ್ಷೇತ್ರದ ಮಗನಾಗಿ ಕ್ಷೇತ್ರದ ಅಭಿವೃದ್ಧಿ ಮಾಡಲು ಮುಂದಾಗಿ ಈಗಾಗಲೆ ತಮ್ಮ ಕೈಲಾದ ರೀತಿಯಲ್ಲಿ ಹಲವು ಸೇವೆ ಮಾಡಿದ್ದೇನೆ. ಮತ್ತಷ್ಟು ಜನಪರ ಸೇವೆ ಮಾಡಲು ಅಧಿಕಾರ ಬೇಕಾಗಿರುವುದರಿಂದ ಮುಂದೆ ಬಿಜೆಪಿಯಿಂದ ಸ್ಪರ್ಧೆ ಬಯಸಿದ್ದು ಮಾತೃ ಸಮಾನರಾದ ಮಹಿಳೆಯರು ಹರಸಿ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಸಮಾರಂಭಕ್ಕೆ ಚಾಲನೆ ನೀಡಿದ ಬೆಟ್ಟಹಳ್ಳಿ ಮಠಾಧೀಶ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ನಮ್ಮ ದೇಶವೂ ಸನಾತನ ಧರ್ಮಾಧರಿತ ರಾಷ್ಟ್ರವಾಗಿದ್ದು, ಸ್ತ್ರೀಯರಿಗೆ, ಸ್ತ್ರೀಶಕ್ತಿಗೆ ಹೆಚ್ಚಿನ ಮನ್ನಣೆ, ಆದ್ಯತೆ ನೀಡುತ್ತೇವೆ. ಅದೇ ರೀತಿಯಲ್ಲಿ ಈ ಹೋಬಳಿಯ ಮಗನಾದ ರಾಜೇಶ್ಗೌಡರು ತಮ್ಮ ಹೋಬಳಿಯ ತಾಯಂದಿರು, ಅಕ್ಕ ತಂಗಿಯಂದಿರಿಗೆ ವಿಶೇಷ ಭೋಜನಾ ವ್ಯವಸ್ಥೆ ಮಾಡುವ ಜೊತೆಯಲ್ಲಿ ಶುಭ ಹಾರೈಸಿ ಬಾಗಿನ ನೀಡುತ್ತಿದ್ದಾರೆ ಎಂದರು.
ಹಂಗರಹಳ್ಳಿಯ ಬಾಲಮಂಜುನಾಥ ಸ್ವಾಮಿಜಿ ಮಾತನಾಡಿ ಮಠಗಳು, ರಾಜಕಾರಣಿಗಳು ಜಾತಿ ಹಾಗೂ ಜಾತ್ಯಾತೀತವಾಗಿರದೆ ಸೇವಾಮನೋಭಾವ ಹೊಂದಿರಬೇಕು. ಉಳ್ಳವರು ಅಗತ್ಯ ಇರುವವರಿಗೆ ಸೇವೆ ಮಾಡುವ ಮೂಲಕ ನೆರವಿಗೆ ನಿಂತು ಆಶ್ರಯದಾತರಾಗಬೇಕು. ಇಂತಹ ಮನೋಭಾವದ ವ್ಯಕ್ತಿಗಳು ಜನರ ವಿಶ್ವಾಸಕ್ಕೆ ಪಾತ್ರರಾಗುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ರಾಜೇಶ್ಗೌಡ ದಂಪತಿ ಸಹಸ್ರಾರು ಮಹಿಳೆಯರಿಗೆ ವಿಶೇಷ ಮಾಂಸಹಾರಿ, ಸಸ್ಯಹಾರಿ ಊಟದ ವ್ಯವಸ್ಥೆ ಮಾಡಿದ್ದಲ್ಲದೆ ಎಲ್ಲಾ ಮಹಿಳೆಯರಿಗೂ ಬಾಗಿನ ವಿತರಿಸಿದರು. ಮುಖಂಡರಾದ ಕೆ.ಕೆ.ರಮೇಶ್, ಹೆಚ್.ಎನ್.ನಟರಾಜ್, ಸಂತೇಪೇಟೆ ಸುರೇಶ, ವೆಂಕಟೇಶ, ಸತೀಶ, ರಂಗನಾಥ, ನಾಗೇಶ, ಭರತ್, ಉಮೇಶ, ಮಹೇಶ್ ಇತರರು ಇದ್ದರು.
Comments are closed.