ಸೂರಿಗಾಗಿ ಕೋಟಿ ಹೆಜ್ಜೆ ಪಾದಯಾತ್ರೆ

127

Get real time updates directly on you device, subscribe now.


ತುಮಕೂರು: ಸೂರಿಲ್ಲದ ಜನರನ್ನು ಗುರುತಿಸಿ ಅವರಿಗೆ ವಸತಿ ಒದಗಿಸುವುದು ಪ್ರತಿಯೊಂದು ನಾಗರಿಕ ಸರಕಾರದ ಕರ್ತವ್ಯವಾಗಿದೆ. ಆದರೆ ಸೂರಿಗಾಗಿ ಸಾವಿರಾರು ಹೆಜ್ಜೆಗಳನಿಟ್ಟು ಹೋರಾಟ ನಡೆಸಬೇಕಾದ ಅಗತ್ಯ ಸೃಷ್ಟಿಯಾಗಿರುವುದು ವಿಪರ್ಯಾಸದ ಸಂಗತಿ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ತಿಳಿಸಿದರು.

ನಗರದ ಟೌನ್ಹಾಲ್ ಮುಂಭಾಗದಲ್ಲಿ ಸೂರಿಗಾಗಿ ಕೋಟಿ ಹೆಜ್ಜೆ, ಸಿಪಿಐ ಹಮ್ಮಿಕೊಂಡಿರುವ ಪಾದಯಾತ್ರೆ ತುಮಕೂರಿಗೆ ಆಗಮಿಸಿದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿ, ಎಂತಹ ಬಲಿಷ್ಠ ಸರಕಾರಗಳನ್ನು ಮಂಡಿಯೂರುವಂತೆ ಮಾಡುವ ಶಕ್ತಿ ಚಳವಳಿಗಳಿಗೆ ಇದೆ. ಹಾಗಾಗಿ ಯಾರು ನಿರಾಶರಾಗದೆ ನಿರಂತರವಾಗಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಕೊರೊನಗೂ ಮುನ್ನ ಶಿರಾ ತಾಲೂಕು ತಾಳಗುಂದದಿಂದ ಆರಂಭವಾಗಿದ್ದ ಸೂರಿಗಾಗಿ ಕೋಟಿ ಹೆಜ್ಜೆ ಪಾದಯಾತ್ರೆಯನ್ನು ಸುಮಾರು 49 ದಿನಗಳ ನಂತರ ಸರಕಾರ ಲಾಕ್ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಕಳೆದ ಆರು ದಿನಗಳ ಹಿಂದೆ ಪುನಃ ಪಾದಯಾತ್ರೆ ಆರಂಭಗೊಂಡಿದ್ದು, ಮಾರ್ಚ್ 09 ರಂದು ಬೆಂಗಳೂರು ತಲುಪಲಿದ್ದು, ಅಂದು ಸ್ವಾತಂತ್ರ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕೃಷಿ ಕೂಲಿ ಕಾರ್ಮಿಕರ ಸಂಘಟನೆಯ ಎಸ್.ಎನ್.ಸ್ವಾಮಿ ಮಾತನಾಡಿದರು. ಅಧ್ಯಕ್ಷತೆಯನ್ನು ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ವಹಿಸಿದ್ದರು, ಜಿಲ್ಲಾ ಸಹಕಾರ್ಯದರ್ಶಿ ಜಿ.ಚಂದ್ರಶೇಖರ್ ಮತ್ತು ಜಿಲ್ಲಾ ಖಜಾಂಚಿ ಅಶ್ವಥನಾರಾಯಣ್ ಇತರರು ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ನೂರಾರು ಜನರು ನಗರದ ಸ್ವಾತಂತ್ರ ಚೌಕದಿಂದ ಟೌನ್ ಹಾಲ್ ವರೆಗೂ ಮರೆವಣಿಗೆ ನಡೆಸಿದರು.

Get real time updates directly on you device, subscribe now.

Comments are closed.

error: Content is protected !!