ತುಮಕೂರು ವಿವಿಯ 1500 ವಿದ್ಯಾರ್ಥಿಗಳಿಗೆ ಭೋಜನ ಯೋಜನೆ: ವೆಂಕಟೇಶ್ವರಲು

126

Get real time updates directly on you device, subscribe now.


ತುಮಕೂರು: ತುಮಕೂರು ವಿಶ್ವ ವಿದ್ಯಾಲಯದಿಂದ ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲು ಮುಂದಾಗಿದೆ ಎಂದು ವಿವಿ ಉಪ ಕುಲಪತಿ ವೆಂಕಟೇಶ್ವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮೀಣ ಭಾಗದಿಂದ ಬಡ ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಲಿದ್ದು, ಒಂದೂವರೆ ಸಾವಿರ ವಿದ್ಯಾರ್ಥಿಗಳಿಗೆ ಊಟ ನೀಡುವ ಯೋಜನೆ ರೂಪಿಸಲಾಗಿದೆ. ಮುಂದೆ ನಗರದ ಎಲ್ಲಾ ಕಾಲೇಜುಗಳಿಗೆ ವಿಸ್ತರಿಸುವ ಗುರಿ ಇದೆ ಎಂದು ವೆಂಕಟೇಶ್ವರಲು ಹೇಳಿದರು.

ಪಾವಗಡ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಜಪಾನಂದ ಸ್ವಾಮೀಜಿ ಮಾತನಾಡಿ, ಹಳ್ಳಿಗಾಡಿನ ಮಕ್ಕಳು ಮಧ್ಯಾಹ್ನ ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ದಾನಿಗಳ ಸಹಕಾರದಿಂದ ಯೋಜನೆ ರೂಪಿಸಲಾಗಿದೆ. ನಗರದ ಶಿರಡಿ ಸಾಯಿ ಮಂದಿರದ ಅಡುಗೆ ಮನೆಯಲ್ಲಿ ಊಟ ಸಿದ್ಧವಾಗಲಿದೆ. ಇಡೀ ದೇಶದಲ್ಲಿ ಪ್ರಪ್ರಥಮ ಯೋಜನೆ ಇದಾಗಿದೆ, 1500 ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗಿದ್ದು, ಅವರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಎನ್ಎಸ್ಎಸ್, ಎನ್ಸಿಸಿ, ಸ್ಕೌಟ್ಸ್ ವಿದ್ಯಾರ್ಥಿಗಳು ಮುಂದೆ ನಿಂತು ಊಟದ ನಿರ್ವಹಣೆ ನೋಡಿಕೊಳ್ಳಲಿದ್ದಾರೆ. ಚತ್ತೀಸ್ ಘಡದಲ್ಲಿ ಈ ಯೋಜನೆ ಮಾಡಲು ಟ್ರೈ ಮಾಡಿದ್ದಾರೆ. ಆದರೆ ಇನ್ನು ಆಗಿಲ್ಲ. ಮುಂದೆ ವಿವಿ ಆವರಣದಲ್ಲಿ ಆಧುನಿಕ ಅಡುಗೆ ಮನೆ ನಿರ್ಮಾಣದ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಮಾರ್ಚ್ 6 ರಂದು ವಿವಿಯ ಡಾ.ಶಿವಕುಮಾರಸ್ವಾಮಿ ಸಭಾಂಗಣದಲ್ಲಿ ನಡೆಯುವ ಭೋಜನ ಯೋಜನೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಮೈಸೂರಿನ ಯಧುವೀರ ಕೃಷ್ಣದತ್ತ ಒಡೆಯರ್ ಆಗಮಿಸಲಿದ್ದಾರೆ. ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ, ನ್ಯಾ.ರತ್ನಕಲಾ, ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ತೇಜಸ್ವಿನಿ ಅನಂತಕುಮಾರ್ ಭಾಗವಹಿಸಲಿದ್ದಾರೆ ಎಂದರು.
ಕುಲಸಚಿವೆ ನಾಹಿದಾ, ಟೂಡಾ ಅಧ್ಯಕ್ಷ ಚಂದ್ರಶೇಖರ್, ಪತ್ರಕರ್ತ ನಾಗಣ್ಣ, ಪ್ರಾಂಶುಪಾಲ ಕರಿಯಣ್ಣ, ಸಿಬಂತಿ ಪದ್ಮನಾಭ್ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

Get real time updates directly on you device, subscribe now.

Comments are closed.

error: Content is protected !!