ಕುಣಿಗಲ್ ಪುರಸಭೆಯ ಬಜೆಟ್ ಮಂಡನೆ

129

Get real time updates directly on you device, subscribe now.


ಕುಣಿಗಲ್: ಪುರಸಬೆಗೆ 2023-24ನೇ ಸಾಲಿಗೆ ಉಳಿತಾಯ ಬಜೆಟನ್ನು ಪುರಸಭೆ ಅಧ್ಯಕ್ಷ ರಂಗಸ್ವಾಮಿ ಮಂಡಿಸಿದರು.
ಶನಿವಾರ ಪುರಸಭೆ ಸಭಾಂಗಣದಲ್ಲಿ ನಡೆದ 2023-24ನೇ ಸಾಲಿನ ಬಜೆಟ್ ಮಂಡನೆ ಸಭೆಯಲ್ಲಿ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಪಾಳ್ಯ ಶ್ರೀನಿವಾಸ್ ಪಟ್ಟಣದ ಜನರಿಗೆ, ಎಲ್ಲಾ ವರ್ಗದವರಿಗೂ ಒಳಿತು ಮಾಡುವ ನಿಟ್ಟಿನಲ್ಲಿ ಹಾಗೂ ಜನಪರ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಈ ಬಜೆಟ್ ಸಿದ್ಧಪಡಿಸಿದ್ದು ಇದರಲ್ಲಿನ ಯೋಜನೆಗಳ ಕಾರ್ಯಗತಕ್ಕೆ ಶಕ್ತಿಮೀರಿ ಶ್ರಮಿಸಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕೆಂದರು.

ಬಜೆಟ್ ಮಂಡಿಸಿದ ಪುರಸಭೆ ಅಧ್ಯಕ್ಷ ರಂಗಸ್ವಾಮಿ, ಒಟ್ಟು ಜಮೆ 81 ಕೋಟಿ 51 ಲಕ್ಷ 66 ಸಾವಿರದ 588 ರೂ. ಗಳ ಪೈಕಿ 80 ಕೋಟಿ 98 ಲಕ್ಷದ 20 ಸಾವಿರ ಖರ್ಚು ಮಾಡಲು ಉದ್ದೇಶಿಸಿ 53 ಲಕ್ಷದ 46 ಸಾವಿರದ 588 ರೂ. ಗಳ ಉಳಿತಾಯ ನಿರೀಕ್ಷೆ ಮಾಡಲಾಗಿದೆ ಎಂದು ಉಳಿತಾಯ ಬಜೆಟ್ ಮಂಡಿಸಿದರು.

2023-24ನೇಸಾಲಿಗೆ ಕೆಲ ಹೊಸ ಯೋಜನೆಗಳನ್ನು ಸೇರಿಸಲಾಗಿದ್ದು 41.37ಕೋಟಿ ವೆಚ್ಚದಲ್ಲಿ ಅಮೃತ್ ನಗರ ಕುಡಿಯುವ ನೀರಿನಯೋಜನೆ, ನಾಲ್ಕುಕೋಟಿರೂ.ವೆಚ್ಚದ್ಲಲಿ ನೂತನ ಪುರಸಭೆ ಬಸ್ನಿಲ್ದಾಣ ಕಾಮಗಾರಿ, ಪುರಸಭೆ ಉದ್ಯಾನವನ ಅಭಿವೃದ್ದಿಗೆ 65ಲಕ್ಷ, ಸ್ಮಶಾನ ಅಭಿವೃದ್ದಿಗೆ 15ಲಕ್ಷ, ಪ.ಜಾತಿ, ಪ.ಪಂಗಡದ ಸಮಗ್ರ ಅಭಿವೃದ್ದಿ ನಿಟ್ಟಿನಲ್ಲಿ ಒಟ್ಟಾರೆ 2.42ಕೋಟಿ ರೂ., ಸರ್ಕಲ್ ಅಭಿವೃದ್ದಿಗೆ 15ಲಕ್ಷ, ಜನಪದ ಉತ್ಸವಕ್ಕೆ 2ಲಕ್ಷ, ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಶವಸಂಸ್ಕಾರಕ್ಕೆ 7.50ಲಕ್ಷ., ರಂಗಮಂದಿರ ಅಭಿವೃದ್ದಿಗೆ 5ಲಕ್ಷ, ಗ್ರಾಮೀಣ ಕ್ರೀಡಾಕೂಟಕ್ಕೆ 2ಲಕ್ಷ, ದಸರಾ ಹಬ್ಬಾಚರಣೆಗೆ 75 ಸಾವಿರ, ಅಂಬೇಡ್ಕರ್ ದೀಕ್ಷಾಭೂಮಿಗೆ 1.75 ಲಕ್ಷ ಸೇರಿದಂತೆ ಪತ್ರಕರ್ತರ ಆರೋಗ್ಯ ವಿಮೆಗೆ 2 ಲಕ್ಷ ಮೀಸಲಿಡುವುದಾಗಿ ಘೋಷಣೆ ಮಾಡಿದ್ದಾರೆ.

ಬಜೆಟ್ ಮಂಡನೆ ನಂತರ ಪುರಸಭೆಯ ಬಿಜೆಪಿ ಸದಸ್ಯ ಕೋಟೆ ನಾಗಣ್ಣ, ಬಜೆಟ್ನಲ್ಲಿ ಕಳೆದ ಸಾಲಿನಲ್ಲಿ ಘೋಷಣೆಯಾದ ಕೆಲ ಯೋಜನೆಗಳು ಅನುಷ್ಠಾನವಾಗಿಲ್ಲ. ಈ ಬಾರಿಯೂ ಪ್ರಸ್ತಾಪಿಸಲಾಗಿದೆ. ಕಳೆದ ಸಾಲಿನ ಬಜೆಟ್ ಪ್ರಗತಿ ಏನಾಗಿದೆ. ಪಟ್ಟಣದಲ್ಲಿನ ವಾರ್ಡ್ಗಳಲ್ಲಿನ ರಸ್ತೆಗಳಿಗೆ ನಾಮಕರಣ, ಸರ್ಕಲ್ ಅಭಿವೃದ್ಧಿ, ಸಿಸಿಟಿವಿ ಅಳವಡಿಕೆ, ಶವಸಂಸ್ಕಾರ ವಾಹನದ ಯೋಜನೆ ಬಗ್ಗೆ ಮಾಹಿತಿ ಇಲ್ಲ. ಬಜೆಟ್ ಅಂಶಗಳು ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಪಾಳ್ಯ ಶ್ರೀನಿವಾಸ್, ಬಜೆಟ್ ಮಂಡನೆಯಲ್ಲಿ ತಮಗೆ ಸೂಕ್ತ, ಸಮರ್ಪಕ ಅವಕಾಶ ನೀಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಭೆಯಿಂದ ನಿರ್ಗಮಿಸಿದರು.
ಪುರಸಭೆ ಉಪಾಧ್ಯಕ್ಷೆ ಶಬನಾ, ಮುಖ್ಯಾಧಿಕಾರಿ ಶಿವಪ್ರಸಾದ್, ವ್ಯವಸ್ಥಾಪಕಿ ಗೀತಾ, ಅಕೌಂಟೆಂಟ್ ರೂಪಾ, ಅಭಿಯಂತರರಾದ ಬಿಂದುಸಾರ, ಸುಮಾ, ಚಂದ್ರಶೇಖರ ಮತ್ತು ಸಿಬ್ಬಂದಿ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!